ಮನೆ ರಾಜ್ಯ ನಾವು ನಿರೀಕ್ಷಿಸಿದ ಫಲಿತಾಂಶ ಜೆಡಿಎಸ್‌ಗೆ ಬಂದಿದೆ: ಎಚ್‌.ಡಿ. ಕುಮಾರಸ್ವಾಮಿ

ನಾವು ನಿರೀಕ್ಷಿಸಿದ ಫಲಿತಾಂಶ ಜೆಡಿಎಸ್‌ಗೆ ಬಂದಿದೆ: ಎಚ್‌.ಡಿ. ಕುಮಾರಸ್ವಾಮಿ

0

ಬೆಂಗಳೂರು: ನಾವು ನಿರೀಕ್ಷಿಸಿದ ಫಲಿತಾಂಶ ಜೆಡಿಎಸ್‌ಗೆ ಬಂದಿದೆ, ಆದರೆ ಹಾಸನದಲ್ಲಿ ಬಂದ ಫಲಿತಾಂಶವನ್ನು ನಾನು ನಿರೀಕ್ಷಿಸಿರಲಿಲ್ಲ ಎಂದು ಮಂಡ್ಯದಲ್ಲಿ ಭರ್ಜರಿ ಗೆಲುವಿನ ಬಳಿಕ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್‌.ಡಿ. ಕುಮಾರಸ್ವಾಮಿ ಮಾಧ್ಯಮ ಪ್ರತಿಕ್ರಿಯೆ ನೀಡಿದ್ದಾರೆ.

Join Our Whatsapp Group

ಕರ್ನಾಟಕದಲ್ಲಿ ನಾವು ಇನ್ನೂ 4-5 ಸ್ಥಾನಗಳನ್ನು ಗೆಲ್ಲಬಹುದಿತ್ತು. ನಮ್ಮ ತಪ್ಪುಗಳಿಂದ ನಾವು 4-5 ಕ್ಕೂ ಹೆಚ್ಚು ಸ್ಥಾನಗಳನ್ನು ಕಳೆದುಕೊಂಡಿದ್ದೇವೆ. ಕರ್ನಾಟಕದಲ್ಲಿ ಜೆಡಿಎಸ್ ಇನ್ನೂ ಜೀವಂತವಾಗಿದೆ ಎಂದು ಜನರು ಕಾಂಗ್ರೆಸ್‌ಗೆ ತೋರಿಸಿದ್ದಾರೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ.

ಜೆಡಿಎಸ್ ಸ್ಪರ್ಧಿಸಿದ ಮೂರು ಸ್ಥಾನಗಳ ಪೈಕಿ ಎರಡನ್ನು ಗೆದ್ದಿದೆ. ಜೆಡಿಎಸ್ ನ ಮತ ಬ್ಯಾಂಕ್ ಹೊಂದಿರುವ ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಬಿಜೆಪಿ ಗೆಲುವು ಸಾಧಿಸುವಲ್ಲಿ ಬಿಜೆಪಿಗೆ ನೆರವಾಗಿದೆ.