ಮನೆ ರಾಜ್ಯ ಬಹುಭಾಷಾ ನಟ ಕ್ಯಾಪ್ಟನ್‌ ಚಲಪತಿ ಚೌದ್ರಿ ನಿಧನ

ಬಹುಭಾಷಾ ನಟ ಕ್ಯಾಪ್ಟನ್‌ ಚಲಪತಿ ಚೌದ್ರಿ ನಿಧನ

0

ರಾಯಚೂರು (Rayachuru)-ಬಹುಭಾಷಾ ನಟ ಕ್ಯಾಪ್ಟನ್ ಚಲಪತಿ ಚೌದ್ರಿ (67) (Captain Chalapathi Chowdary) ವಯೋಸಹಜ ಅನಾರೋಗ್ಯದಿಂದ ನಿಧನರಾಗಿದ್ದಾರೆ.

ನಗರದ ಕೆ.ಎಂ.ಕಾಲನಿಯಲ್ಲಿ ವಾಸವಿದ್ದ ಚಲಪತಿ ಚೌದ್ರಿ ಅವರನ್ನು ಅನಾರೋಗ್ಯ ಹಿನ್ನೆಲೆ ರಾಯಚೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಸಾವನ್ನಪ್ಪಿದ್ದಾರೆ. ಮೃತರಿಗೆ ಪತ್ನಿ, ಓರ್ವ ಪುತ್ರ ಹಾಗೂ ಓರ್ವ ಪುತ್ರಿ ಇದ್ದಾರೆ.

ಕನ್ನಡ, ಹಿಂದಿ, ತೆಲಗು ಸೇರಿದಂತೆ ಅನೇಕ ಭಾಷೆಯ ಚಲನಚಿತ್ರಗಳಲ್ಲಿ ಹಾಗೂ ಧಾರಾವಾಹಿಗಳಲ್ಲಿ ನಟಿಸಿದ್ದಾರೆ.

ನಗರದ ಬಿಆರ್‌ಬಿ ವೃತ್ತದ ಪಕ್ಕದಲ್ಲಿರುವ ರುದ್ರಭೂಮಿಯಲ್ಲಿ ಗುರುವಾರ ಸಂಜೆ ಅಂತ್ಯಕ್ರಿಯೆ ನೆರವೇರಿಸಲಾಯಿತು ಎಂದು ಕುಟುಂಬಸ್ಥರು ತಿಳಿಸಿದ್ದಾರೆ.