ಹೃದಯದ ಮಾಂಸಖಂಡಗಳಿಗೆ ರಕ್ತವನ್ನು ಕೊಂಡೊಯ್ಯುವ ಕರೋನರಿ ಧಮನಿಯಲ್ಲಿ ಯಾವುದೋ ಒಂದು ಭಾಗದಲ್ಲಿ/ ಕೆಲವು ಭಾಗಗಳಲ್ಲಿ ಕೊಬ್ಬು ಶೇಖರಣೆ, ರಕ್ತ ಹೆಪ್ಪುಕಟ್ಟುವಿಕೆ (Thrombus),ನಾಳಪೂರ್ತಿ ಮುಚ್ಚಿಹೋಗಿ(Block) ರಕ್ತ ಪರಿಚಲನೆಗೆ ಅಡ್ಡಿಯಾಗಿ ರಕ್ತ ಚಲನೆ ನಿಂತುಹೋಗುತ್ತದೆ. ಆಗ ರಕ್ತದ ಕೊರತೆಯಿಂದ ಹೃದಯದ ಮಾಂಸಖಂಡಗಳು ಮೃದುವಾಗಿ ನಿರುಪಯುಕ್ತವಾಗುತ್ತವೆ. ಇದನ್ನು Myocardial Infarction ಎನ್ನುತ್ತಾರೆ.ಅಂತಹ ಸಂದರ್ಭಗಳಲ್ಲಿ ಕಾಣಿಸಿಕೊಳ್ಳುವುದೇ ಹೃದಯಘಾತ (Heart attack).ಹೃದಯಘಾತವಾದ ವ್ಯಕ್ತಿ ಸೂಕ್ತ ಚಿಕಿತ್ಸಾಕ್ರಮದಿಂದ ಬದುಕುಳಿದರೆ, ಮೆತ್ತಗೆ ಮೃದುವಾದ ಹೃದಯದ ಮಾಂಸಖಂಡಗಳು ಕೆಲವೇ ದಿನಗಳಲ್ಲಿ ಚೇತನಗೊಳ್ಳುತ್ತದೆ.
ಹೃದಯಘಾತವಾದ ವ್ಯಕ್ತಿಗಳು ಬೇರೆ ಬೇರೆ ವಿಧವಾಗಿ ನೋವನ್ನು ಅನುಭವಿಸಿದರೂ, ಎಲ್ಲರಲ್ಲೂ ಸಾಮಾನ್ಯವಾಗಿ ಕಂಡುಬರುವುದು ‘ಎದೆನೋವು’
ಒಂದು ಅಂದಾಜಿನ ಪ್ರಕಾರ,ಇಂಗ್ಲೆಂಡಿನಲ್ಲಿ ಸುಮಾರು ಎರಡೂವರೆ ಲಕ್ಷ ಜನ ಹೃದಯಾ ಘಾತಕ್ಕೊಳಗಾಗುತ್ತಾರೆ ಇವರಲ್ಲಿ ಒಂದು ಲಕ್ಷದ ಅರವತ್ತು ಸಾವಿರ ಜನ ಸಾವನ್ನಪ್ಪುತ್ತಾರೆ.
ಅಮೆರಿಕದಲ್ಲಿ ಪ್ರತಿ ಮೂರು ಜನಕೊಬ್ಬರಂತೆ ಹೃದ್ರೋಗದಿಂದ ಬಳಲುತ್ತಾರೆ.
ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಜನರ ಮರಣಕ್ಕೆ ಹೃದಯಘಾತ ಒಂದು ಮುಖ್ಯ ಕಾರಣವೆಂದರೆ ಅತಿಶಯೋಕ್ತಿಯಲ್ಲ.
ಲಕ್ಷಣಗಳು
★ ಅನಿರೀಕ್ಷಿತವಾಗಿ ತಕ್ಷಣ ಎದೆಯಲ್ಲಿ ನೋವುಂಟಾಗುವುದು, ಹೃದಯಘಾತದ ಮುಖ್ಯ ಲಕ್ಷಣ. ಈ ನೋವು ಆಜೈನಾದಂತೆ. ಎದೆ ಭಾರದಂತೆ ಹಿಡಿದಂತೆ ಇರಬಹುದು.
★ಆಜೈನಾದಿಂದಾದ ನೋವು, 10-15 ನಿಮಿಷಗಳಲ್ಲಿ ಮಾಡುವ ಕೆಲಸ ಕಾರ್ಯಗಳನ್ನು ಸ್ಥಗಿತಗೊಳಿಸಿದರೆ ಕಡಿಮೆಯಾಗುತ್ತದೆ.
★ ಆದರೆ ಹೃದಯಾಘಾತದ ನೋವು ಹಾಗಲ್ಲ. ವಿಶ್ರಾಂತಿ ತೆಗೆದುಕೊಳ್ಳುವಾಗಲೂ ಕಡಿಮೆಯಾಗದು. ಆ ನೋವು ಅರ್ಧಗಂಟೆಯ ಕಾಲ ಮುಂದುವರಿದರೆ Full Blown Heart Attack ಎಂದು ತಿಳಿಯಬಹುದು.
★ ಎದೆಯ ಭಾಗ ಸ್ಪರ್ಶಜ್ಞಾನ ಇಲ್ಲದಿರುವಂತೆಯೂ, ಇಲ್ಲವೇ ಸೂಜಿಯಿಂದ ಚುಚ್ಚಿದಂತೆಯೂ ಅನುಭವವಾಗುತ್ತದೆ.
★ ನೋವು ನಿಧಾನವಾಗಿ ಭುಜ,ಕೈಗಳಿಗೆ ಹರಡಬಹುದು.ಮುಖ್ಯವಾಗಿ ನೋವು ಎಡಭುಜದಿಂದ ಹರಡಿ,ಹತ್ತಿರ ಬರುತ್ತದೆ.
★ ನೋವಿನ ತೀವ್ರತೆಯ ಮೇಲೆ ಹೃದಯಘಾತದ ತೀವ್ರತೆಯನ್ನು ಅಳೆಯುವುದು ತಪ್ಪು. ಕೆಲವೊಮ್ಮೆ ಕಡಿಮೆ ನೋವಿದ್ದರೂ ಆಘಾತದ ತೀವ್ರತೆ ಜಾಸ್ತಿಯಾಗಿರಬಹುದು ಅಂದರೆ ನೋವಿನ ತೀವ್ರತೆಗೂ ಆಘಾತದ ತೀವ್ರತೆಗೂ ಸಂಭಂದವಿಲ್ಲ.
★ ಆದರೆ ನೋವಿಲ್ಲದೆಯೂ ಹೃದಯಘಾತಗಳಾಗಬಹುದು ಸಾಮಾನ್ಯವಾಗಿ ಮಧುಮೇಹಿಗಳಿಗೂ ವೃದ್ಧರಿಗೂ ಹೀಗೆ ಸಂಭವಿಸಬಹುದು
★ ತಣ್ಣನೆ ಬೆವರು ಬಂದರೆ —ಹಾರ್ಟ್ ಅಟ್ಯಾಕ್ ನ ಮತ್ತೊಂದು ಪ್ರಮುಖ ಲಕ್ಷಣ.
★ ವಾಂತಿಯಾಗುವುದು, ದೇಹ ಸೊಪ್ಪಿನಂತೆ ಬಾಡಿಹೋದಂತೆ ಆಗುವುದು.
★ಉಳಿದ ಲಕ್ಷಣಗಳೆಂದರೆ —ಉಸಿರಾಟದ ತೊಂದರೆ ತಲೆಸುತ್ತುವುದು ಪ್ರಜ್ಞೆ ತಪ್ಪುವುದು.
★ ಸಾವಿನ ಸಂಕಟ ಅನುಭವಿಸುವುದು ಮನಸ್ಸಿನ ಶಾಂತಿ ಇತ್ಯಾದಿ
★ ಕೆಲವೊಮ್ಮೆ ಎದೆನೋವಿಲ್ಲದೆ ಮೇಲಿನ ಲಕ್ಷಣಗಳಿಂದ ಹೃದಯಘಾತ ಸಂಭವಿಸುವುದು.
★ಹೃದಯಘಾತ ಸಂಭವಿಸುವ ಕೆಲವು ವಾರಗಳ ಮುನ್ನ &ಸುಸ್ತು,ಉಸಿರಿನ ತೊಂದರೆ,) ಅಜೀರ್ಣ ಮುಂತಾದ ತೊಂದರೆ, ಅಜೀರ್ಣ ಮುಂತಾದ ತೊಂದರೆ ಯಾಗಬಹುದು.