ಮನೆ ಆರೋಗ್ಯ ಹಾರ್ಟ್ ಫೇಲ್ಯುರ್: ಭಾಗ ಎರಡು

ಹಾರ್ಟ್ ಫೇಲ್ಯುರ್: ಭಾಗ ಎರಡು

0

 ಹೃದಯದ ಬಲಭಾಗ ವೈಫಲ್ಯ

★ಶರೀರದ ಎಲ್ಲ ಭಾಗಗಳಿಂದ ಕಲುಷಿತ ರಕ್ತ ಹೃದಯದ ಬಲ ಭಾಗಕ್ಕೆ ಬರುತ್ತದೆ. ಇದನ್ನು ಶುದ್ಧೀಕರಿಸಲು ಹೃದಯದ ಶ್ವಾಸಕೋಶಕ್ಕೆ ಪಂಪ್ ಮಾಡುತ್ತದೆ.

★ ಹೃದಯದ ಬಲಭಾಗ ಯಾವ ಕಾರಣದಿಂದಿದರೂ ದುರ್ಬಲಗೊಂಡರೆ,ರಕ್ತವನ್ನು ಸಂಪೂರ್ಣವಾಗಿ ಶ್ವಾಸಕೋಶಕ್ಕೆ ಕಳುಹಿಸಲು ಆಶಕ್ತವಾಗುತ್ತದೆ.ಆಗ ಉಂಟಾಗುವ ಒತ್ತಡದಿಂದಾಗಿ ಹೃದಯದ ಬಲಭಾಗದಲ್ಲಿ ರಕ್ತದ ಪ್ರಮಾಣ ಹೆಚ್ಚಾಗಿ,ಲಿವರ್ ಮೇಲೆ ಭಾರ ಬೀಳುತ್ತದೆ.

★ ಇದರಿಂದಾಗಿ ಶರೀರದ ಪ್ರತಿಯೊಂದು ಜೀವಕೋಶದಲ್ಲೂ ನೀರು ಲವಣ ಸೇರಿ ಕಾಲು ಊತ ಬರುತ್ತದೆ. ಕಿಬ್ಬೊಟ್ಟೆಯ ಮೇಲ್ಭಾಗ ಬಲಹೀನವಾಗಿ ಬಾಗುತ್ತದೆ. ಕುತ್ತಿಗೆಯ ನರ ಊತ ಬರುವಂತಿದ್ದು ನೀರು ತುಂಬಿದಂತೆ ಕಾಣುತ್ತದೆ.  ಇದನ್ನು ಎನ್ನುತ್ತಾರೆ.ಗಂಭೀರ ಸ್ಥಿತಿಯಲ್ಲಿ ಮುಖದಲ್ಲಿ ಸಹ ಊತ ಬರಬಹುದು.

★ ಹೃದಯದ ಬಲಭಾಗ ವೈಫಲ್ಯಕ್ಕೆ ಕಾರಣಗಳು ಕೆಳಕಂಡಂತಿರುತ್ತದೆ.

★ಶ್ವಾಸಕೋಶದೊಳಗೆ ರಕ್ತದ ಒತ್ತಡ ಹೆಚ್ಚಾಗುವುದರಿಂದ(Pulmonary Hypertension) 

ಹೃದ್ರೊಗಗಳಿಗೆ ಕೊಬ್ಬು ಪದಾರ್ಥಗಳೇ ಕಾರಣ

ಎಣ್ಣೆಯಲ್ಲಿ ಕರಿದ, ಕೊಬ್ಬಿನಂಶ ಅಧಿಕವಿರುವ ತಿನಿಸುಗಳನ್ನು ಸೇವಿಸಿದರೆ. ಹೈ ಬೀಪಿ ಹೃದ್ರೋಗಗಳು ಬರುತ್ತವೆ ಎಂಬುದು ಎಲ್ಲರಿಗೂ ತಿಳಿದ ವಿಷಯ. ಆದರೆ ಅವುಗಳಿಂದ ಹೇಗೆ ಉಂಟಾಗುತ್ತದೆಂಬುದು ತಿಳಿದಿದೆಯೇ?

ಸೇವಿಸುವ ಆಹಾರದಲ್ಲಿನ ಕೊಬ್ಬಿನ ಅಂಸ ಹೊಟ್ಟೆಯಲ್ಲಿ ಹೀರದೇ(Absorb) ರಕ್ತನಾಳಗಳಲ್ಲಿ ಶೇಖರಿಸಲ್ಪಡುತ್ತದೆ. ಕೆಲವು ದಿನಗಳ ನಂತರ ಈ ಕೊಬ್ಬು ಆ ನಾಳಗಳ  ಒಳಗೋಡೆಯಲ್ಲಿ ಅಂಟಿಕೊಳ್ಳುತ್ತದೆ.

ಹೀಗೆ ಅಂಟಿದಾಗ ನಾಳಗಳ ವ್ಯಾಸ ಕಡಿಮೆಯಾಗಿ,ರಕ್ತ ಹರಿಯಲು  ಅಡಚಣೆಯಾಗಿ ಅನೇಕ ತೊಂದರೆಗೆ ಕಾರಣವಾಗುತ್ತದೆ. ಅವು ಈ ಕೆಳಗಿನಂತಿವೆ.

ಹೃದಯಕ್ಕೆ ರಕ್ತಪೂರೈಕೆ ಮಾಡುವ ರಕ್ತನಾಳಗಳು ಸಂಕುಚಿತಗೊಂಡು ಎದೆ (Angina) ನೋವಿಗೆ ಕಾರಣವಾಗುತ್ತದೆ.

ರಕ್ತನಾಳ ಸಂಪೂರ್ಣ ಮುಚಿ ಹೋದಲ್ಲಿ (Block)ಹೃದಯಸ್ತಂಬನ ವಾಗುವುದು.

ಮೆದುಳಿಗೆ ರಕ್ತದ ಪೂರೈಕೆ ಮಾಡುವ ರಕ್ತನಾಳ ಮುಚ್ಚಿ ಹೋದರೆ ಪಾರ್ಶ್ವವಾಯು(ಲಕ್ವ )ಆಗಬಹುದು.

ಯಾವುದಾದರೂ ಅವಯವಕ್ಕೆ ರಕ್ತಪೂರೈಸುವ ರಕ್ತನಾಳ ಮುಚ್ಚಲ್ಪಟ್ಟರೆ ಗ್ಯಾಂಗ್ರಿನ್ ಆಗಬಹುದು .

ಕುಟುಂಬದ ಸದ್ಯಕ್ಷರಲಿ ಯಾರಿಗಾದರೂ ಹೃದ್ರೋಗ, ಹೈ ಬೀ.ಪಿ.ಯಂತಹ ಕಾಯಿಲೆ ಇದ್ದಲ್ಲಿ ಅಂತಹ ವ್ಯಕ್ತಿಗಳು ತೆಗೆದುಕೊಳ್ಳುವ ಆಹಾರದಲ್ಲಿ ಕೊಬ್ಬಿನ ಅಂಶ ಇಲ್ಲದಿರುವಂತೆ ಬಹಳ ಎಚ್ಚರಿಕೆ ವಹಿಸಬೇಕು.