ಮನೆ ಹಾಸ್ಯ ಹಾಸ್ಯ

ಹಾಸ್ಯ

0

“ವಿವಾಹ ಬಂಧನಕ್ಕೂ ಪೋಲೀಸ್ ಬಂಧನಕ್ಕೂ ವ್ಯತಾಸ ಹೇಳು ನೋಡೋಣ” ಶಾಮಣ್ಣ ಕೇಳಿದ.

ಶೀನಣ್ಣ: ಪೋಲೀಸ್ ಬಂಧನವಾದಲ್ಲಿ ಕನಿಷ್ಠಪಕ್ಷ ಜಾಮೀನಿನ ಮೇಲಾದರೂ ಬಿಡಿಸಿಕೊಳ್ಳಬಹುದು- ವಿವಾಹ ಬಂಧನಕ್ಕೆ ಸಿಲುಕಿದರೆ ಪರಮಾತ್ಮನೇ ಕಾಪಾಡಬೇಕು!

***

Join Our Whatsapp Group

“ಈಗ ಏನು ಮಾಡುತ್ತಿದ್ದೀಯಾ ತಾಯೀ?” ಶ್ರೀರಾಮ ಅಹಲ್ಯೆಯನ್ನು ಕಾಡಿನಲ್ಲಿ ಸಂದರ್ಶಿಸಿ ಕೇಳಿದ:

ಅಹಲ್ಯೆ: “ಮೈಯಲ್ಲಾ ತಡವಿಕೊಂಡು ಈ ಕಾಡಿನಲ್ಲಿರುವ ನಾಯಿಗಳನ್ನೆಲ್ಲಾ ನಿರ್ಮೂಲ ಮಾಡಲು ಯೋಜನೆ ಹಾಕಿಕೊಳ್ಳುತ್ತಿದ್ದೇನೆ.”

ಶ್ರೀರಾಮ: “ಅದೇಕೆ ತಾಯೀ – ನಾಯಿಗಳ ಮೇಲೆ ಅಷ್ಟು ಕೋಪ?”

ಅಹಲ್ಯೆ: “ನಾನು ಇಲ್ಲಿ ಕಲ್ಲಾಗಿ ಬಿದ್ದಿದ್ದರೂ ಒದ್ದೆಯಾಗೋದು ತಪ್ಪಲಿಲ್ಲವಲ್ಲ?” ಈ ನಾಯಿಗಳ ಅವಾಂತರದಿಂದ!

***

ಭಕ್ತನೊಬ್ಬ ಹನುಮಂತನ ಗುಡಿಗೆ ಹೋಗುವಾಗ ಬಾಗಿಲಲ್ಲೇ ಚಪ್ಪಲಿಗಳನ್ನು ಬಿಟ್ಟು ಒಳಕ್ಕೆ ಹೋಗಿ ದರ್ಶನ ಪಡೆದು ಹಿಂದಕ್ಕೆ ಬಂದು ಚಪ್ಪಲಿ ಹಾಕಿಕೊಳ್ಳಲು ಹೋದರೆ ಚಪ್ಪಲಿಗಳೇ ನಾಪತ್ತೆ! ಅವು ಹೊಸ ಚಪ್ಪಲಿಗಳು. ತುಂಬಾ ಖಿನ್ನನಾಗಿ ಮತ್ತೆ ದೇವರ ಬಳಿ ಹೋಗಿ “ನಾನು ಎಷ್ಟು ಅಂತ ಚಪ್ಪಲಿ ಕೊಳ್ಳೋದು? ಈಗಾಗಲೇ ಹತ್ತಾರು ಜೊತೆ ಅಲ್ಲಿ-‌ಇಲ್ಲಿ ಸುತ್ತಾಡುವಾಗ ಕಳೆದು ಕೊಂಡೆ. ಈ ಸಂಕಷ್ಟ ದಿಂದ ನೀನೇ ಪಾರುಮಾಡಬೇಕು.” ಎಂದು ಮೊರೆ ಇಟ್ಟ. ಹನುಮಂತ ಪ್ರತ್ಯಕ್ಷವಾಗಿ, “ವತ್ಸಾ ಅಲ್ಲಿ, ಇಲ್ಲಿ ನಾನು ಯಾವಾಗಲಾದರೂ ಸುತ್ತುವುದನ್ನು ನೀನು ಕಂಡಿದ್ದೀಯಾ? ನನ್ನ ಹಾಗೆ ಹಾಯಾಗಿ ಯಾಕೆ ನೀನು ಇರಬಾರದು? ನನಗೆ ಚಪ್ಪಲಿಗಳ ಅಗತ್ಯವೇ ಇಲ್ಲ!” ಅಂದ.

ಹಿಂದಿನ ಲೇಖನಪ್ರತಿಭಟನೆಗೆ ಯಾರಿಗೂ ನಾವು ಅಡ್ಡಿ ಮಾಡುವುದಿಲ್ಲ. ಆದರೆ ಬಂದ್ ಮಾಡಲು ಅವಕಾಶವಿಲ್ಲ: ಡಿ ಕೆ ಶಿವಕುಮಾರ್
ಮುಂದಿನ ಲೇಖನನಾಳೆ ಎಲ್ಲಾ ಶಾಲಾ- ಕಾಲೇಜು ಗಳಿಗೆ ರಜೆ ಘೋಷಣೆ