ಮನೆ ರಾಜ್ಯ ಮಳೆ ನೀರು ಗಿಡ ಮರಗಳ ಬೇರಿಗೆ ಹರಿಯಲು ಅನುವು ಮಾಡಿಕೊಡುವ “ಫ್ರೀ ದ ಟ್ರೀ” ಅಭಿಯಾನಕ್ಕೆ...

ಮಳೆ ನೀರು ಗಿಡ ಮರಗಳ ಬೇರಿಗೆ ಹರಿಯಲು ಅನುವು ಮಾಡಿಕೊಡುವ “ಫ್ರೀ ದ ಟ್ರೀ” ಅಭಿಯಾನಕ್ಕೆ ಚಾಲನೆ

0

    ಬೆಂಗಳೂರು: ಮಳೆ ನೀರು ನಗರದಲ್ಲಿರುವ ಗಿಡ ಮತ್ತು ಮರಗಳ ಬೇರಿಗೆ ನೀರು ಹರಿಯಲು ಇರುವ ಅಡೆತಡೆಗಳನ್ನು ತಗೆದು ಅನುವು ಮಾಡಿಕೊಡುವ ಮಹತ್ವಕಾಂಕ್ಷಿ “ಫ್ರೀ ದ ಟ್ರೀ” ಅಭಿಯಾನಕ್ಕೆ ಇಂದು ಚಾಲನೆ ನೀಡಲಾಯಿತು.

    Join Our Whatsapp Group

    ಜಯ ಕರ್ನಾಟಕ ಜನಪರ ವೇದಿಕೆ ಮತ್ತು ಐಕೇರ್‌ ಬ್ರಿಗೇಡ್‌ ವತಿಯಿಂದ ಆಯೋಜಿಸಲಾಗಿದ್ದ “ಫ್ರೀ ದ ಟ್ರೀ” ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಖ್ಯಾತ ಸಂಗೀತ ನಿರ್ದೇಶಕ ಗುರುಕಿರಣ್‌, ಬೆಂಗಳೂರು ನಗರದಲ್ಲಿ ದಿನೇ ದಿನೇ ಜನರ ಸಂಖ್ಯೆ ಹೆಚ್ಚಾಗುತ್ತಿದೆ. ಈ ಬಾರಿಯ ಭೀಕರ ಬರಗಾಲದಿಂದ ನಗರದಲ್ಲಿ ತೀವ್ರವಾದ ನೀರಿನ ಕೊರತೆ ಎದುರಾಗಿದೆ. ಮರ ಗಿಡಗಳನ್ನು ಹೆಚ್ಚು ಹೆಚ್ಚಾಗಿ ಬೆಳೆಸುವುದರಿಂದ ಮಳೆಯು ಕಡಿಮೆಯಾಗುವುದಿಲ್ಲ. ಹಾಗೆಯೇ, ಹೆಚ್ಚುತ್ತಿರುವ ನಗರೀಕರಣದಿಂದ ರಸ್ತೆಗಳನ್ನು ಅಭಿವೃದ್ದಿ ಪಡಿಸುವ ನಿಟ್ಟಿನಲ್ಲಿ ಹಲವಾರು ಕಡೆಗಳಲ್ಲಿ ಮರಗಳ ಸುತ್ತಲೂ ಸಿಮೆಂಟ್‌ ಮತ್ತು ಡಾಂಬರ್‌ ಗಳ ಮೂಲಕ ಮುಚ್ಚಲಾಗುತ್ತಿದೆ. ಇದರಿಂದ ಅವುಗಳಿಗೆ ನೈಸರ್ಗಿಕವಾದ ಮಳೆ ನೀರು ಅವುಗಳಿಗೆ ದೊರೆಯದೇ ನಿಧಾನವಾಗಿ ಅವನತಿಯತ್ತ ಮುಖಮಾಡುತ್ತಿವೆ. ಇವುಗಳನ್ನು ತಪ್ಪಿಸುವ ಉದ್ದೇಶದಿಂದ ಫ್ರೀ ದ ಟ್ರೀ ಯಂತಹ ಅಭಿಯಾನಗಳ ಮೂಲಕ ಬೆಂಗಳೂರು ನಗರವನ್ನ ಮತ್ತಷ್ಟು ಹಸಿರಾಗಿಸಲು ಎಲ್ಲರೂ ಕೈಜೋಡಿಸೋಣ ಎಂದು ಕರೆ ನೀಡಿದರು.

    ಕರ್ನಾಟಕ ಕುಸ್ತಿ ಸಂಘದ ಅಧ್ಯಕ್ಷರಾದ ಗುಣರಂಜನ್‌ ಶೆಟ್ಟಿ ಅವರು ಮಾತನಾಡಿ, ನಮ್ಮ ಜಯಕರ್ನಾಟಕ ಜನಪರ ವೇದಿಕೆ, ಐಕೇರ್‌ ಬ್ರಿಗೇಡ್‌ ಮತ್ತು ಐಕೇರ್‌ ಫೌಂಡೇಷನ್‌ ಸಂಸ್ಥೆ ವತಿಯಿಂದ, “ವಕ್ಷೊ ರಕ್ಷತಿ ರಕ್ಷಿತಃ” ಎಂಬಂತೆ ಪರಿಸರ ಮತ್ತು ಮರಗಳ ಸಂರಕ್ಷಣೆಯ ಉದ್ದೇಶದಿಂದ “ಫ್ರೀ ದ ಟ್ರೀ” ಎಂಬ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ. ರಸ್ತೆ ಬದಿಯ ಮರಗಳಿಗೆ ಅಳವಡಿಸಿರುವ ಅಡಚಣೆಗಳನ್ನು ತೆರವುಗೊಳಿಸಿ, ಮರದ ಬೇರುಗಳನ್ನ ಸಂರಕ್ಷಿಸಿ ಪ್ರತಿ ಮರವು ಮಳೆ ನೀರನ್ನ ಹೀರಿಕೊಳ್ಳುವ ವ್ಯವಸ್ಥೆ ಮಾಡುವುದರ ಬಗ್ಗೆ ಜನಜಾಗೃತಿ ಮೂಡಿಸುವುದು ನಮ್ಮ ಮಖ್ಯ ಗುರಿಯಾಗಿದೆ ಎಂದು ಹೇಳಿದರು.

    ಜಯಕರ್ನಾಟಕ ಜನಪರ ವೇದಿಕೆಯ ರಾಜ್ಯಾಧ್ಯಕ್ಷರಾದ ಶ್ರೀನಿವಾಸ್‌ ಮಾತನಾಡಿ, ನಗರದಾದ್ಯಂತ ಈ ಅಭಿಯಾನವನ್ನು ನಮ್ಮ ವೇದಿಕೆ ಹಮ್ಮಿಕೊಳ್ಳಲಿದೆ. ಅಭಿವೃದ್ದಿಯ ಹೆಸರಿನಲ್ಲಿ ಹಾಗೂ ವೈಯಕ್ತಿಕ ಲಾಭಕ್ಕಾಗಿ ಮರಗಳ ಸ್ವಾತಂತ್ರ್ಯವನ್ನು ಕಸಿದುಕೊಳ್ಳುವುದರಿಂದ ಮರಗಳನ್ನು ರಕ್ಷಿಸಬೇಕು. ನಮ್ಮ ಪರಿಸರವನ್ನು ರಕ್ಷಿಸಿ ಮುಂದಿನ ಪೀಳಿಗೆಗೆ ಉತ್ತಮ ಮತ್ತು ಸ್ವಚ್ಚ ಪರಿಸರವನ್ನು ನಿರ್ಮಿಸುವ ದೃಷ್ಟಿಯಿಂದ ಈ ಅಭಿಯಾನ ನಡೆಸಲಾಗುತ್ತಿದೆ ಎಂದರು.

    ಕಾರ್ಯಕ್ರಮದಲ್ಲಿ ಇಂದಿರಾನಗರದ ಹಲವೆಡೆಗಳಲ್ಲಿ ರಸ್ತೆ ಬದಿಯಲ್ಲಿದ್ದ ಮರಗಳ ಅಡೆತಡೆಗಳನ್ನು ತೆರವುಗೊಳಿಸಲಾಯಿತು. ಐ ಕೇರ್‌ ಫೌಂಡೇಶನ್‌ ನ ಸಂಸ್ಥಾಪಕರಾದ ಪ್ರಸಾದ್‌ ಶೇಟ್ಟಿ, ಪೂರ್ಣೀಮಾ ಶೆಟ್ಟಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

    ಹಿಂದಿನ ಲೇಖನ“ನಾಲ್ಕನೇ ಆಯಾಮ’ ಸಿನಿಮಾ ವಿಮರ್ಶೆ
    ಮುಂದಿನ ಲೇಖನಹುಬ್ಬಳ್ಳಿ ವಿದ್ಯಾರ್ಥಿನಿ ಕೊಲೆ ಪ್ರಕರಣ: ದುಷ್ಕರ್ಮಿಗೆ ಗಲ್ಲಿಗೇರಿಸಿ- ಸಚಿವ ಎಂ ಬಿ ಪಾಟೀಲ