ಮನೆ ರಾಷ್ಟ್ರೀಯ ಪ್ಯಾನ್ ಕಾರ್ಡ್ ‘ನೊಂದಿಗೆ ಆಧಾರ್‌  ಲಿಂಕ್ ಮಾಡಲು ಮೇ 31 ಕೊನೆ ದಿನ

ಪ್ಯಾನ್ ಕಾರ್ಡ್ ‘ನೊಂದಿಗೆ ಆಧಾರ್‌  ಲಿಂಕ್ ಮಾಡಲು ಮೇ 31 ಕೊನೆ ದಿನ

0

ನವದೆಹಲಿ: ಹೆಚ್ಚಿನ ದರದಲ್ಲಿ ತೆರಿಗೆ ಕಡಿತ ತಪ್ಪಿಸಲು ಮೇ 31ರೊಳಗೆ ಸಾರ್ವಜನಿಕರು ತಪ್ಪದೇ ಪ್ಯಾನ್ ಕಾರ್ಡ್ ​ನೊಂದಿಗೆ ಆಧಾರ್‌ ಸಂಖ್ಯೆಯನ್ನು ಲಿಂಕ್ ಮಾಡುವಂತೆ ಆದಾಯ ತೆರಿಗೆ ಇಲಾಖೆ (ಐಟಿ) ಮಂಗಳವಾರ ತೆರಿಗೆದಾರರಿಗೆ ತಿಳಿಸಿದೆ.

Join Our Whatsapp Group

ಆದಾಯ ತೆರಿಗೆ ನಿಯಮಗಳ ಪ್ರಕಾರ, ಶಾಶ್ವತ ಖಾತೆ ಸಂಖ್ಯೆ (PAN) ಅನ್ನು ಬಯೋಮೆಟ್ರಿಕ್ ಆಧಾರ್‌ನೊಂದಿಗೆ ಲಿಂಕ್ ಮಾಡದೇ ಇದ್ದರೆ, ಟಿಡಿಎಸ್ (ಮೂಲದಲ್ಲೇ ತೆರಿಗೆ ಕಡಿತ) ಅನ್ನು ಅನ್ವಯಿಸುವ ದರಕ್ಕಿಂತ ಎರಡು ಪಟ್ಟು ಕಡಿತಗೊಳಿಸಲಾಗುತ್ತದೆ. ಅಂದರೆ, ಶೇ.10ರ ಬದಲಾಗಿ ಶೇ.20ರಷ್ಟು ಟಿಡಿಎಸ್‌ ಮಾಡಲಾಗುತ್ತದೆ ಎಂದು ಹೇಳಿದೆ.

ಕಳೆದ ತಿಂಗಳು ಆದಾಯ ತೆರಿಗೆ ಇಲಾಖೆ ಈ ಕುರಿತು ಮೊದಲ ಸುತ್ತೋಲೆ ಹೊರಡಿಸಿದೆ. ತೆರಿಗೆದಾರರು ಮೇ 31ರೊಳಗೆ ತಮ್ಮ ಪ್ಯಾನ್ ಜೊತೆಗೆ ಆಧಾರ್‌ ಲಿಂಕ್ ಮಾಡಿದರೆ ಹೆಚ್ಚಿನ ಟಿಡಿಎಸ್‌ ಕಡಿತಕ್ಕೆ ಯಾವುದೇ ಕ್ರಮ ತೆಗೆದುಕೊಳ್ಳುವುದಿಲ್ಲ ಎಂದಿತ್ತು. ಇದೇ ವೇಳೆ, ಬ್ಯಾಂಕ್‌ಗಳು ಹಾಗು ಹಣಕಾಸು ವ್ಯವಹಾರ ನಡೆಸುವ ಇತರೆ ಸಂಸ್ಥೆಗಳು ಕೂಡಾ ವ್ಯವಹಾರದ ವಿವರವಾದ ಮಾಹಿತಿ ಸಲ್ಲಿಸಬೇಕು ಎಂದು ಸೂಚಿಸಿತ್ತು.