ಮನೆ ಅಪರಾಧ ಗರ್ಭಪಾತ ದಂಧೆಗೆ ಮಹಿಳೆ ಬಲಿ ಪ್ರಕರಣ: ಮೃತ ಮಹಿಳೆಯ ತಂದೆ, ತಾಯಿ ಬಂಧನ

ಗರ್ಭಪಾತ ದಂಧೆಗೆ ಮಹಿಳೆ ಬಲಿ ಪ್ರಕರಣ: ಮೃತ ಮಹಿಳೆಯ ತಂದೆ, ತಾಯಿ ಬಂಧನ

0

ಬಾಗಲಕೋಟೆ: ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ಮಹಾಲಿಂಗಪುರದಲ್ಲಿ ಗರ್ಭಪಾತ ದಂಧೆಗೆ ಮಹಿಳೆ ಬಲಿಯಾದ ಪ್ರಕರಣಕ್ಕೆ ಸಂಬಂಧಿಸಿ ಮೃತ ಮಹಿಳೆ ಸೋನಾಲಿ ತಂದೆ, ತಾಯಿಯನ್ನು ಪೊಲೀಸರು ಬಂಧಿಸಿದ್ದಾರೆ.

Join Our Whatsapp Group

ಮಗಳ ಗರ್ಭಪಾತಕ್ಕೆ ಪ್ರೇರೇಪಣೆ ಆರೋಪದ ಮೇರೆಗೆ ಸೋನಾಲಿ ತಂದೆ ಸಂಜಯ್ ಗೌಳಿ ಮತ್ತು ತಾಯಿ ಸಂಗೀತಾ ಗೌಳಿ‌ಯನ್ನು ಮಹಾಲಿಂಗಪುರ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ಇನ್ನು ಗರ್ಭಪಾತ, ಭ್ರೂಣಹತ್ಯೆಗೆ ಕಾರಣಳಾದ ಆರೋಪಿ ಕವಿತಾ ಬಾದನ್ನವರ ಅರೆಸ್ಟ್ ಮಾಡಲಾಗಿದೆ.

ಈಕೆ ಖಾಸಗಿ ಆಸ್ಪತ್ರೆಯಲ್ಲಿ ಆಯಾ ಆಗಿ ಕೆಲಸ ಮಾಡುತ್ತಿದ್ದಳು. ಆದರೆ ಈಗ ಗರ್ಭಪಾತ ದಂಧೆ ಮಾಡಿ ಮಹಿಳೆ ಬಲಿ ಪಡೆದು ಜೈಲು ಸೇರಿದ್ದಾಳೆ. ಮಕ್ಕಳ ಹಕ್ಕುಗಳ ರಕ್ಚಣಾ ಆಯೋಗದ ಸದಸ್ಯ ಶಶಿಧರ ಕೋಸಂಬೆ ಅವರು ಬಾಗಲಕೋಟೆ ಜಿಲ್ಲೆಯ ಮಹಾಲಿಂಗಪುರ ಪಟ್ಟಣದಲ್ಲಿರುವ ಆರೋಪಿ ಕವಿತಾ ಮನೆಗೆ ಭೇಟಿ ನೀಡಿ ಪರಿಶೀಲನೆ‌ ನಡೆಸಿದ್ರು. ಪರಿಶೀಲನೆ ವೇಳೆ, ಕವಿತಾ ಮನೆಯಲ್ಲಿನ ವೈದ್ಯಕೀಯ ಪರಿಕರಗಳು, ಬೆಡ್, ಹ್ಯಾಂಡ್ ಗ್ಲೌಜ್, ಮೆಡಿಷಿನ್ಸ್ ಎಲ್ಲವನ್ನು ಪರಿಶೀಲನೆ‌ ಮಾಡಿದ್ರು. ಈ ವೇಳೆ ಕುಟುಂಬ ಕಲ್ಯಾಣ ಅಧಿಕಾರಿ ಡಿ ಬಿ ಪಟ್ಟಣಶೆಟ್ಟಿ ವಿರುದ್ಧ ಗರಂ ಆದ ಆಯೋಗದ ಸದಸ್ಯ ಶಶಿಧರ ಕೋಸಂಬೆ, ನಿಮ್ಮ ಕರ್ತವ್ಯ ನಿರ್ಲಕ್ಷ್ಯದಿಂದಲೇ ಈ ರೀತಿಯ ದುರ್ಘಟನೆ ಆಗಿದೆ ಎಂದು ಗದರಿದ್ರು.

ಪೊಲೀಸ್ ಅಧಿಕಾರಿಗಳಿಗೆ ತನಿಖೆಗೆ ಎಲ್ಲ ರೀತಿಯ ಸಹಕಾರ ನೀಡುವಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳಿಗೆ ಸೂಚನೆ ನೀಡಿದ್ರು. ನಿಷ್ಪಕ್ಷಪಾತ ತನಿಖೆ ಮಾಡುವಂತೆ ಪೊಲೀಸರಿಗೆ ಮನವಿ‌ಮಾಡಿದ್ರು.

ಆರೋಪಿ ಕವಿತಾ ಬಗ್ಗೆ ಗಮನಹರಿಸದೇ ಇರೋದು ಮೇಲ್ನೋಟಕ್ಕೆ ಅಧಿಕಾರಿಗಳ‌ ನಿರ್ಲಕ್ಷ್ಯ ಎದ್ದು ಕಾಣ್ತಿದೆ. ಈ ಬಗ್ಗೆ ನಾವು ಸರ್ಕಾರಕ್ಕೆ ವರದಿ ಕಳಿಸುತ್ತೇವೆ. ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದಿಂದ ಪ್ರತ್ಯೇಕ ದೂರು ದಾಖಲಿಸ್ತೇವೆ. ಎಲ್ಲ ರೀತಿಯ ತನಿಖೆಗೆ ಸೂಚಿಸುತ್ತೆವೆ ಎಂದ್ರು.

ಕವಿತಾ ಬಳಿ ಸ್ಕ್ಯಾನಿಂಗ್ ಮಷೀನ್ ಹೇಗೆ ಬಂತು ಎಂಬ ಬಗ್ಗೆ ನಿಷ್ಪಕ್ಷಪಾತ ತನಿಖೆ ಆಗಬೇಕಿದೆ, ಗೋಕಾಕ್ ಮೂಲದ ಯಾವುದೋ ಒಂದು ಆಸ್ಪತ್ರೆಯ ಹೆಸರಲ್ಲಿ ಅವರ ಬಳಿ ಸ್ಕ್ಯಾನಿಂಗ್ ಮಷೀನ್ ಇದೆ. ಅದನ್ನೂ ಪೊಲೀಸರು ತನಿಖೆ ಮಾಡ್ತಿದ್ದಾರೆ. ಈ ಪ್ರಕರಣದಲ್ಲಿ ಯಾರ್ಯಾರೂ ಭಾಗಿಯಾಗಿದ್ದಾರೆ ಎಂಬ ಬಗ್ಗೆ ತನಿಖೆಗೆ ಒಳಪಡಿಸಲಾಗುವುದು ಎಂದರು.