ಮನೆ ಮಕ್ಕಳ ಶಿಕ್ಷಣ ಸಾಕ್ರಟೀಸ್ ಪೋಷಣೆ

ಸಾಕ್ರಟೀಸ್ ಪೋಷಣೆ

0

 ಸಾಕ್ರಟೀಸ್ ಎಂಬುವವರು ಮಹಾ ನ್ ತತ್ತ್ವಜ್ಞಾನಿ ಎಂಬುದು ಬಹುಶಃ ಎಲ್ಲರಿಗೂ ತಿಳಿದಿರುವ ವಿಷಯ. ಪ್ರತಿಯೊಬ್ಬರಿಗೂ ಬುದಿ ಹೇಳುತ್ತಿದ್ದರು ಆದರೆ ಅವರ ಹೆಂಡತಿಯೊಂದಿಗೆ ಸರಿ ಬಳುತ್ತಿರಲಿಲ್ಲ. ಹೆಂಡತಿಯಾದವಳು ಗಂಡ ಸಾಕ್ರಟಿಸ್ ನನ್ನು ಬೈಯದ ದಿನವೇ ಇಲ್ಲವಂತೆ.ಅದೊಂದು ದಿನ ಬೈದು ಬೈದು, ಆಯಾಸಗೊಂಡ ಆಕೆ ಕೋಪ ಕಡಿಮೆಯಾಗದೆ ಒಂದು ಬಕೆಟ್ ನೀರನ್ನು ತಂದು ಅವರ ತಲೆಯ ಮೇಲೆ ಸುರಿದುಬಿಟ್ಟಳು ಅದನ್ನು ನೋಡಿದ ಶಿಷ್ಯರೊಂದಿಗೆ ಸಂಕ್ರಾಂತಿ ಮಿಂಚು, ಗುಡುಗುಗಳಂತಹ ಮಳೆ ಸುರಿಯುವುದು ಸಹಜವೇ ತಾನೇ…..ಎಂದು ಹೇಳುತ್ತಾರೆ.

Join Our Whatsapp Group

     ಕೆಲವು ತಾಯಿ ತಂದೆಯರು ಇದಕ್ಕಿಂತ ಭಿನ್ನವಾಗಿರುವುದಿಲ್ಲ   ಮಕ್ಕಳ ಮುಂದೆಯೇ ಹೆತ್ತವರು ಕಾಲು  ಕೆರೆದು ಜಗಳಕ್ಕೆ ನಿಲ್ಲುವುದು ,ತಂದೆ ಮಗನನ್ನು ಬೇಯುತ್ತಿದ್ದರೆ ತಾಯಿ ಅಡ್ಡಬಂದು  ಮಗನನ್ನು ಸಮರ್ಥಿಸಿಕೊಳ್ಳುವುದು, ಹಾಗೆಯೇ ತಾಯಿ ಮಗಳನ್ನು ದುಡಿಸುತ್ತಿದ್ದಾರೆ ತಂದೆ ಅಡ್ಡ ಬರುವುದು, ಇದರಿಂದಾಗಿ ಮಕ್ಕಳಲ್ಲಿ ತಂದೆ ತಾಯಿಯರ ಪೈಕಿ ಯಾರಾದರೂ ಒಬ್ಬರು ಬಗ್ಗೆ ನಿರ್ಲಕ್ಷ್ಯ ಭಾವನೆ ಏರ್ಪಡುತ್ತದೆ. ಇಂತಹ ವಾತಾವರಣದಲ್ಲಿ ಬೆಳೆದ ಮಕ್ಕಳು ದೊಡ್ಡವರಾದ ಮೇಲೆ ತಮಗೆ ಒಳ್ಳೆಯ ಬುದ್ಧಿಗಳನ್ನು ಕಲಿಸಬೇಕೆಂದು ದಂಡಿಸುವವರೊಂದಿಗೆ ಕೂಡಾ ಹಗೆತನ,ತನ್ನನ್ನು ಹಾಡಿ ಹೊಗಳಿದವರೊಂದಿಗೆ ಆತ್ಮೀಯತೆ ಬೆಳೆಸಿಕೊಳ್ಳುತ್ತಾನೆ.