ಮನೆ ಸಾಹಿತ್ಯ ನಿಮ್ಮ ಬಯಕೆಗಳನ್ನು ಮಿತಗೊಳಿಸಿ ಪರಮಾನಂದ ಪಡೆಯಿರಿ

ನಿಮ್ಮ ಬಯಕೆಗಳನ್ನು ಮಿತಗೊಳಿಸಿ ಪರಮಾನಂದ ಪಡೆಯಿರಿ

0

 ಒಂದು ಹಳ್ಳಿಯಲ್ಲಿ ಮರ ಕಡಿಯುವ ವ್ಯಕ್ತಿಯೊಬ್ಬನಿದ್ದನು.ಸಮೀಪದ ಕಾಡಿನ ಮರಗಳನ್ನು ಕತ್ತರಿಸಿ ಪೇಟೆಯಲ್ಲಿ ಮಾರುತ್ತಿದ್ದ ಅವನಿಗೆ ಜೀವನ ನಿರ್ವಹಣೆ ದುಸ್ತರವಾಗಿತ್ತು. ಒಂದು ದಿನ ಅವನು ಒಬ್ಬ ಸನ್ಯಾಸಿ ಕಾಡಿನಲ್ಲಿ ತಾನು ಮರ ಕಡಿಯುವ ಪ್ರದೇಶದಲ್ಲಿ ಧ್ಯಾನ ಮಾಡುತ್ತಿರುವುದನ್ನು ನೋಡಿದನು.ಆ ಸನ್ಯಾಸಿಯ ಬಳಿಗೆ ತೆರಳಿ ಹೆಚ್ಚು ಹಣ ಸಂಪಾದಿಸುವ ಬಗ್ಗೆ ಮಾರ್ಗದರ್ಶನ ಪಡೆಯಲು ಅವನು ನಿರ್ಧರಿಸಿದನು.

Join Our Whatsapp Group

ಸಂತ ಧ್ಯಾನ ಮುಗಿಸಿ ಕಣ್ಣು ತೆರೆದಾಗ ಮರ ಕಡಿಯುವ ವ್ಯಕ್ತಿ ಹೆಚ್ಚು ಸಂಪಾದಿಸುವ ಮಾರ್ಗೋಪಾಯ ತಿಳಿಸುವಂತೆ  ಕೋರಿದನು. ಆಗ ಆ ಸನ್ಯಾಸಿ ಆತನಿಗೆ ಕಾಡಿನೊಳಗೆ ಹೆಚ್ಚು ದೂರ ಹೋದರೆ ಒಂದೇ ದಿನದ ಶ್ರಮದಲ್ಲಿ ತಿಂಗಳಿಗಾಗುವಷ್ಟು ಸಂಪಾದಿಸಬಹುದೆಂದು ತಿಳಿಸಿದನು ಆ ವ್ಯಕ್ತಿ ಕಾಡಿನೊಳಗೆ ಹೋದಾಗ ಶ್ರೀಗಂಧದ ಮರಗಳನ್ನು ಕಂಡನು.ಅವುಗಳನ್ನು ಕಡಿದು ಮಾರಿದರೆ ಆತ ಸಾಮಾನ್ಯವಾಗಿ ಗಳಿಸುತ್ತಿರುವುದಕ್ಕಿಂತ ಹೆಚ್ಚು ಹಣ ಸಂಪಾದಿಸಬಹುದಿತ್ತು.ಅವನು ಸಂತನ ಬಳಿಗೆ  ತೆರಳಿ ಇಂತಹ ಅಮೂಲ್ಯ ಸಲಹೆ ನೀಡಿದಕ್ಕಾಗಿ ಧನ್ಯವಾದ ಸಮರ್ಪಿಸಿದನು. ಆಗ ಆ ಸನ್ಯಾಸಿ ಕಾಡಿನೊಳಗೆ ಇನ್ನಷ್ಟು ದೂರ ಹೋದರೆ ಈಗ ಗಳಿಸುವುದಕ್ಕಿಂತ ಹೆಚ್ಚು ಸಂಪಾದಿಸಬಹುದು ಸೂಚಿಸಿದನು. ಮರ ಕಡಿಯುವ ವ್ಯಕ್ತಿ ಅರಣ್ಯದಲ್ಲಿ ಮತ್ತಷ್ಟು ದೂರ ಕ್ರಮಿಸಿದಾಗ ಅವನಿಗೆ ಅಲ್ಲೊಂದು ಬೆಳ್ಳಿಯ ಗಣಿ ಕಾಣಿಸಿತು. ಆ ಸಂಪತ್ತು ತಂದ ಅವನು ಸಂತನನ್ನು ಮತ್ತೆ ಭೇಟಿಯಾಗಿ ಹೊಂದಿಸಿದನು.ಮತ್ತೊಮ್ಮೆ ಆಸಂತ ಅವನಿಗೆ ಕಾಡಿನೊಳಗೆ ಇನ್ನಷ್ಟು ದೂರ ಹೋದರೆ ನಿಜವಾದ ಸಂಪತ್ತು ಲಭಿಸಿ ಮುಂದೆ ಇನ್ನೇನೂ ಶ್ರಮಪಡದೆ ಜೀವಿಸಬಹುದೆಂದು ಉಪದೇಶಿಸಿದನು.ಮರ ಕಡಿಯುವ ವ್ಯಕ್ತಿ ಆ ಅರಣ್ಯದೊಳಗೆ  ಬಂಗಾರದ ಗಣಿಯನ್ನು ಮತ್ತೆ ಹಚ್ಚಿದನು. ಅವನು ಬಹಳ ಸಂತೋಷಪಟ್ಟನು. ಆತ ಮತ್ತೆ ಸನ್ಯಾಸಿಯ ಬಳಿ ಬಂದು ತನಗೆ ಅಂತಹ ಅತ್ಯಮೂಲ್ಯವಾದ ಸಂಪತ್ತನ್ನು ಅನುಗ್ರಹಿಸಿದ್ದಕ್ಕಾಗಿ ಅಪಾರ ಕೃತಜ್ಞತೆ ಅರ್ಪಿಸಿದನು.

     ಇದೇ ವೇಳೆ ಆ ವ್ಯಕ್ತಿಗೆ ಇಷ್ಟೆಲ್ಲಾ ಸಂಪತ್ತಿನ ಬಗ್ಗೆ ತಿಳಿದಿರುವ ಸಂತ ತಾನೇ ಏಕೆ ಅದನ್ನು ಪಡೆಯಲು ಪ್ರಯತ್ನಿಸಲಿಲ್ಲ ಎಂಬ ಪ್ರಶ್ನೆ ಕಾಡತೊಡಗಿತ್ತು.

    ಅವನು ಆ ಸಂತನನ್ನು,“ಅರಣ್ಯದೊಳಗೆ ಅಡಗಿರುವ ಈ ಸಂಪತ್ತಿನ ಬಗ್ಗೆ ನಿಮಗೆ ಗೊತ್ತಿದ್ದರೂ ನೀವು ಏಕೆ ಅದನ್ನು ನಿಮ್ಮದಾಗಿಸಿಕೊಳ್ಳಲು ಪ್ರಯತ್ನಿಸಲಿಲ್ಲ?”ಎಂದು ಕೇಳಿದನು ಅದಕ್ಕೆ ಸನ್ಯಾಸಿಯು ಹೀಗೆ ಉತ್ತರಿಸಿದನು……

      ಪ್ರಶ್ನೆಗಳು

 1. ಸನ್ಯಾಸಿ ಉತ್ತರ ಏನಾಗಿತ್ತು?

2.ಈ ಕಥೆಯ ಪರಿಣಾಮವೇನು?

 ಉತ್ತರಗಳು

 1. ಆ ಸನ್ಯಾಸಯು ಹೀಗೆ ಉತ್ತರಿಸಿದನು, “ನೀನು ಪಡೆದುಕೊಂಡಿರುವ ಸಂಪತ್ತು ನಿನಗೆ ಒಂದು ನಿರ್ದಿಷ್ಟ ಅವಧಿಯವರೆಗೆ ಮಾತ್ರ ತೃಪ್ತಿ ನೀಡುತ್ತದೆ. ಆದರೆ ನೀನು ಶಾಶ್ವತವಾದ ಸಂತೋಷ ಅನುಭವಿಸಬೇಕಾದರೆ ನಾನು ಮಾಡುತ್ತಿರುವಂತೆ ಶಾಂತವಾಗಿ ಕುಳಿತು ಆತ್ಮವಲೋಕನವನ್ನು ಮಾಡಿಕೊಳ್ಳಬೇಕು.”

2 ವಸ್ತು ರೂಪದ ಸಂಪತ್ತಿನ ಬೆನ್ನೆತ್ತುವುದರಿಂದ ನಿರಂತರವಾದ ಸಂತೋಷ ಸಿಗುವುದಿಲ್ಲ. ಅದಕ್ಕೆ ಬದಲಾಗಿ ನಮ್ಮ ಬಯಕೆಗಳನ್ನು ಇನ್ನಷ್ಟು ಮತ್ತಷ್ಟು ಕಡಿಮೆ ಮಾಡಿಕೊಳ್ಳುವುದರಿಂದ ಅದನ್ನು ಗಳಿಸಬಹುದು. ಅಂತಹ ಅತ್ಯುನ್ನತ ಆತ್ಮಾನಂದವನ್ನು  ಯೋಗದ ಪರಿಭಾಷೆಯಲ್ಲಿ ‘ಸಮಾಧಿ’ ಎಂದು ಕರೆಯುತ್ತಾರೆ ಸ್ವಾಮಿ ವಿವೇಕಾನಂದರು ‘ಸಮಾಧಿ’ ಯನ್ನು ಬಯಕೆರಹಿತವಾದ ಸ್ಥಿತಿ ಎಂದು ವಿವರಿಸಿದ್ದಾರೆ, ಪರಮಾನಂದ ಯಾವುದೇ ಬಯಕೆ ಇಲ್ಲದಾಗ ನಮಗೆ ಲಭಿಸುತ್ತದೆ.