★ ರೋಗಿ ಏನಾದರೂ ಆಂಜೈನದವರಾಗಿದ್ದರೆ ತಕ್ಷಣ ನಿತ್ರೋ ಗಲಿಚೇರಿನೇ ಮಾತ್ರೆಯನ್ನು ಚೀಪಿರಿ.
★ಹೊಟ್ಟೆಯಲ್ಲಿ ಅಲ್ಸರ್ ಇಲ್ಲದಿದ್ದಲ್ಲಿ ಮಾತ್ರ, ಅರ್ಥ ಆಸ್ಪರಿನ್ ಮಾತ್ರೆಯನ್ನು ಸೇವಿಸಿ.
★ ಬಿಗಿ ಬಟ್ಟೆಗಳಿದ್ದರೆ ಸಡಿಲಿಸಿ, ಗಾಳಿಯಾಡುವಂತೆ ಮಾಡಿ.
★ಗಾಳಿ ಬರುವ ಜಾಗದಲ್ಲಿ ಮಲಗಿ ಸಿ.ಉಸಿರಾಡಲು ತೊಂದರೆಯಾದಲ್ಲಿ ಎರಡು ತಲೆ ದಿಂಬನ್ನು ತಲೆಕೆಳಕ್ಕೆ ಇಡಿ.
★Digene ನಂತಹ ಆಂಟಾಸಿಡ್ ಮತ್ರೆಗಳಿದ್ದರೆ ಸೇವಿಸಿ.
★ ಎಳನೀರು,ಗ್ಲೂಕೋಸ್ ನೀರು ಸೇವಿಸಿ.
★ಸಿಗರೇಟ್,ಮಧ್ಯಪಾನ ಸಂಪೂರ್ಣ ಮರೆತುಬಿಡಿ.
ಹೃದಯಘಾತದಿಂದ ಹೊರ ಬಂದಾಗ:-
★ಹೃದಯಘಾತವಾದಾಗ ಭಯ, ಚಿಂತೆ,ಖಿನ್ನತೆಗಳು ಸಹಜ. ಎದೆ ನೋವಿಗೆ ಭಯಪಡದವರು ಆಂಟ್ಯಾಕ್ ನಂತರ ಒಂದು ಚಿಕ್ಕ ನೋವಿಗೂ ಹೆದರುತ್ತಾರೆ. ಕೆಲಸ ಸಮಯದ ನಂತರ ಸರಿ ಹೋಗುತ್ತಾರೆ.
★ ಹೃದಯಾಘಾತ ಆಗಿ ಗುಣವಾದ ಶೇ. 80 – 90 ರಷ್ಟು ರೋಗಿಗಳು 8- 10 ವಾರದಲ್ಲಿ ತಮ್ಮ ಮಾಮೂಲು ದೈನಂದಿನ ಕಾರ್ಯಗಳನ್ನು ನಿರ್ವಹಿಸಬಲ್ಲರು.ಆದರೆ ಹೃದಯ ಎಷ್ಟು ಹಾನಿಯಾಗಿದೆ ಎಂಬುದರ ಮೇಲೆ ಅವರ ಕಾರ್ಯ ತತ್ವರತೆ ಅವಲಂಬಿಸಿರುತ್ತದೆ. ಇದರ ಬಗ್ಗೆ ಡಾಕ್ಟರರು ಸಲಹೆ ಸೂಚನೆ ನೀಡುತ್ತಾರೆ.
★15.ರಿಂದ ನಿಮಿಷಗಳ ಒಳಗಿನ ವೈದ್ಯರ ಸಹಾಯ ಅವಶ್ಯ ಬೇಕು ಆಗ ಪ್ರಾಣ ಉಳಿಸಿಕೊಳ್ಳುವಲ್ಲಿ ಯಶಸ್ವಯಾಗಬಹುದು. ವೈದ್ಯರ ಸೇವೆ ತಡವಾದಲ್ಲಿ ಹೃದಯ ಸ್ನಾಯುಗಳ ಕಣ್ಣಚಾಲಕ್ಕೆ ಹಾನಿಯಾಗುವುದು. ಒಂದು ಸಾರಿ ಹಾನಿಯಾದರೆ ಮತ್ತೆ ಮಾಮೂಲು ಸ್ಥಿತಿಗೆ ಮರಳದು.
★ವ್ಯಾಯಾಮ,ಆಟ ಆಡುವುದು ಇತ್ಯಾದಿಯನ್ನು ಡಾಕ್ಟರ್ ಸಲಹೆ ಮೇರೆಗೆ ಮಾಡಬೇಕು.
★ಅತಿ ಭಾರ ಎತ್ತಬಾರದು, ತೂಕ ಹಾಕಿಕೊಳ್ಳಬಾರದು.
★ಅವಸರದಲ್ಲಿ ಊಟ ಮಾಡಬಾರದು ಮಲಗುವ ಮುನ್ನ ಎರಡು ಗಂಟೆಗೆ ಮೊದಲೇ ಲಘುವಾಗಿ ಆಹಾರ ಸೇವಿಸಿ.
★ಡಾಕ್ಟರ್ ಸಲಹೆ ನೀಡಿ ಔಷಧಿಗಳ ನಿಯಮಿತವಾಗಿ ಸೇವಿಸಿರಿ. ಯಾವ ಕಾರಣಕ್ಕೂ ಸೇವನೆಯನ್ನು ತಪ್ಪಿಸಬಾರದು.Inderal, Ciplar Tenomin ತರಹ ಔಷಧಿ ಕಡ್ಡಾಯವಾಗಿ ಸೇವಿಸಿ.
★Glycery Trinitrate ಸದಾ ರೋಗಿಯ ಬಳಿ ಇರಲಿ, ಇವು ತಯಾರಾದ ವರ್ಷದ ಒಳಗಿನವಾಗಿರಬೇಕು.
ಹೃದಯ ಸ್ತಂಭನವಾದಾಗ ಏನು ಮಾಡಬೇಕು ?
★ ಹೃದಯಾಘಾತ ಯಾರಿಗಾದರೂ, ಯಾವ ಸಮಯದಲ್ಲಾದರೂ, ಆಗಬಹುದು. ಬಹಳ ಜನ ಇದರಿಂದ ಮರಣ ಹೊಂದುತ್ತಾರೆ.ಅವರೆಲ್ಲ ಸ್ಥೂಲದೇಹಿಗಳು, ಒತ್ತಡಕ್ಕೊಳಗಾದವರೂ ಎಂದು ಹೇಳಲಾಗದು.ಆದರೆ ಸಾಮಾನ್ಯವಾಗಿ ಆರೋಗ್ಯವಂತರೂ ಹೃದಯ ಸ್ತಂಭನದಿಂದ ಸಾವನ್ನಪ್ಪುವುದು ನಿಜ !
★ ಹೃದಯಾಘಾತ ಮುನ್ಸೂಚನೆಯ ಸಂಕೇತಗಳನ್ನು ಗಮನಿಸಿ ಸೂಕ್ತ ಮುಂಜಾಗ್ರತ ಕೈಗೊಂಡರೆ,ಬದುಕಿ ಉಳಿಯುವ ಸಾಧ್ಯತೆಗಳು ಇವೆ.
★ ವಾರ್ನಿಂಗ್ ಸಿಗ್ನಲ್ : ಎದೆಯ ಮದ್ಯ,ಎದೆಮೂಳೆ,ಪಕ್ಕದಲ್ಲಿ ಮೇಲೆ ಬಿಸಿಯಾದಂತೆ, ಭಾರವಾದಂತೆ ನೋವು.
★ಅಂತಹ ನೋವು ಭುಜ, ಕೈಗೂ ಹರಡುವುದು.
★ತಲೆ ತಿರುಗಿದಂತಾಗಿ ಕಣ್ಣು ಕತ್ತಲಾಗುವುದು.
★ದೇಹವು ಬೆವರಿ,ಉಸಿರಾಟದ ತೊಂದರೆಯಾಗುವುದು ಮೇಲಿನ ಲಕ್ಷಣಗಳನ್ನು ಗಮನಿಸಿದಾಗ ಶೀಘ್ರವಾಗಿ ಆಸ್ಪತ್ರೆಗೆ ಸೇರಿಸಿ.
★ಜೋರಾಗಿ ಕೆಮ್ಮಿ : ಹೃದಯದ ಬಡಿತ ಅಸ್ತವ್ಯಸ್ತವಿದ್ದು ಹೀಗೆ ಮಾಡುವುದರಿಂದ ನಿಂತ ಹೃದಯ ಬಡಿತ ಮತ್ತೆ ಚಾಲನೆಯಾಗುತ್ತದೆ.
★ಆಂಬುಲೆನ್ಸ್ : ಕಾರಿನಲ್ಲಿ ಹೋಗುವುದಕ್ಕಿಂತ ಆಂಬುಲೆನ್ಸ್ ಉತ್ತಮ. ಅದರಲ್ಲಿ ಬೇಕಾದ ಪರಿಕರಣೆಗಳಿರುತ್ತವೆ.ತಕ್ಷಣ ದಾಖಲೆ ಮಾಡಿಕೊಳ್ಳುತ್ತಾರೆ.
★ಆಸ್ಪರಿನ್ ತೆಗೆದುಕೊಳ್ಳಿ : ತಕ್ಷಣ ಒಂದು ಅಸ್ಪರಿನ್ ಮಾತ್ರೆಯನ್ನು ಚಪ್ಪರಿಸಿ.ಇದರಿಂದ(Clot form)ರಕ್ತ ಹೆಪ್ಪಗಟ್ಟದು.
★ಡಾಕ್ಟರನ್ನು ಕರೆಯಿರಿ ರೋಗಿಯನ್ನು ತಪಾಷಣೆ ಮಾಡುತ್ತಿದ್ದ ವೈದ್ಯರನ್ನು ಕರೆಸಿರಿ. ಅವರಿಗೆ ರೋಗಿಯ ಮೆಡಿಕಲ್ ಹಿಸ್ಟರಿ ತಿಳಿದಿರುತ್ತದೆ. ಅವರು ತುರ್ತು ನಿಗಾ ಡಾಕ್ಟರಿಗೆ ಎಲ್ಲವನ್ನು ವಿವರಿಸಬಲ್ಲರು.
★ನಿಶ್ಚಿಂತೆಯಾಗಿರಿ ತುರ್ತು ವಾರ್ಡಿಗೆ ಕರೆದೊಯ್ದಾಗ ಭಯಪಡದೆ ಧೈರ್ಯದಿಂದ ಇರಿ ಏನು ಆಗದೆಂದು Positive ಆಗಿ ಯೋಚಿಸಿ.