ಮನೆ ಯೋಗಾಸನ ಪರ್ವತಾಸನ

ಪರ್ವತಾಸನ

0

‘ಪರ್ವತ’ವೆಂದರೆ ಹೆಬ್ಬೆಟ್ಟ ‘ಪದ್ಮಾಸನ’ದಲ್ಲಿ ಸ್ವಲ್ಪ ವ್ಯತ್ಯಾಸ ಮಾಡಿದ ಈ ಭಂಗಿಯಲ್ಲಿ ಕೈಬೆರಳುಗಳನ್ನು ಪರಸ್ಪರ ಹೆಣೆದುಕೊಂಡು ತೋಳುಗಳನ್ನು ತಲೆಯಮೇಲೆ ನೀಳವಾಗಿ ಚಾಚಬೇಕು.

Join Our Whatsapp Group

ಅಭ್ಯಾಸ ಕ್ರಮ

1. ಮೊದಲು ‘ಪದ್ಮಾಸನ’ದಲ್ಲಿ ಕುಳಿತುಕೊಳ್ಳಬೇಕು.

2. ಬಳಿಕ,ಕೈಬೆರಳುಗಳನ್ನು ಪರಸ್ಪರ ಹೆಣೆದು, ಆಮೇಲೆ ತೋಳುಗಳೆರಡನ್ನೂ ತಲೆಯ ಮೇಲೆ ಎತ್ತಿ ನೇರವಾಗಿ ಚಾಚಬೇಕು. ಅನಂತರ ತಲೆಯನ್ನು ಮುಂಬಾಗಿಸಿ, ಗದ್ದವನ್ನು (Chin)ಎದೆಯಮೇಲೆ ತಾಗಿಸಿಡಬೇಕು.

3. ಬೆನ್ನಿನಲ್ಲಿಯ ತೇಲಾಡುವ ಪಕ್ಕೆಲುಬುಗಳ ಬಳಿ ಇರುವ ಮಾಂಸಖಂಡಗಳಿಂದ (Latissimus Dorsi)ಮತ್ತು ಹೆಗಲೆಲುಬುಗಳಿಂದ ತೋಳುಗಳನ್ನು ನೇರವಾಗಿ ಮೇಲೆತ್ತಿ, ಅಂಗೈಗಳು ನೇರವಾಗಿ ಮೇಲ್ಮೊಗವಾಗುವಂತೆ ನಿಲ್ಲಿಸಬೇಕು.

4. ಈ ಭಂಗಿಯಲ್ಲಿ, ಒಂದೆರಡು ನಿಮಿಷಗಳ ಕಾಲ ಸಾಮಾನ್ಯ ಉಸಿರಾಟದಿಂದ ನೆಲೆಸಬೇಕು. ಆ ಬಳಿಕ ಕಾಲುಗಳ ಸ್ಥಾನಗಳನ್ನು ಪರಸ್ಪರ ವ್ಯತ್ಯಾಸ ಮಾಡಿ,ಕೈಬೆರಳುಗಳನ್ನು ಹಿಂದಿನಂತೆಯೇ ಹೆಣೆದು, ಮೇಲಿನ ಬಂಗಿಯನ್ನೇ ಮತ್ತೆ ಅಭ್ಯಾಸಿಸಬೇಕು,  ಬೆನ್ನನ್ನು ನೇರವಾಗಿರಿಸಬೇಕು.

ಪರಿಣಾಮಗಳು

ಈ ಆಸನವು ಕೈಕಾಲು ಕೀಲುಗಳಲ್ಲಿಯ ನೋವನ್ನು ಭುಜಗಳಲ್ಲಿಯ ಪೆಡಸುತನವನ್ನೂ ಹೋಗಲಾಡಿಸುತ್ತದೆ.ಅಲ್ಲದೆ ಈ ಆಸನದ ಭಂಗಿಯು ಅಂಗಾಂಗಗಳ ಚಲನವಲನಗಳನ್ನು ಸುಗಮಗೊಳಿಸುತ್ತದೆ. ಮತ್ತು ಎದೆಯನ್ನು ವಿಸ್ತಾರಗೊಳಿಸುತ್ತದೆ. ಇದರ ಜೊತೆಗೆ ಕಿಬ್ಬೊಟ್ಟೆಯೊಳಗಿನ ಅಂಗಗಳನ್ನು ಒಳಕ್ಕೆ ಎಳೆದಿಟ್ಟು ವೈಶಾಲ್ಯವನ್ನು ಪೂರ್ಣಗೊಳಿಸುತ್ತದೆ.