ನೀವು ಕೆಲವು ಹಿರಿಯರನ್ನು ಬೇಕಾದರೆ ನೋಡಿ ಲೈಂಗಿಕ ಶಿಕ್ಷಣ ಎಂದ ತಕ್ಷಣ ಇರಿಸು ಮುರಿಸಿನ ಭಾವನೆಯನ್ನು ವ್ಯಕ್ತಪಡಿಸುತ್ತಾರೆ.ಇದು ಏನನ್ನು ಸೂಚಿಸುತ್ತದೆ ಅವರಲ್ಲಿ ನೈತಿಕ ವಿಕಾಸವು ಅದೇ ಹರೆಹರೆಯದ ಹಂತಕ್ಕೆ ನಿಂತು ಹೋಗಿರುವುದನ್ನು ಸೂಚಿಸುತ್ತದೆ. ಕೊಹಲ್ ಬರ್ಗ್ ಎಂಬ ಮನವಿಜ್ಞಾನಿ ನೈತಿಕ ವಿಕಾಸದ ಸಿದ್ಧಾಂತವನ್ನು ಮಂಡಿ ಸಿದ್ದಾರೆ. ಅದರಲ್ಲಿ ನಾಲ್ಕನೆಯ ಹಂತವು ಪರಿಸರದಲ್ಲಿರುವುದನ್ನು ಯಥಾ ರೀತಿಯಲ್ಲಿ ಪಾರಿಪಾಲಿಸುವುದನ್ನೇ ನೈತಿಕತೆ ಎಂದು ತೀರ್ಮಾನ ತೆಗೆದುಕೊಳ್ಳುವ ಹಂತವಾಗಿದೆ.
ಇಂದು ಅದಿಹರಿಯದಲ್ಲಿ ಕಂಡುಬರುವ ಪ್ರವೃತ್ತಿಯಾಗಿದೆ ಆದರೆ ಕೊಹಲ್ ಬರ್ಗ್ ಅವರ ನೈತಿಕ ವಿಕಾಸದ ಸಿದ್ಧಾಂತ ಇನ್ನು ಎರಡು ಹಂತಗಳಷ್ಟು ವಿಸ್ತರಿಸುತ್ತದೆ. ಹದಿಹರೆಯದ ಲ್ಲಿ ಹಂತದ ನೈತಿಕ ವಿಕಾಸವು ನಡೆದ ನಂತರ ಒಬ್ಬ ವ್ಯಕ್ತಿಯು ಇನ್ನೊಬ್ಬನ ವ್ಯಯಕ್ತಿಕ ಹಕ್ಕುಗಳು ಮತ್ತು ಸಮಾಜದ ನಿಯಮಗಳನ್ನು ತೂಗಿ ನೋಡಿ ಯಾವುದನ್ನು ಸರಿ ಎಂದು ನಿರ್ಧರಿಸುವ ಹಂತವು ಬರುತ್ತದೆ. ಈ ಹಂತದ ವಿಕಾಸವು ನಡೆಯಬೇಕಾದರೆ ವಿಮರ್ಶಾತ್ಮಕ ಸಾಮರ್ಥ್ಯ,ಸನ್ನಿವೇಶವನ್ನು ಅರ್ಥ ಮಾಡಿಕೊಳ್ಳುವ ಸಾಮರ್ಥ್ಯಗಳೆಲ್ಲ ಇರಬೇಕು. ಈ ಹಂತವನ್ನಕ ದಾಟಿದ ನಂತರ ಇನ್ನೊಂದು ಕೊನೆಯ ಹಂತವಿದೆ. ಯಾವುದು ನೀತಿ,ಯಾವುದು ಅನೀತಿ ಎಂಬುದರ ಅಂತಿಮ ನಿರ್ಧಾರವು ವ್ಯಕ್ತಿಯ ಆತ್ಮ ಸಾಕ್ಷಿ ಗನುಗುಣವಾಗಿ ನಡೆಯುತ್ತದೆ.
ಆತ್ಮ ಸಾಕ್ಷಿಯ ನಿರ್ಧಾರಗಳಲ್ಲೂ ಕೂಡ ಪರಿಸರದ ಸ್ಥಿತಿಗೆ ಬದ್ಧವಾಗಿರುತ್ತದೆ.ಆದರೆ ಪರಿಸರದ ನಿಯಮಗಳನ್ನು ನಿಜವಾದ ಮೌಲ್ಯಕ್ಕೆ ವಿರುದ್ಧವಾಗಿದ್ದರೆ ವ್ಯಕ್ತಿಯು ತೆಗೆದುಕೊಳ್ಳುವ ನೈತಿಕ ತೀರ್ಮಾನವನ್ನು ಪರಿಸರದ ತೀರ್ಮಾನವನ್ನು ಉಲ್ಲಂಘಿಸಬಹುದು. ಉದಾಹರಣೆಗೆ ಒಬ್ಬ ಮನುಷ್ಯ ಹೋಟೆಲ್ ನಿಂದ ಇಡ್ಲಿಯನ್ನು ಕದಿಯುತ್ತಾನೆ ಎಂದು ಭಾವಿಸಿ ಕಳ್ಳತನ ತಪ್ಪು ಎನ್ನುವುದು ಪರಿಸರದ ನಿಯಮ ಹದಿಹರೆಯದ ಹಂತದ ನೈತಿಕ ವಿಕಾಸವು ಕಳ್ಳತನವಾಗಿ ದಂಡಿಸುವುದನ್ನು ಒಪ್ಪುತ್ತದೆ ಆದರೆ ನಿಮ್ಮಲ್ಲಿ ನೈತಿಕ ವಿಕಾಸವು ಆರನೆಯ ಹಂತದವರೆಗೆ ವಿಸ್ತರಿಸದಿದ್ದರೆ ಹಾಗಾಗಿ ಇಡ್ಲಿ ಕದ್ದದ್ದನ್ನು ತಪ್ಪು ಎಂದು ಒಪ್ಪುವುದಿಲ್ಲ. ಯಾಕೆಂದರೆ ಹೋಟೆಲ್ ನಿಂದ ಅವನು ಹಣ ಕದ್ದಿಲ್ಲ ಪಾತ್ರೆಗಳನ್ನು ಕದ್ದಿಲ್ಲ. ವಸ್ತುಗಳನ್ನು ಹಾಳು ಮಾಡಿಲ್ಲ ಹಸಿವು ತಡೆಯಲು ಆಗದೆ ಕದ್ದಿದ್ದಾನೆ.ಹಸಿವು ಇಲ್ಲಿ ನಿಜವಾದ ಕಾರಣವೂ ಶಾಶ್ವತವಾದ ಮೌಲ್ಯವು ಆಗಿರುತ್ತದೆ. ಅದ್ದರಿಂದ ಸನ್ನಿವೇಶದಲ್ಲಿ ಕಳ್ಳತನಕ್ಕೆ ದಂಡನೆ ಸೂಕ್ತವಲ್ಲ ಎಂಬ ತೀರ್ಮಾನಕ್ಕೆ ನೀವು ಬರುತ್ತೀರಿ ನಿಮ್ಮಲ್ಲಿ ನೈತಿಕ ವಿಕಾಸವು ಈ ಹಂತದ ತನಕವೂ ಬೆಳೆಯುವಂತೆ ನೋಡಿಕೊಳ್ಳಿ. ಆಗ ವಿಕಾಸವು ಪಕ್ವವಾಗುತ್ತದೆ.