ಮನೆ ಪೌರಾಣಿಕ ಪೃಥು ಚಕ್ರವರ್ತಿಯ ಚರಿತೆ

ಪೃಥು ಚಕ್ರವರ್ತಿಯ ಚರಿತೆ

0

ವೈಷ್ಣವ ಭಕ್ತಿಯುಳ್ಳ ಮುನಿಗಳು  ವಿಶ್ವ ಸಂರಕ್ಷಣಾರ್ಥಕವಾಗಿ ಆಚರಿಸಿದ ಈ ವಿಚಿತ್ರಯಾಗವು ಶೀಘ್ರ ಕಾಲದಲ್ಲಿಯೇ ಸಫಲವಾಯಿತು ವೇನುವಿನ ದಕ್ಷಿಣ ಭಾಗದ ಭುಜದಿಂದ ಸತ್ತ್ವ ಗುಣೋಪೇತನು,  ಪರಮಧರ್ಮ ಶೀಲನು.ಅಜೇಯ ಪರಾಕ್ರಮಶಾಲಿಯಾದಂತಹ ಪೃಥು ಉದ್ಭವಿಸಿದನು. ಈ ರೀತಿ ಉದ್ಭವಿಸಿದ ಪೃಥುವಿನ ಜನನವು ಲೋಕಾನಂದ ಭರಿತವಾಗಿ ನಡೆಯಿತು.ಎಂದೋ ಅಂಗ ಮಹಾರಾಜನು ಪದವೀ ತ್ಯಾಗವನ್ನು ಮಾಡಿದ ನಂತರ ಮತ್ತೆ ಇಷ್ಟು ದಿನಗಳಿಗೆ ಧರ್ಮ ಸಂಸ್ಥಾಪನಾಕಾರನಾದ ಮಹಾರಾಜನು ಜನಿಸಿದ್ದಾನೆಂದು ದೇವತೆಗಳೆಲ್ಲರೂ ಮಹಾದಾನಂದಬರಿತವಾಗಿ ಹೃದಯಾರವಿಂದರಾಗಿ ಪುಷ್ಪ ವೃಷ್ಠಿಯನ್ನು ಸುರಿಸಿದರು. ದಿಗಂತಗಳಲ್ಲಿ ದೇವದುಂಬಿಗಳು ಪ್ರತಿದ್ವನಿಸಿದವು.ಸುರ,ಗುಡ, ಯಕ್ಷ,ಗಂಧರ್ವ, ಕಿನ್ನರ, ಕಿಂಪು ಪುರುಷರೆಲ್ಲರೂ ಉತ್ಸಾಹ ಉಲ್ಲಾಸಗಳಿಂದ ನೃತ್ಯ ಮಾಡಿದರು.

Join Our Whatsapp Group

ಹುಟ್ಟಿನಿಂದಲೇ ಸಂಪ್ರಾಪ್ತ ಯೌವ್ವನನಾದ ಪೃಥುವಿನ ಅವತರಣೆಗೆ  ಸಂತೋಷಪಟ್ಟು ಅಮರರು ಆತನಿಗೆ ಒಂದು ಅಸಮಾನ್ಯವಾದಂತಹ ಖಡ್ಗವನ್ನು ಅಭೇದ್ಯವಾದ ಕೋದಂಡವನ್ನು, ಅಕ್ಷಯವಾದ ಬಾಣ ತೋಣೀರಗಳನ್ನು, ಅಕ್ಷೀಣವಾದ ವಜ್ರಕವಚವನ್ನು ಶತ್ರುವನ್ನು ಗೆಲ್ಲಲು ಸಕಲ ಆಯುಧಗಳನ್ನು ಪ್ರಸಾದಿಸಿದರು. ಮಹರ್ಷಿಗಳ ಮಂತ್ರಶಕ್ತಿಯಿಂದ ಮಧಿಸಲ್ಪಟ್ಟ ಶರೀರವುಳ್ಳವನಾಗಿ, ವೇನುವಿಗೆ ನಿಷಾದೋತ್ಪಾದನೆಯಿಂದಲೇ ಪಾಪಶೇಷವೆಲ್ಲಾ ನಾಶವಾಗಿ, ಧರ್ಮಪರನಾದ ಪುತ್ರನ ಜನನದಿಂದ ಸದ್ಗತಿಯು ಪ್ರಾಪ್ತಿಯಾಯಿತು. ಮುನಿಗಳು ಅಷ್ಟೋತ್ತರ ಶತ ನದೀಜಲವನ್ನು ತೀರ ವೃತ್ತಿಕೆಯನ್ನು ತಂದು ಸುವರ್ಣಮಣಿಪಾತ್ರಿಕೆಗಳೊಂದಿಗೆ

 ಮಂತ್ರ ಜಲವನ್ನು ಅಭಿಷೇಕಿಸಿ ಪೃಥು ಚಕ್ರವರ್ತಿಯನ್ನು ಸಿಂಹಾಸನಾಧೀನನ್ನಾಗಿಸಿದರು. ಲೋಕನಂದಭರಿತವಾದ ಆ ಪಟ್ಟಾಭಿಷೇಕವನ್ನು ಸಾಕ್ಷತ್  ಶ್ರೀ ಪದ್ಮಗರ್ಭನೇ ಸುಲಕ್ಷಣವಾಗಿ ನಿರ್ವಹಿಸಿ, ಶ್ರೀ ಹರಿಯ ಚಕ್ರವನ್ನು ಆತನ ದಕ್ಷಿಣ ಕರದಲಲ್ಲಿಟ್ಟು ಆಶೀರ್ವದಿಸಿದನು. ಸಾಮಂತ ಮಹೀಪಾಲನಾ ವರ್ಗವೆಲ್ಲಾ ಸಾರ್ವಭೌಮನಿಗೆ ಉಚಿತ ಬಹುಮಾನಗಳನ್ನು ತಮ್ಮ ತಮ್ಮ ಶಕ್ತಿಮೀರಿ ಸಮರ್ಪಿಸಿದರು. ಲೋಕೋತ್ತವಾದ ತನ್ನ ಪ್ರದುರ್ಭಾವವು  ಸಾರ್ಥಕವಾಗುವಂತೆ ಪೃಥು ಮನುವಿನ ಮಾರ್ಗದಲ್ಲಿ ರಾಜ್ಯಪರಿಪಾಲನೆಯನ್ನು ಮಾಡಿ  ಜನರಂಜಕವಾಗಿ ನಿರ್ವಹಿಸಿ ಧರ್ಮವನ್ನು ನಾಲ್ಕು ಪಾದಗಳ ಮೇಲೆ ನಡೆಸಿದನು. ಆತನ ಪರಿಪಾಲನೆಯಲ್ಲಿ ಪ್ರಕೃತಿಯು ಆಯಾ ಋತುಗಳಲ್ಲಿ  ಸಹಕರಿಸಿ ಧರಣಿಯು ಸಸ್ಯಶ್ಯಾಮಳವಾಯಿತು.

ಪಾತಕ ಕೃತ್ಯಗಳಿಂದ ತೇಜಸ್ಸನ್ನು ಕಳೆದುಕೊಂಡದ್ದಂತಹ ಲೋಕದಲ್ಲಿ ಮತ್ತೆ ಪ್ರಭಾವವನ್ನು ನಿಲ್ಲೆಸಬೇಕೆಂದು ಪೃಥು ಚಕ್ರವರ್ತಿಯು ಪೃಥುಪೈತಾಮಹ ಎಂಬ ಮಹಾಯಜ್ಞವನ್ನು ಸಂಕಲ್ಪಿಸಿದನು ಅನೂಹ್ಯವಾದ ವೇದ ಮಂತ್ರಗಳನ್ನು ಉಪಸನೆ ಮಾಡಿ ಜೀವನ್ಮಕ್ತಿಗಳಾದ ಋತ್ವಿಜರನ್ನು ಆಹ್ವಾನಿಸಿ ತಾನೇ ಕರ್ತನಾಗಿ, ಶಾಸ್ತ್ರೋಕ್ತವಾಗಿ ಈ ಮಹಾಯಜ್ಞವನ್ನು ನಿರಾಯಾಸವಾಗಿ ಅನುಷ್ಠಾನ ಮಾಡಿದನು. ಆ ಶುಭ ಸಮಯದಲ್ಲಿ ಕ್ರತು ಹೋಮಕುಂಡದಲ್ಲಿ ಆಹುತಿಯಾಗಿ ಅರ್ಪಿಸಿದ ಸಂತಾನೋದಯ ಮಂತ್ರಗಳಿಂದ ಯಜ್ಞಗುಂಡದಿಂದ ಸೂತ, ಮಗಧರೆಂಬ ನಾಮಧೇಯಗಳೊಂದಿಗೆ ಇಬ್ಬರು ಶಿಶುಗಳು ಉದಯಿಸಿದರು.
ಈ ರೀತಿ ಜನಿಸಿದ ಆ ಶಿಶುಗಳ ದರ್ಶನೀಯವಾದ ಪ್ರಸನ್ನ ತೇಜಸ್ಸು, ನೇತ್ರನಂದವಾದ ರೂಪ ಸೌಂದರ್ಯಕ್ಕೆ ಮುಗ್ಧರಾದ ಮುನಿಪ್ರವರರು ಅವರಿಬ್ಬರನ್ನು ಆಶೀರ್ವದಿಸಿದರು ವಿಶ್ವ ಶ್ರೇಯಸ್ಸನ್ನು ಸಂಕಲ್ಪಿಸಿ, ಪೃಥುವು ನಿರ್ವಹಿಸಿದ ಮಹಾ ಯಜ್ಞದಲ್ಲಿ ಆವಿರ್ಭವಿಸುವ ಮಹಾವಕಾಶವು ನಿಮಗೆ ಲಭಿಸಿದೆ. ಆತತ್ಪಣ್ಯದಿಂದ ಚಿರಂಜೀವಿಗಳಾಗಿ ಜೀವಿಸಿರಿ.ಪೃಥುವಿನ ಯಶೋಗಾಥೆಯನ್ನು ಗಾನ ಮಾಡಿ ಧನ್ಯರಾಗಿರಿ ಎಂದು ಪ್ರೀತಿ ಆದರಣೆಗಳೊಂದಿಗೆ ಆದೇಶಿಸಿದರು.
ಮಹರ್ಷಿಗಳ ಆಶೀರ್ವಾದಗಳಿಂದ, ಸೂತ, ಮಾಗಧರ ಸ್ತೋತ್ರ ಪಠನದಿಂದ ಯೋಗ್ಯವಾದ ಸನ್ಮಾರ್ಗದಲ್ಲಿ ಜೀವನವನ್ನು ರೂಢಿಸಿಕೊಂಡು ಪೃಥು ಚಕ್ರವರ್ತಿಯು ಪ್ರಶಂಸಶನೀಯವಾಗಿ ರಾಜ್ಯಪಾಲನೆಯನ್ನು ಮಾಡಿದನು. ಅನೇಕ ಮಹಾಕ್ರತುಗಳನ್ನು ಅನುಷ್ಠಾನ ಮಾಡಿ, ಅತಿಥಿಗಳಿಗೆ ಬೋರಿ ದಕ್ಷಿಣೆಗಳನ್ನು ಕೊಟ್ಟು ಸರ್ವಲೋಕಗಳಿಗೂ ಒಳಿತನ್ನುಂಟುತಮಾಡಿದನು ಈ ರೀತಿಯಾಗಿ ಧರ್ಮವಿಷ್ಟಾನ ನಿಷ್ಠಾ ಗರಿಷ್ಠನಾಗಿ ಪಖಥು ಚಕ್ರವರ್ತಿ ಸರ್ವ ಸಮಸ್ತ ಭೂಮಂಡಳವನ್ನು ಸಮರ್ಥಯುತವಾಗಿ ಪಾಲಿಸುತ್ತಿದ್ದ ದಿನಗಳಲ್ಲಿ ಒಂದು ಆಶ್ಚರ್ಯಕರವಾದ ಘಟನೆಯು ನಡೆಯಿತು.
ಒಮ್ಮೆ ಆಕಸ್ಮಿಕವಾಗಿ ಪೃಥು ಆಸ್ಥಾನಕ್ಕೆ ಶೋಕತಪ್ತ ಚಿತ್ತರಾಗಿ ಕೆಲವು ಪ್ರಜೆಗಳು ರೋಧನೆಯಿಂದ ಆಲಾಪಿಸುತ್ತಾ ಬಂದರು. ಹಸಿವು, ಬಾಯಾರಿಕೆಗಳ ತೀವ್ರ ನೋವಿನಿಂದ ನರಳುತ್ತಾ ನೆಲಕ್ಕೆ ಬೀಳುವಂತಿದ್ದ ಅವರ ದೇಹವನ್ನು ಚರ್ಮಸ್ಥಿಕೆಗಳು ಉಳಿದಿರುವ ಜೀವಶ್ವವಗಳಂತೆ ಇದ್ದವು ಅವರ ಮನಸ್ಸಿನಲ್ಲಿ ದೈನ್ಯ ವಿಷಾದಗಳನ್ನು ಪ್ರಕಟಿಸುತ್ತಿ ದುಃಖಾಶ್ರುಗಳನ್ನು ನೋಡಿ ಚಕ್ರವರ್ತಿಯು ವಿಲವಿಲನೆ ಒದ್ದಾಡಿದನು. ಆ ರೀತಿ ಶ್ರೀತರಾಗಿ ಬಂದವರು ಪ್ರಭುಗಳೊಂದಿಗೆ,, ಪ್ರಭು ಲೋಕದಲ್ಲಿ ಎಲ್ಲಾ ಕಡೆಗಳಲ್ಲಿಯೂ ವಾರಿದ್ರ್ಯ ವು ತಾಂಡವ ವಾಡುತ್ತಿದೆ. ನಮ್ಮ ಕಷ್ಟಗಳಿಗೆ ಮಿತಿಯೇ ಇಲ್ಲ. ಮಹಾರಾಜ ಪ್ರಕೃತಿಯ ವಿಕೋಪಗಳು ಸಂಭವಿಸಿ ನಮ್ಮ ಬೆಲೆಗಳೆಲ್ಲವೂ ನಾಶವಾಗಿದವೆ.ಭೂಮಿಯು ಎಂದು ನಮ್ಮ ಮೇಲೆ ಇಂತಹ ಕ್ರೌರ್ಯವನ್ನು ತೋರಿಸಲಿಲ್ಲ