ಮನೆ ಸಾಹಿತ್ಯ  ನಿಮ್ಮ ಸ್ವಂತ ಕರ್ಚಿನಲ್ಲಿ ಪ್ರಾಮಾಣಿಕ ಸೇವೆ ಸಲ್ಲಿಸಿ

 ನಿಮ್ಮ ಸ್ವಂತ ಕರ್ಚಿನಲ್ಲಿ ಪ್ರಾಮಾಣಿಕ ಸೇವೆ ಸಲ್ಲಿಸಿ

0

ಒಂದು ಕಾಲದಲ್ಲಿ ಒಬ್ಬ ಪ್ರಾಮಾಣಿಕ ಭಕ್ತನಿದ್ದನು, ಅವನಿಗೆ ಶಿಷ್ಯತ್ವ ಅನುಗ್ರಹಿಸಿದ ಗುರು ಆತನ ಕಿವಿಯಲ್ಲಿ ಗೌಪ್ಯ ಮಂತ್ರ ಬೋಧಿಸಿ ಅದನ್ನು ಬೇರಾರಿಗೂ ಬಹಿರಂಗ ಪಡಿಸದಂತೆ ಎಚ್ಚರಿಸಿದನು.

Join Our Whatsapp Group

 “ನಾನು ಹಾಗೆ ಮಾಡಿದರೆ ಏನಾಗುತ್ತದೆ” ಎಂದು ಭಕ್ತನು ಕೇಳಿದನು.

 ಗುರು ಹೀಗೆ ಹೇಳಿದನು, “ನೀನು ಯಾರಿಗೇ ಆ ಮಂತ್ರ ಹೇಳಿಕೊಟ್ಟರು ಅವರು ಅಜ್ಞಾನ ಮತ್ತು ಸಂಕಟದ ಶೃಂಖಲೆಗಳಿಂದ  ವಿಮುಕ್ತನಾಗುತ್ತಾರೆ. ಆದರೆ ನೀನೇ ಶಷ್ಯತ್ವ ಕಳೆದುಕೊಂಡು ನರಕಕ್ಕೆ ಹೋಗುತ್ತೀಯಾ”.

ಗುರುವಿನಿಂದ ಮಾತುಗಳನ್ನು ಕೇಳಿದ ಕೂಡಲೇ ಭಕ್ತನು ಮಾರುಕಟ್ಟೆ ಪದೇಶಕ್ಕೆ ದೌಡಾಯಿಸಿ ಜನರ ದೊಡ್ಡ ಗುಂಪನ್ನು ಸೇರಿಸಿ ಅವರಿಗೆಲ್ಲಾ ಕೇಳುವಂತೆ ಆ ಮಂತ್ರವನ್ನು ಪುನರುಚ್ಛರಿಸಿದನು. ತದನಂತರ ಶಿಷ್ಯರು ಗುರುವಿಗೆ ಈ ಸುದ್ದಿ ತಿಳಿಸಿ ಆ ವ್ಯಕ್ತಿಯನ್ನು ಆಶ್ರಮದಿಂದ ಹೊರಹಾಕುವಂತೆ ಒತ್ತಾಯಿಸಿದರು.

ಪ್ರಶ್ನೆಗಳು 

 1.ಗುರುವಿನ ಪ್ರತಿಕ್ರಿಯೆ ಏನಾಗಿತ್ತು?

 2.ಈ ಕಥೆಯ ಪರಿಣಾಮವೇನು?

ಉತ್ತರಗಳು

 1.ಗುರು ನಸುನಕ್ಕು ಹೇಳಿದನು, “ನಾನು ಈಗಾಗಲೇ ಅವನನ್ನು ಆಶ್ರಮದಿಂದ ಉಚ್ಚಾಟಿಸಿದ್ದೇನೆ.ಇನ್ನು ಅವನು ಇಲ್ಲಿ ಇಲ್ಲಿರಬೇಕಾದ ಅಗತ್ಯವೇನಿಲ್ಲ.ನಾನು ಅವನಿಗೆ ಇನ್ನೇನೂ ಭೋದಿಸಬೇಕಾದ ಪ್ರಮೇಯವಿಲ್ಲ. ಅವನ ಕ್ರಿಯೆಯೇ ಅವನಿಗೆ ಗುರುವಾಗುವ ಹಕ್ಕನ್ನು ತಂದುಕೊಟ್ಟಿದೆ.”

2.ನಮ್ಮ ಜೀವನದ ಅಂತಿಮ ಗುರಿ ಬೇರೆಯವರಿಗೆ ಸಹಾಯ ಮಾಡುವುದೇ ಆಗಿದೆ. ಯಾರಿಗೆ ಆದರೂ ಯಾವುದೇ ಪ್ರತಿಫಲಾ ಪೇಕ್ಷೆಯಿಲ್ಲದೆ ಪ್ರಾಮಾಣಿಕ ಸೇವೆ ಸಲ್ಲಿಸಬೇಕೆಂಬ ಒಲವಿದ್ದರೆ ಅಂತಹವರು ತಮ್ಮದೇ ಆದ ರೀತಿಯಲ್ಲಿ ಗುರುವೆನಿಸಿಕೊಳ್ಳುವರು.