ಮನೆ ಅಪರಾಧ ಮಂಗಳೂರು: ಬಸ್- ಮೆಡಿಕಲ್ ಕಾಲೇಜು ವಾಹನ ಢಿಕ್ಕಿ; ಹಲವರಿಗೆ ಗಾಯ

ಮಂಗಳೂರು: ಬಸ್- ಮೆಡಿಕಲ್ ಕಾಲೇಜು ವಾಹನ ಢಿಕ್ಕಿ; ಹಲವರಿಗೆ ಗಾಯ

0

ಮಂಗಳೂರು(ದಕ್ಷಿಣ ಕನ್ನಡ): ಮಂಗಳೂರಿನ ನಾಟೆಕಲ್ ನಲ್ಲಿ ಬಸ್- ಮೆಡಿಕಲ್ ಕಾಲೇಜು ವಾಹನ ಢಿಕ್ಕಿಯಾಗಿ ಹಲವರು ಗಾಯಗೊಂಡಿದ್ದಾರೆ.

Join Our Whatsapp Group

ಕೊಣಾಜೆ ಠಾಣಾ ವ್ಯಾಪ್ತಿಯ ಉರುಮಣೆ ಬಳಿ ರೂಟ್ ಬಸ್ ಮತ್ತು ಮೆಡಿಕಲ್ ಕಾಲೇಜು ಬಸ್ ಮುಖಾಮುಖಿ ಢಿಕ್ಕಿಯಾಗಿದ್ದು, ವಿದ್ಯಾರ್ಥಿಗಳು ಹಾಗೂ ಪ್ರಯಾಣಿಕರಿಗೆ ಗಾಯಗಳಾಗಿವೆ.

ಪುತ್ತೂರಿನಿಂದ ಮಂಜನಾಡಿ ರಸ್ತೆಯಾಗಿ ಮಂಗಳೂರಿಗೆ ತೆರಳುತ್ತಿದ್ದ ಶಿವಶಂಕರ್ ಬಸ್, ಯೇನಪೋಯ ಮೆಡಿಕಲ್ ಕಾಲೇಜಿನ ಬಸ್ ಮಧ್ಯೆ ಪರಸ್ಪರ ಢಿಕ್ಕಿಯಾಗಿದೆ.

ಢಿಕ್ಕಿ ಹೊಡೆದ ರಭಸಕ್ಕೆ ಎರಡು ವಾಹನಗಳಿಗೂ ಹಾನಿಯಾಗಿದೆ. ಘಟನೆಯಿಂದ ಕೆಲ ಕಾಲ ವಾಹನ ಸಂಚಾರ ಸ್ಥಗಿತಗೊಂಡಿತ್ತು.

ಘಟನಾ ಸ್ಥಳಕ್ಕೆ ದಕ್ಷಿಣ ಸಂಚಾರಿ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.