ರಾಮನಗರ ಜಿಲ್ಲೆ ಕನಕಪುರ ತಾಲ್ಲೂಕು ಕೆಬ್ಬರೆ
ಭಜೇ ಸಮೀರನಂದನಂ ಸುಭಕ್ತಚಿತ್ತರಂಜನಂ
ದಿನೇಶರೂಪಭಕ್ಷಕಂ ಸಮಸ್ತಭಕ್ತರಕ್ಷಕಂ
ಸುಕಂಠಕಾರ್ಯಸಾಧಕಂ ವಿಪಕ್ಷಪಕ್ಷಬಾಧಕಂ
ಸಮುದ್ರಪಾರಗಾಮಿನಂ ನಮಾಮಿ ಸಿದ್ಧಕಾಮಿನಂ
ಈ ಕ್ಷೇತ್ರವು ದಟ್ಟವಾದ ಕಾಡಿನಿಂದ ಅಮೃತವಾಗಿರುವುದಲ್ಲದೆ ಕಾಡು ಮೃಗಗಳು ಅದರಲ್ಲೂ ಆನೆಗಳ ಸಂಚಾರವಿರುವ ಈ ಕಾಡಿನಲ್ಲಿ ಯಾವ ಪ್ರಾಣಿಗಳಿದ್ದರೂ ಈ ಕ್ಷೇತ್ರಕ್ಕೆ ಬರುವಂತಹ ಭಕ್ತಾದಿಗಳಿಗೆ ಯಾವುದೇ ಅನಾಹುತ ಸಂಭವಿಸಿಲ್ಲ.
ಈ ಸುಂದರವಾದ ಪ್ರಕೃತಿ ಸೌಂದರ್ಯದ ಮಧ್ಯ ಇರುವ ಬೆಟ್ಟದ ಮೇಲೆ ನೆಲೆಸಿದ್ದಾನೆ ನಮ್ಮ ವಿಶೇಷವಾದ ಲಿಂಗರೂಪಿ ಹನುಮ ಮತ್ತು ಕೇಳಿದ ವರಗಳನ್ನು ಅತಿ ಶೀಘ್ರವಾಗಿ ಕರುಣಿಸುವವನು ಈ ಕ್ಷೇತ್ರದ ಗೋವಿನ ಕಲ್ಲು ಹನುಮ.
ಈ ಕ್ಷೇತ್ರಕ್ಕೆ ಈ ಹೆಸರು ಬರಲು ಕಾರಣವೇನೆಂದರೆ ಗೋವು ಎಂದರೆ ಹಸು.ಒಂದು ಹಸು ದಿನ ಗೋವಿನಕಲ್ಲು ಕ್ಷೇತ್ರಕ್ಕೆ ಬರುವುದು, ಆ ಹಸುವಿನ ಮುಂದೆ ಬಾಲರೂಪಿ ಹನುಮ ಪ್ರತ್ಯಕ್ಷನಾಗಿ ಆ ಹಸುವಿನ ಹಾಲು ಸ್ವೀಕರಿಸಿ ನಂತರ ಅದೃಶ್ಯನಾಗುತ್ತಿದ್ದ. ಹೀಗೆ ನಡೆಯುತ್ತಿತ್ತು ಆ ಹಸು ಮನೆಗೆ ಬಂದರೆ ಹಾಲು ಕೊಡುತ್ತಿರಲಿಲ್ಲ
ಹಸುವಿನ ಯಜಮಾನ ಹಸು ಕಾಯುವನನ್ನು ಗದರಿಸಿದ, ಎಲ್ಲಾ ಹಾಲು ನೀನೆ ಕರೆದುಕೊಂಡು ಬಿಡುತ್ತಿಯಾ ಮನೆಯಲ್ಲಿ ಹಸು ಹಾಲು ಕೊಡುತ್ತಿಲ್ಲ ಎಂದು. ಆ ಹಸು ಕಾಯುವವ ಇಲ್ಲ ಎಂದು ಹೇಳಿದಾಗ ಯಜಮಾನ ಒಂದು ದಿನ ನಾನೇ ಬರುತ್ತೇನೆ ಎಂದು ಹಸುವಿಗೆ ಒಂದು ಗಿಡದ ಬಳ್ಳಿಯನ್ನು ಕಟ್ಟಿ ಅದನ್ನು ಹಿಂಬಾಲಿಸಿದಾಗ ಅವನು ಆ ದೃಶ್ಯವನ್ನು ನೋಡಿದ.
ಬಾಲರೂಪಿ ಹನುಮ ಬಂದು ಹಾಲನ್ನು ಸ್ವೀಕರಿಸುತ್ತಿರುತ್ತಾನೆ. ಹೀಗಾಗಿ ಈ ಕ್ಷೇತ್ರಕ್ಕೆ ಗೋವಿನ ಕಲ್ಲು ಹನುಮ ಎಂದು ಮತ್ತು ಹನುಮಗಿರಿ ಬೆಟ್ಟ ಎಂದು ಹೆಸರಾಗಿದೆ. ಆಗ ಬಾಲ ಹನುಮ ಅಲ್ಲಿ ಪ್ರತ್ಯಕ್ಷನಾಗಿ ಕ್ಷೇತ್ರದಲ್ಲಿ ನಾನು ಗೋವಿನಕಲ್ಲು ಹನುಮನಾಗಿ ಇಲ್ಲಿ ನೆಲೆಗೊಳ್ಳುತ್ತೆನೆ.ಯಾರು ನನ್ನ ಸಾನ್ನಿಧ್ಯಕ್ಕೆ ಬರುತ್ತಾರೋ ಅಂಥ ಬಂದಂತಹ ಭಕ್ತಾದಿಗಳಿಗೆ ಶೀಘ್ರವಾಗಿ ವರವನ್ನು ದಯಪಾಲಿಸುತ್ತಿನಿ ಎಂದು ಹೇಳಿ ಭಗವಂತ ಇಲ್ಲಿ ನೆಲೆನಿಂತಿದ್ದಾನೆ.
ಗೋವಿನಕಲ್ಲು ಹನುಮನ ಕ್ಷೇತ್ರ ವಿಶೇಷವಾಗಿ ಶ್ರೀನಿವಾಸನ ಕಲ್ಯಾಣದ ಇತಿಹಾಸ ಕೊಡ ಹೋಲುತ್ತದೆ. ಎಲ್ಲಾ ಕ್ಷೇತ್ರದಲ್ಲಿ ಹನುಮನ ವಿಗ್ರಹಗಳಿರುತ್ತದೆ ಆದರೆ ಗೋವಿನ ಕಲ್ಲು ಕ್ಷೇತ್ರದಲ್ಲಿ ಲಿಂಗರೂಪದಲ್ಲಿ ಹನುಮ ದೇವರು ದರ್ಶನ ನೀಡುತ್ತಿದ್ದಾರೆ.
ಇದು ಈ ಗೋವಿನ ಕಲ್ಲು ಕ್ಷೇತ್ರದ ವಿಶೇಷ.ಇಡೀ ಪ್ರಪಂಚದಲ್ಲಿ ಲಿಂಗ ರೂಪಿ ಹನುಮ ಇರುವ ಏಕೈಕ ಕ್ಷೇತ್ರವೆಂದರೆ ಗೋವಿನಕಲ್ಲು ಹನುಮ ಕ್ಷೇತ್ರದಲ್ಲಿ ಮಾತ್ರ ಅದರಲ್ಲೂ ಕೊಡ ಹೊನ್ನೆ ಮರದಲ್ಲಿ ನೆಲೆಸಿರುವುದು ಬಹಳ ವಿಶೇಷವಾಗಿದೆ.
ಲಿಂಗಾಕೃತಿಯಲ್ಲಿ ದರ್ಶನ ನೀಡಿರುವ ಹನುಮ ದೇವರ ಈ ಕ್ಷೇತ್ರ ಕೂಡ ಬಹಳ ವಿಶೇಷವಾಗಿದೆ. ಕೆಲವೆ ಕ್ಷೇತ್ರಗಳಲ್ಲಿ ಅಥವಾ ದೇವಾಲಯಗಳಲ್ಲಿ ಮಾತ್ರ ಅಪರೂಪವಾಗಿ ಹನುಮ ಎರಡು ನೇತ್ರ ದರ್ಶನ ನೇರವಾಗಿ ಮಾಡಬಹುದು. ಇಲ್ಲೂ ಕೂಡ ಹನುಮನ ಎರಡು ನೆತ್ರ ದರ್ಶನ ನೇರವಾಗಿ ಮಾಡಬಹುದು ಇದೊಂದು ಈ ಕ್ಷೇತ್ರದ ವಿಶೇಷ.
ಈ ಕ್ಷೇತ್ರದಲ್ಲಿ ನಿರುದ್ಯೋಗಿಗಳು, ಸಂತಾನ ಪಲಾಪೇಕ್ಷಿಗಳು, ಮದುವೆ ವಿಳಂಬವಾದವರು ಇಲ್ಲಿ ಹರಕೆ ಹೊತ್ತು ಹನುಮನಿಗೆ ಸೇವೆ ಸಲ್ಲಿಸಿದವರಿಗೆ ಅತಿ ಶೀಘ್ರವಾಗಿ ಹನುಮನು ಅವರನ್ನು ಅನುಗ್ರಹಿಸಿ ಅಪೇಕ್ಷೆಯನ್ನು ಈಡೇರಿಸಿದ್ದಾನೆ ಮತ್ತು ಇಲ್ಲಿ ಶನಿದೋಷವಿದ್ದವರು ಬಂದು ಹನುಮನಿಗೆ ಎಳ್ಳು ದೀಪ ಹಚ್ಚಿದರೆ ಶನಿದೋಷ ನಿವಾರಣೆ ಆಗುತ್ತದೆ
ಈ ಕ್ಷೇತ್ರದಲ್ಲಿ ಒಂದು ಗಾರೆ ಗುಹೆ ಇದೆ ಈ ಗುಹೆಯಿಂದ ಅಮಾವಾಸ್ಯೆ ಯಂದು ಘಂಟನಾದಗಳು, ಮಂಗಳ ವಾದ್ಯಗಳು ಮತ್ತು ಶ್ರೀರಾಮ ಶ್ರೀರಾಮ ಎನ್ನುವ ನಾಮಸ್ವರಣೆ ಕೇಳಿ ಬರುತ್ತದೆ. ಈ ಕ್ಷೇತ್ರದಲ್ಲಿ ಅರ್ಚಕರುಗಳು ಕೇಳಿಸಿಕೊಂಡಿದ್ದಾರೆ. ಅವರ ಪ್ರಕಾರ ಆ ಗುಹೆಯಲ್ಲಿ ಹನುಮ ಶ್ರೀ ರಾಮನನ್ನು ಪೂಜಿಸಿ ತಪಗೈಯಬಹುದು ಎಂದು ತಿಳಿಸಿದ್ದಾರೆ.
ಸುಮಾರು ವರ್ಷಗಳ ಹಿಂದೆ ಗುಹೆಯಲ್ಲಿ ಏನಿರಬಹುದು ಎಂದು ವೀಕ್ಷಣೆ ಮಾಡಲು ಹೋದಾಗ ಅಲ್ಲಿ ಒಂದು ಸುಂದರವಾದ ಶ್ರೀ ಪಟ್ಟಾಭಿರಾಮ ವಿಗ್ರಹ ದೊರಕಿ ಅದನ್ನು ಅವರು ಮನೆಗೆ ಕೊಂಡೊಯ್ದು ಇಟ್ಟಾಗ ಅವರ ಮನೆಯಲ್ಲಿ ಬಹಳ ತೊಂದರೆಗಳಾಗಿ ಅವರು ಶಾಸ್ತ್ರ ಕೇಳಿದಾಗ ನಿಮ್ಮ ಮನೆಯಲ್ಲಿ ತಂದು ಇಟ್ಟುಕೊಂಡ ವಿಗ್ರಹ
ನೀವು ಅಲ್ಲಿಯೇ ಇಟ್ಟು ಬನ್ನಿ ಎಲ್ಲಾ ಸರಿ ಹೋಗುತ್ತದೆ ಎಂದು ತಿಳಿಸಿದಾಗ ಅವರು ಹಾಗೆ ಮಾಡಲು ಅವರ ಸಮಸ್ಯೆ ಸರಿ ಹೋಯಿತು ಎಂದು ಪೂರ್ವಿಕರು ತಿಳಿಸಿದ್ದಾರೆ.
ಇಲ್ಲಿ ಮತ್ತೊಂದು ವಿಶೇಷವಾದ ಗಣಪತಿ ದೇವಾಲಯವಿದೆ ಈ ಗಣಪತಿಯನ್ನು ಪೂಜಿಸಿ ಅಭಿಷೇಕ ಮಾಡಿಸಿ ಒಂದು ವೀಳ್ಯದೆಲೆಯ ಮೇಲೆ ಮಕ್ಕಳ ವಿದ್ಯಾಭ್ಯಾಸದ ಕೋರಿಕೆಯನ್ನು ಬರೆದು ಅಲ್ಲಿರುವ ಕಲ್ಯಾಣಿ ಒಳಗೆ ಆ ವಿಳ್ಳೆದೆಲೆ ಬಿಟ್ಟರೆ ಮಕ್ಕಳು ವಿದ್ಯಾಭ್ಯಾಸದಲ್ಲಿ ಅಭಿವೃದ್ಧಿ ಹೊಂದುತ್ತಾರೆ.
ಮತ್ತೊಂದು ಬಹಳ ವಿಶೇಷವಾಗಿ ಸಂಜೀವಿನಿ ತೀರ್ಥವಿದೆ ಈ ತೀರ್ಥದ ವಿಶೇಷವೇನೆಂದರೆ ವರ್ಷದ 365 ದಿನಗಳು ಈ ಕಲ್ಯಾಣಿಯಲ್ಲಿ ಗಂಗಾಮಾತೆಯು ಇರುತ್ತಾಳೆ. ಈ ತೀರ್ಥವು ಎಂದೂ ಬತ್ತುವುದಿಲ್ಲ ಈ ಕಲ್ಯಾಣಿ ತೀರ್ಥಕ್ಕೆ ಸಂಜೀವಿನಿ ತೀರ್ಥ ಎಂದು ಹೆಸರು ಬರಲು ಕಾರಣವೇನೆಂದರೆ ಹನುಮ ದೇವರು ಲಕ್ಷ್ಮಣ ದೇವರು ಮೂರ್ಛೆ ಹೋದಾಗ ಸಂಜೀವಿನಿ ಮೂಲಿಕೆ ತೆಗೆದುಕೊಂಡು ಹೋಗುವ ಸಂದರ್ಭದಲ್ಲಿ ಆ ಒಂದು ಸಂಜೀವಿನಿ ಮೂಲಿಕೆ ಈ ಕ್ಷೇತ್ರದಲ್ಲಿ ಬಿದ್ದಿದ್ದರಿಂದ ಇಲ್ಲಿ ಸಂಜೀವಿ ತೀರ್ಥ ಉದ್ಭವವಾಗಿದೆ ಎಂದು ಹೇಳುತ್ತಾರೆ. ಇದನ್ನು ತೀರ್ಥ ರೂಪದಲ್ಲಿ ಭಕ್ತಾದಿಗಳು ತೆಗೆದುಕೊಳ್ಳುತ್ತಾರೆ ಈ ತೀರ್ಥದ ವಿಶೇಷವೇನೆಂದರೆ ಅನೇಕ ತರಹದ ಕಾಯಿಲೆಗಳು ವಾಸಿಯಾಗುತ್ತದೆ ಈ ತೀರ್ಥ ಸೇವನೆಯಿಂದ.
ಇಲ್ಲಿ ಪ್ರತಿ ಶನಿವಾರ ಭಾನುವಾರ ವಿಶೇಷ ಪೂಜೆ ಮತ್ತು ಅನ್ನದಾಸೋಹಗಳಿರುತ್ತದೆ. ಹನುಮನ ಜಯಂತಿಯಂದು ಬ್ರಹ್ಮರಥೋತ್ಸವ ನಡೆಯುತ್ತದೆ.ಯುಗಾದಿ ಆದ 8 ದಿನಕ್ಕೆ ಶ್ರೀ ರಾಮನವಮಿಯ ಬಹಳ ವಿಜ್ರಂಭಣೆಯಿಂದ ನಡೆಸುತ್ತಾರೆ ಈ ಕ್ಷೇತ್ರವನ್ನು ತಲುಪಲು ಮೆಟ್ಟಿಲು ಮಾರ್ಗದಿಂದಲೂ ಹೋಗಬಹುದು ಅಥವಾ ವಾಹನಗಳ ಮಾರ್ಗದಿಂದಾದರೂ ತಲುಪಬಹುದು.