ಮನೆ ಯೋಗಾಸನ ವಕ್ರಾಸನ

ವಕ್ರಾಸನ

0

ನಕ್ರವೆಂದರೆ ಮೊಸಳೆ ಮೊಸಳೆಯು ತನ್ನ ಆಹಾರಕ್ಕಾಗಿ ಬಲಿಯಾಗುವ ಪ್ರಾಣಿಗಳನ್ನು ಹಿಡಿಯಲು ತೋರುವ ಅನೇಕ ಚಲನವಲನಗಳನ್ನು ಈ ಆಸನವು  ಹೋಲುವುದರಿಂದ ಇದಕ್ಕೆ ಈ ಹೆಸರು ಬಂದಿದೆ.

ಅಭ್ಯಾಸ ಕ್ರಮ

 1. ಮೊದಲು ಕೆಳಮೊಗ ಮಾಡಿ,ನೆಲದಮೇಲೆ ಉದ್ದಕ್ಕೂ ಚಪ್ಪಟೆಯಾಗಿ ಮಲಗಬೇಕು.

2. ಬಳಿಕ ಮೊಣಕೈಗಳನ್ನು ಮಡಿಚಿ,ತೋಳುಗಳನ್ನು ಸೊಂಟದ ಪಕ್ಕಗಳಿಗೆ ಸೇರಿಸಿಡಬೇಕು.

3. ಆಮೇಲೆ ಪಾದಗಳ ನಡುವಣಂತರ ಸುಮಾರು ಒಂದಡಿ ಇರುವಂತೆ ಅವುಗಳನ್ನು ಅಗಲಿಸಬೇಕು ಉಸಿರನ್ನು ಬಿಟ್ಟುಇಡೀ ದೇಹವನ್ನು ನೆಲದಿಂದ ಕೆಲವು ಅಂಗುಲದಷ್ಟು ಮೇಲೆತ್ತಿ,ಅದನ್ನು ಅಂಗೈಗಳ ಮತ್ತು ಕಾಲ್ಬೆರಳುಗಳ ಮೇಲೆ ಸಮತೋಲನಮಾಡಿ ನಿಲ್ಲಿಸಬೇಕು. ಅನಂತರ ದೇಹವನ್ನು ಉಕ್ಕಿನ ಸಲಾಕೆಯಂತೆ ಪೆಡಸುಮಾಡಿ ಮಂಡಿ ಬಿಗಿಗೊಳಿಸಿ,ಅದನ್ನು ನೆಲಕ್ಕೆ ಸಮಾಂತರಗೊಳಿಸಿ ನಿಲ್ಲಿಸಬೇಕು.

4. ತರುವಾಯ ಕೆಲವು ಸಲ ಉಸಿರಾಟ ನಡೆಸಿದ ಮೇಲೆ,ಉಸಿರನ್ನು ಹೊರದೂಡಿ, ಕೈ- ಕಾಲುಗಳನ್ನು ನೆಲದಿಂದ ಒಟ್ಟಿಗೆ ಮೇಲೆತ್ತಿ,ಇಡೀ ದೇಹವನ್ನು ಒಂದಡಿ ಮುಂದಕ್ಕೆ ಚಿಮ್ಮಿಸಬೇಕು.ಅನಂತರ ಕೆಲವು ಸಲ ಉಸಿರಾಟ ನಡೆಸಿ,ಮತ್ತೆ ಉಸಿರನ್ನು ಹೊರಹೋಗಿಸಿ ಮತ್ತೊಮ್ಮೆ ದೇಹವನ್ನು ಒಂದಡಿಯಷ್ಟು ಮುಂಗಡೆಗೆ ಚಿಮ್ಮಿಸಬೇಕು.

     5.ಈ ಬಗೆಯಲ್ಲಿ ನಾಲ್ಕೈದು ಸಲ ದೇಹವನ್ನು ಚಿಮ್ಮಿಸಬೇಕು ಪ್ರತಿಸಲ ಚಿಮ್ಮಿಸಿದೊಡನೆಯೇ ಮೇಲೆ ವಿವರಿಸಿದಂತೆ 3ನೇ ಸ್ಥಿತಿಗೆ ದೇಹವನ್ನು ತಂದಿರಿಸಬೇಕು ಈ ಚಲನ ವಲನಗಳು, ಮೊಸಳೆಯು ತನಗೆ ಬಲಿಯಾಗುವ ಪ್ರಾಣಿಗಳ ಮೇಲೆ ತನ್ನ ದೇಹವನ್ನು ಚಿಮ್ಮಿಸುವ ಬಗೆಯನ್ನನುಸರಿಸುತ್ತದೆ.ಪ್ರತಿಸಲ ಚಿಮ್ಮಿಸಿದಾಗಲೂ ಕೆಲವು ನಿಮಿಷಗಳು ಮಿಶ್ರಮಿಸಿಕೊಂಡು ನೀಳವಾದ ಉಸಿರಾಟ ನಡೆಸಬೇಕು.

     6.ಇದಾದ ಮೇಲೆ ಈ ಮೇಲಿನ ಭಂಗಿಗಳನ್ನು ಹಿಂದುಮುಂದು ಅಭ್ಯಸಿಸಬೇಕು ಅಂದರೆ ಮುಂದುಮುಂದುಕ್ಕೆ  ಜಿಗಿದ ಬಗೆಯಲ್ಲಿ ಹಿಂದೆ ಹಿಂದಕ್ಕೆ ಒಂದಡಿ ದೂರವಷ್ಟು ಜಿಗಿದು, ಮೊದಲಿನ ಸ್ಥಾನಕ್ಕೆ ಮತ್ತೆ ಹಿಂದಿರುಗುವವರೆಗೂ ಈ ಕ್ರಮವನ್ನನುಸರಿಸಬೇಕು .

     7.ಕಡೆಯಲ್ಲಿ ಮುಂಡವನ್ನು ನೆಲದಮೇಲೊರಗಿಸಿಟ್ಟು ಮಿಶ್ರಮಿಸಬೇಕು.