ಮನೆ ದೇವಸ್ಥಾನ ಮಾಡಾಯಿಕಾವಿಲಮ್ಮ: ಭದ್ರಕಾಳಿ

ಮಾಡಾಯಿಕಾವಿಲಮ್ಮ: ಭದ್ರಕಾಳಿ

0

ಪೂರಂ ಆಚರಣೆಯ ಹಿನ್ನೆಲೆ

    ಉತ್ತರ ಕೇರಳದ ಒಂದು ಪ್ರಾಚೀನ ಹಾಗೂ ವೈಶಿಷ್ಟ್ಯ ಪೂರ್ಣವಾದ ಜಾನಪದ ಕಲೆಯಾಗಿದೆ ಪೂರಂ. ಇದು ಮೀನ ಮಾಸದ ಕಾರ್ತಿಕ ನಕ್ಷತ್ರದಿಂದ ಪೂರ್ವಾಷಾಡ ನಕ್ಷತ್ರದವರೇಗೆ ಒಂಭತ್ತು ದಿನಗಳಲ್ಲಿ ನಡೆಯುತ್ತದೆ. ಉತ್ತರ ಕೇರಳದಲ್ಲಿರುವ ದೇವಿ ಕ್ಷೇತ್ರಗಳಲ್ಲಿ ಮತ್ತು ಕಾವ್ ಅಥವಾ ಕಳಗಂ (ಸ್ತ್ರೀ ದೇವಗಳ ಆರಾಧನಾ ಸ್ಥಳಗಳು )ಗಳಲ್ಲಿ ಈ ಉತ್ಸವವನ್ನು ವೈಭವೋಚಿತವಾಗಿ ಆಚರಿಸುತ್ತಾರೆ.

Join Our Whatsapp Group

     ಮಹಾಶಿವನ ತಪೋಭಂಗ ಮಾಡಿದ ಕಾಮಧೇನು ಸುಟ್ಟು ಬಸ್ಮವಾದನು. ಶಿವ ಪಾರ್ವತಿಯರ ಮಿಲನದಿಂದ ಜನಿಸಿದ ಕುಮಾರನಿಂದ ಲೋಕಕಂಟಕನಾದ ತಾರಾಕಾಸುರನು ವಧಿಸಲ್ಪಟ್ಟು ದೇವತೆಗಳು ಕ್ಷೇಮದಿಂದ ಕಾಲ ಕಳೆಯುತೊಡಗಿದರು. ಆದರೆ ಆ ಸುಖ ಹೆಚ್ಚು ದಿನ ಉಳಿಯಲಿಲ್ಲ ಕಾಮದೇನು ಬೆಂದು ಹೋದ ಒಡನೆಯೇ ಮೂರು ಲೋಕಗಳ ಸ್ಥಿತಿಯು ನಿಶ್ಚಲವಾಯಿತು. ಪ್ರಕೃತಿಯಲ್ಲಿರುವ ಹೂ, ಗಿಡ,ಮರ ಬಳ್ಳಿಗಳು ಚಿಗುರಲಿಲ್ಲ. ದೇವ ಮಾನವರುಗಳ ಸಹಿತ ಕಾಮ ದಾಕಾಂಕ್ಷೆ ಇಲ್ಲದೆ ಸಮಸ್ತ ಜೀವಕೋಟಿಗಳಲ್ಲಿ ಸಂತತಿ ಯಿಲ್ಲದಾತಾಯಿತು. ಸ್ತ್ರೀಯರೆ ಲ್ಲರೂ ಋತುವತಿಯಾರಾಗದೆ ಕನ್ಯೆಯರಾಗಿಯೇ ಉಳಿದರು. ಇದರಿಂದ ಭಯಭೀತರಾದಂತಹ ದೇವತೆಗಳು ಲೋಕರಕ್ಷಕನಾದ ಮಹಾವಿಷ್ಣುವಿನಲ್ಲಿ ಮೊರೆಯಿಟ್ಟರು. ಆದರೆ ರುದ್ರನ ಕೋಪಕ್ಕೆ ಬಲಿಯಾದ ಕಾಮನ ಪುನರ್ ಸೃಷ್ಟಿಗೆ ಮಹಾವಿಷ್ಣುವು ಉದಾಸೀನ ತಾಳಿದನು. ಆಗ ಈ ಮಹಾತ್ಕಾರ್ಯವು ಮಹಾ ವಿಷ್ಣುವಿನಿಂದಲೇ ಸಾಧ್ಯವೆಂದು ದೇವತೆಗಳು ಆತನನ್ನು ಹಾಡಿ ಹೊಗಳಿ ಮನವೊಲಿಸಿದ ನೃತ್ಯ ವಿಧಾನದ ಆಚರಣೆಯೇ ‘ಕೇರಳದ ಪೂರಂ ಹಬ್ಬ’ದ ಆಚರಣೆಯ ಸಂಕೇತವಾಗಿದೆ.

    ಮಹಾವಿಷ್ಣುವು ದೇವತೆಗಳ ಮೊರೆಗೆ ಹಿಂಜರಿದಾಗ ದೇವತೆಗಳೆಲ್ಲಾ ಮಂತ್ರಾಲೋಚನೆ ಮಾಡಿ ಸಂತಾನೋತ್ಪತ್ತಿಯಲ್ಲಿ ಸ್ತ್ರೀಯರದೇ ಪ್ರಮುಖ ಪಾತ್ರವಾದ ಕಾರಣ ಅವರನ್ನೇ ಮುಂದಿಟ್ಟುಕೊಂಡು ಕಾರ್ಯ ಪ್ರವೃತ್ತಿಯರಾದರು. ದೇವಲೋಕದಿಂದ ಆರು ಮಂದಿ ಸುಂದರಿಯರು, ಭೂಲೋಕದಿಂದ ಆರು ಮಂದಿ ನಾರೀಮಣಿಯರು, ಪಾತಾಳದಿಂದ ಆರು ಮಂದಿ ಸುಂದರ ಕನ್ಯೆಯರು ಹೀಗೆ 18 ನಾರೀಮಣಿಯರನ್ನು ಒಟ್ಟುಗೂಡಿಸಿ ಮಹಾವಿಷ್ಣುವಿನ ಶಯನಾಸನದ ಸುತ್ತಲೂ ಅವನನ್ನು ಹೊಗಳುವ ಹಾಡನ್ನು ಹಾಡಿ ನರ್ತನ ಮಾಡಲು ಪ್ರೇರೇಪಿಸಿದರು. ಆ ಹದಿನೆಂಟು ಸುಂದರಾಂಗಿಯರು ಹಾಡಿ ಹೊಗಳಿದ ಪ್ರಭೇದಗಳನ್ನೇ  18 ತಟ್ಟು (ಪ್ರಭೇದ)ಗಳಾಗಿ ಪೂರಕ್ಕಳಿಯಲ್ಲಿ ಆಡಿ ತೋರಿಸುವುದಾಗಿದೆ. ದೇವತೆಗಳ ಸಮ್ಮುಖದಲ್ಲಿ ಆ ಸ್ತ್ರೀಯರ ಗಾಯನ ನೃತ್ಯಗಳಿಂದ ಸಂಪ್ರೀತನಾದ ಮಹಾವಿಷ್ಣು ಪ್ರಸನ್ನನಾಗಿ ‘ಕಾಮದೇವನು ಅನಂಗನಾಗಿಯೇ ಪ್ರಪಂಚದ ಸಮಸ್ತ ಜೀವಕೋಟಿಗಳಲ್ಲಿ ಕಾರ್ಯಪ್ರವೃತನಾಗಲಿ, ಆದರೆ ಆತನ ರೂಪವನ್ನು ಕಾಣಲಾರಿರಿ ಆತನು ಮನಸಿಜನಾಗಿಯೇ ಇರುತ್ತಾನೆ. ಇನ್ನು ಮುಂದೆ ಕಾಮಕ್ಕೆ ಕಣ್ಣು ಮತ್ತು ರೂಪದ ಅವಶ್ಯಕತೆಯಿರದಿರಲಿ. ಆದರೆ ಕಾಮದೇವನ ದಹನದ ನಂತರ ದುರುಳ ಶಂಭರಾಸುರನ ಸೆರೆಯಲ್ಲಿರುವ ಕಾಮನ ಮಡದಿಯಾದ ರತಿದೇವಿಯ ಬಂಧನವನ್ನು ವಿಮೋಚಿಸಲು ಮುಂದೆ ನನ್ನ ಕೃಷ್ಣವತಾರದಲ್ಲಿ ಆತನು ನನಗೆ ಮಗನಾಗಿ ಪ್ರದ್ಯುಮ್ನನೆಂಬದು ನಾಮಧೇಯದಿಂದ ಅವತರಿಸಲಿರುವ ಅವನಲ್ಲಿ ಮನ್ಮಥನ ಸೌಂದರ್ಯತಿಶ ಯವನ್ನು ಕಾಣಬಹುದು ’ಎಂದು ಅಭಯವಿತ್ತನು.

    ಹಾಗೆ ಕಾಮದೇವನು ಮುಂದೆ ಶ್ರೀ ಕೃಷ್ಣ ಪರಮಾತ್ಮನಿಗೆ ಪತ್ನಿಯಾದ ರುಕ್ಮಿಣಿ ದೇವಿಯಲ್ಲಿ ಪ್ರದ್ಯುಮ್ನನಾಗಿ ಜನಿಸಿ ಬಂದನು. ಅವನನ್ನು ಚಿಕ್ಕ ಮಗುವಾಗಿರುವಾಗಲೇ ಶಂಭರಾ ಎಂಬ ರಾಕ್ಷಸನು ಮಾಯೆಯಿಂದ I ಎತ್ತಿಕೊಂಡು  ಹೋದನ್ನು ಸಮಸ್ತ ದ್ವಾರಕ್ಕೆಯು ದುಃಖಸಾಗರದಲ್ಲಯಿತು. ಮೊದಲೇ ಶಂಭರಾಸುರನ ಸೆರೆಯಲ್ಲಿದ್ದ ರತಿದೇವಿಗೆ ಕೂಸಾಗಿರುವ ಕಾಮನ್ನು ದೊರೆತು ಆಕೆಯು ಅವನನ್ನು ಲಾಲಿಸಿ ಪಾಲಿಸಿ ಬೆಳೆಸಿದಳು. ಮುಂದೆ ಯುವಕನಾದ ಪ್ರದ್ಯುಮ್ಮನು ಶಂಭರಾಸುರನನ್ನು ಕೊಂದು  ರತಿ ದೇವಿಯೊಂದಿಗೆ ಮರಳಿ ದ್ವಾರಕಕ್ಕೆ ಬಂದನು. ಹೊಸ ಮದುಮಕ್ಕಳ ಆಗಮನದ ಪ್ರೀತಿಗಾಗಿ ಶ್ರೀ ಕೃಷ್ಣನ ಅಣತಿಯಂತೆ 9 ದಿನಗಳ ವಸಂತೋತ್ಸವವು ಆಚರಿಸಲ್ಪಟ್ಟಿತು. ಇದರ ಆಚರಣಾ ಸಂಕೇತವೇ ಪೂರಂ ಎಂಬ ವಿವರವು ಈ ಉತ್ಸವಾಚರಣೆಯ ಪೌರಾಣಿಕ  ಹಿನ್ನೆಲೆಯಾಗಿದೆ.

   ‘ಪೂರಂ’ ಹಬ್ಬವನ್ನು ದೇವಿ ಕ್ಷೇತ್ರಗಳಲ್ಲಿ ದೇವಿ ಸಂಕಲ್ಪದ ದೇವಸ್ಥಾನಗಳಲ್ಲಿ ಪ್ರಾಚೀನದಿಂದಲೇ ನಡೆದು ಬಂದ ಪದ್ಧತಿ. ಕ್ರಮದಲ್ಲಿ ಗಂಡಸರು ಮಾತ್ರ ಹಾಡಿ ನರ್ತಿಸುವ ಕ್ರಮವನ್ನು “ಪೂರಕ್ಕಳಿ” ಎನ್ನುತ್ತಾರೆ ಇದು ಕಾಣುವವರಿಗೆ ಉತ್ಸಾಹದಾಯಕವೂ, ಭಕ್ತಿ ಪ್ರಧಾನವೂ ಆಗಿರುವ ಒಂದು ಕಲೆಯಾಗಿದೆ. ದೇವೀ ಕ್ಷೇತ್ರಗಳ ರಾಜಾಂಗಣದಲ್ಲಿ ಎದುರಿನಲ್ಲಿ ಇದ್ದಾಕ್ಕಾಗಿಯೇ ಸಜ್ಜೀಕರಣಗೊಳಿಸಿದ ಚಪ್ಪರದಲ್ಲಿ ಪೂರಕ್ಕಳಿಯನ್ನಾಡುವುದಾಗಿದೆ.