ಮನೆ ಅಪರಾಧ ಹಾಸನ: ರೌಡಿಶೀಟರ್ ಚೈಲ್ಡ್ ರವಿ ಬರ್ಬರ ಹತ್ಯೆ

ಹಾಸನ: ರೌಡಿಶೀಟರ್ ಚೈಲ್ಡ್ ರವಿ ಬರ್ಬರ ಹತ್ಯೆ

0

ಹಾಸನ: ರೌಡಿಶೀಟರ್ ವೊಬ್ಬರ ಬರ್ಬರ ಹತ್ಯೆಯಾದ ಘಟನೆ ಇಲ್ಲಿನ ಹೇಮಾವತಿ ನಗರದಲ್ಲಿ ನಡೆದಿದೆ.

Join Our Whatsapp Group

ರೌಡಿಶೀಟರ್ ಚೈಲ್ಡ್ ರವಿ ( 45) ಅವರ ಬರ್ಬರ ಹತ್ಯೆಯಾಗಿದ್ದು, ಬೆಳಿಗ್ಗೆ ಸುಮಾರು 8.30ರ ವೇಳೆಗೆ ಮೂವರು ದುಷ್ಕರ್ಮಿಗಳು ಹತ್ಯೆ ಮಾಡಿದ್ದಾರೆ.

ಹಾಸನ ನಗರದ ಹೇಮಾವತಿ ನಗರದ ರಾಯಲ್ ಅಪೊಲೊ ಶಾಲೆ ಹಿಂಭಾಗ ರೌಡಿ ಶಿಟರ್ ಚೈಲ್ಡ್ ರವಿ ಎಂಬಾತನನ್ನು ಆತನ ಮನೆ ಸಮೀಪವೇ ಮೂವರು ದುಷ್ಕರ್ಮಿಗಳು ಬುಧವಾರ ಬೆಳಿಗ್ಗೆ ಹತ್ಯೆ ಮಾಡಿದ್ದಾರೆ.

ಚೈಲ್ಡ್ ರವಿ ತನ್ನ ಮನೆಯ ಸಮೀಪ ನೀರು ತರಲು ಹೋದಾಗ ಅವರನ್ನು ಹಿಂಬಾಲಿಸಿ ಲಾಂಗು-ಮಚ್ಚುಗಳಿಂದ ಕೊಚ್ಚಿ ಹತ್ಯೆ ಮಾಡಿದ್ದಾರೆ.

ರೌಡಿಶಿಟರ್ ರವಿ ವಿರುದ್ಧ ಎರಡು ಕೊಲೆ ಸೇರಿದಂತೆ ವಿವಿಧ ಕ್ರಿಮಿನಲ್ ಪ್ರಕರಣಗಳಿದ್ದು, ಹಾಸನ ನಗರ ಪೊಲೀಸ್ ಠಾಣೆಯಲ್ಲಿ ರೌಡಿ ಶೀಟ್ ತೆರೆಯಲಾಗಿತ್ತು.

ಸ್ಥಳಕ್ಕೆ ಹಾಸನ ಪೆನ್ಷನ್ ಮೊಹಲ್ಲಾ ಠಾಣೆ ಪೊಲೀಸರು ಭೇಟಿ ನೀಡಿದ್ದಾರೆ.