ಮನೆ ದೇಶ ರಾಜಕೀಯ ಕೌಟುಂಬಿಕ ಹಿನ್ನೆಲೆ ಇರದ ಯುವಕರು ರಾಜಕೀಯಕ್ಕೆ ಬರಬೇಕು: ಮೋದಿ

ರಾಜಕೀಯ ಕೌಟುಂಬಿಕ ಹಿನ್ನೆಲೆ ಇರದ ಯುವಕರು ರಾಜಕೀಯಕ್ಕೆ ಬರಬೇಕು: ಮೋದಿ

0

ಜೈಪುರ (ರಾಜಸ್ಥಾನ): ರಾಜಕೀಯ ಕೌಟುಂಬಿಕ ಹಿನ್ನೆಲೆ ಇಲ್ಲದ ಯುವಕರು ಹೊಸದಾಗಿ ರಾಜಕೀಯಕ್ಕೆ ಬರಬೇಕು ಎಂದು ಪ್ರಧಾನಿ ಮೋದಿ ಕರೆ ನೀಡಿದ್ದಾರೆ.

ಬಿಜೆಪಿಯ ರಾಷ್ಟ್ರೀಯ ಪದಾಧಿಕಾರಿಗಳನ್ನು ಉದ್ದೇಶಿಸಿ ವರ್ಚ್ಯುಯಲ್‌ ಸಭೆಯಲ್ಲಿ ಮಾತನಾಡಿದ ಪ್ರಧಾನಿ ಮೋದಿ, 40 ನಿಮಿಷಗಳ ಕಾಲ ಭಾಷಣ ಮಾಡಿದರು. ಬಿಜೆಪಿ ಕಾರ್ಯಕರ್ತರು ಹೊಸ ಸದಸ್ಯರನ್ನು ಪಕ್ಷಕ್ಕೆ ಸೇರ್ಪಡೆ ಮಾಡಬೇಕು, ಹೊಸ ಸದಸ್ಯರ ಕುಟುಂಬ ವರ್ಗ ಈ ಹಿಂದೆ ರಾಜಕಾರಣದಲ್ಲಿ ಇರಬಾರದು ಎಂದು ಹೇಳಿದರು.

ವಂಶಪಾರಂಪರ್ಯ ರಾಜಕಾರಣ ಮಾಡುವ ಪಕ್ಷಗಳು ದೇಶವನ್ನು ಇನ್ನಷ್ಟು ಹಿಂದಕ್ಕೆ ತಳ್ಳುತ್ತವೆ. ಕುಟುಂಬ ರಾಜಕಾರಣ ಮಾಡುವವರ ಜೀವನ ಕುಟುಂಬದಿಂದಲೇ ಆರಂಭವಾಗಿ ಕುಟುಂಬದಿಂದಲೇ ಅಂತ್ಯವಾಗುತ್ತದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ರಾಜಕೀಯಕ್ಕೆ ಹೊಸದಾಗಿ ಬರುವವರಿಗೆ ಬಿಜೆಪಿ ಅವಕಾಶ ನೀಡಬೇಕು. ಅವರನ್ನು ಪಕ್ಷದೊಂದಿಗೆ ಸಂಪರ್ಕದಲ್ಲಿರುವಂತೆ ನೋಡಿಕೊಳ್ಳಬೇಕು. ಈಗಾಗಲೇ ಕುಟುಂಬ ರಾಜಕಾಣದಿಂದ ಬೇಸತ್ತಿರುವ ಜನರಿಗೆ ಬಿಜೆಪಿಯೊಂದೇ ಭರವಸೆ ಎಂದು ಪ್ರಧಾನಿ ಮೋದಿ ಹೇಳಿದರು.

ಕುಟುಂಬ ರಾಜಕಾರಣದ ನಡುವೆಯೂ ಕಮಲ ಅರಳಿದೆ, ನಳನಳಿಸಿದೆ. ಹಾಗೆ ನೋಡಿದ್ರೆ ಸ್ವಾತಂತ್ರ್ಯಾ ನಂತರ ದೇಶದಲ್ಲಿ ಕುಟುಂಬ ರಾಜಕಾರಣದಿಂದಾಗಿ ಭಾರೀ ಹಾನಿ ಸಂಭವಿಸಿದೆ. ರಾಜಕೀಯ ಪಕ್ಷಗಳು ಕೇವಲ ಮಹಾತ್ಮಾ ಗಾಂಧಿ ಅವರ ಹೆಸರನ್ನು ಬಳಸಿಕೊಳ್ಳುತ್ತವೆ. ಆದ್ರೆ, ಅವರ ಆಶಯಗಳನ್ನು ಗಾಳಿಗೆ ತೂರಿವೆ ಎಂದು ಪ್ರಧಾನಿ ಮೋದಿ ಹೇಳಿದರು.

ಅಭಿವೃದ್ಧಿಗಾಗಿ ನಡೆಸುವ ರಾಜಕಾರಣವನ್ನು ತಾವು ಸದಾ ಸ್ವಾಗತಿಸೋದಾಗಿ ಪ್ರಧಾನಿ ಮೋದಿ ಹೇಳಿದರು.