ಮನೆ ಮನರಂಜನೆ ಕಠಿಣ ವ್ರತ ಪಾಲಿಸಿ, ಅಯ್ಯಪ್ಪ ಸ್ವಾಮಿಯ ದರ್ಶನ ಪಡೆದ ನಟ ಅಜಯ್ ದೇವಗನ್

ಕಠಿಣ ವ್ರತ ಪಾಲಿಸಿ, ಅಯ್ಯಪ್ಪ ಸ್ವಾಮಿಯ ದರ್ಶನ ಪಡೆದ ನಟ ಅಜಯ್ ದೇವಗನ್

0

ಶಬರಿಮಲೆ ದೇಗುಲಕ್ಕೆ ತೆರಳಲು ಕಡ್ಡಾಯವಾಗಿ ಆಚರಿಸಬೇಕಾದ ಎಲ್ಲಾ ಕಠಿಣ ವ್ರತಗಳನ್ನು ಆಚರಿಸಿ, ಶಬರಿಮಲೆಗೆ ತೆರಳಿ ಅಯ್ಯಪ್ಪಸ್ವಾಮಿಯ ದರ್ಶನವನ್ನು ಬಾಲಿವುಡ್ ನಟ ಅಜಯ್ ದೇವಗನ್ ಪಡೆದಿದ್ದಾರೆ.
ಶಬರಿ ಮಲೆ ದೇಗಲಕ್ಕೂ ತೆರಳುವ ಮುನ್ನ ಮುಂಬೈನ ಸ್ಟುಡಿಯೋ ಎದುರು ಅಯ್ಯಪ್ಪ ಸ್ವಾಮಿ ಮಾಲಾಧಾರಿಗಳು ತೊಡುವ ಕಪ್ಪು ಬಣ್ಣದ ದಿರಿಸಿನಲ್ಲೇ ಅಜಯ್ ಕಾಣಿಸಿಕೊಂಡಿದ್ದರು. ಅಜಯ್ ದೇವಗನ್ ಮಾಲಾಧಾರಿಯಾಗಿರುವ ಚಿತ್ರಗಳು ಇದೀಗ ವೈರಲ್ ಆಗಿದ್ದು, ಬಾಲಿವುಡ್ ಅಂಗಳದಲ್ಲಿ ಸಾಕಷ್ಟು ಸುದ್ದಿ ಮಾಡಿದೆ.

41 ದಿನದ ಕಠಿಣ ವ್ರತ ಪಾಲಿಸಿದ ಅಜಯ್ ದೇವಗನ್
ವ್ರತಾಚರಣೆಯಲ್ಲಿ ಪಾಲಿಸಲಾಗುವ ಎಲ್ಲಾ ನಿಯಮಗಳನ್ನು ಅಜಯ್ ಅನುಸರಿಸಿದ್ದಾರೆ. 41 ದಿನಗಳ ಕಾಲ ನೆಲದ ಮೇಲೆ ಮಲಗಿ, ಕಪ್ಪು ಬಟ್ಟೆ ಧರಿಸಿ, ದಿನಕ್ಕೆರಡು ಬಾರಿ ಅಯ್ಯಪ್ಪನ ಪೂಜೆ, ಬೆಳ್ಳುಳ್ಳಿ/ಈರುಳ್ಳಿ ಇಲ್ಲದೆ ಕೇವಲ ಸಸ್ಯಾಹಾರ ಸೇವಿಸಿ, ಹೋದಲ್ಲೆಲ್ಲಾ ಬರಿಗಾಲಿನಲ್ಲಿ ನಡೆದಿದ್ದಾರೆ. ಸುಗಂಧ ದ್ರವ್ಯ ಬಳಸದೇ ಮಲಗಿದ್ದರು. ಯಾವುದೇ ರೀತಿಯ ಮದ್ಯಪಾನವನ್ನೂ ಕೂಡ ಮಾಡಿಲ್ಲ. ನಟನ ಜೊತೆಯಲ್ಲಿ ಅವರ ಸೋದರ ಸಂಬಂಧಿಗಳಾದ ವಿಕ್ರಾಂತ್ ಮತ್ತು ಧರ್ಮೇಂದ್ರ ಅವರು ಅಜಯ್ ಅವರಂತೆಯೇ ಅದೇ ಆಚರಣೆಗಳನ್ನು ಅನುಸರಿಸಿದ್ದರು. ಅಜಯ್ ದೇವಗನ್ ಈಗ ಅಯ್ಯಪ್ಪ ದರ್ಶನ ಮುಗಿಸಿ ಮನೆಗೆ ಮರಳಿದ್ದಾರೆ.

ಇಂದು ಮಕರಜ್ಯೋತಿ ದರ್ಶನ
ಶಬರಿಮಲೆಯಲ್ಲಿ ಜನವರಿ 14 ರಂದು ಮಕರ ಜ್ಯೋತಿ ದರ್ಶನವಾಗಲಿದ್ದು, ಜನವರಿ 19 ರವರೆಗೆ ಭಕ್ತರಿಗೆ ಅಯ್ಯಪ್ಪನ ದರ್ಶನಕ್ಕೆ ಅವಕಾಶವಿರಲಿದೆ. ಮಕರವಿಳಕ್ಕು ಪೂಜೆ ಹಾಗೂ ಯಾತ್ರೆಗಾಗಿ ಗುರುವಾರ ಸಂಜೆಯಿಂದ ಶಬರಿಮಲೆ ದೇಗುಲವನ್ನು ಮತ್ತೆ ತೆರೆಯಲಾಗಿದ್ದು, ಭಕ್ತರಿಗೆ ದರ್ಶನ ಮಾಡಲು ಅವಕಾಶ ಕಲ್ಪಿಸಿಕೊಡಲಾಗಿದೆ.