‘ಮಾಲಾ’ ಎಂದರೆ ಹೂವಿನ ಸರ, ಈ ಆಸನವನ್ನು ಅಭ್ಯಸಿಸುವ ಕ್ರಮದಲ್ಲಿ ಎರಡು ವಿಧಾನಗಳುಂಟು ಅವುಗಳ ವಿವರಣೆ ಈ ಮಂದಿನಂತಿದೆ :
ಅಭ್ಯಾಸ ಕ್ರಮ
1. ಮೊದಲು, ಪಾದಗಳೆರಡನ್ನು ಜೊತೆಗೂಡಿಸಿ,ನಿತಂಬಗಳ ಆಧಾರದಮೇಲೆ ನೆಲದಲ್ಲಿ ಕುಳಿತುಕೊಳ್ಳಬೇಕು. ಅಂಗಾಲುಗಳೂ ಹಿಮ್ಮಡಿಗಳೂ ನೆಲದಮೇಲೆ ಪೂರ್ಣವಾಗಿ ಉರಿರಬೇಕು. ಬಳಿಕ, ಆಸನವನ್ನು ನೆಲದಿಂದ ಮೇಲೆತ್ತಿ ಕೈಗಳನ್ನು ಮುಂಗಡಗೆ ನೀಳಲಾಗಿ ಚಾಚಿ, ದೇಹವನ್ನು ಸಮತೋಲನಸ್ಥಿತಿಯಲ್ಲಿ ನಿಲ್ಲಿಸರಬೇಕು.
2. ಅನಂತರ ಮಂಡಿಗಳನ್ನು ಅಗಲಿಸಿ,ಮುಂಡವನ್ನು ಮುಂಗಡೆಗೆ ಸೇರಿಸಬೇಕು.
3. ಉಸಿರನ್ನು ಹೊರಕ್ಕೆಬಿಟ್ಟು ಬಾಗಿಸಿರುವ ಕಾಲುಗಳ ಸುತ್ತಲೂ ತೋಳುಗಳನ್ನು ಸುತ್ತರಿಸಿ, ಅಂಗೈಗಳನ್ನು ನೆಲದ ಮೇಲೆ ಊರಿಡಬೇಕು
4. ಬಳಿಕ ಕೈಗಳನ್ನು ಒಂದೊಂದಾಗಿ ಬೆನ್ನ ಹಿಂಬದಿಗೆ ತಂದು ಬೆರಳುಗಳಿಂದ ಒಂದನ್ನೊಂದು ಬಿಗಿಸಿಡಬೇಕು.
5. ಇದಾದ ಮೇಲೆ, ಬೆನ್ನನ್ನು ಮತ್ತು ಕತ್ತನ್ನು ಹಿಗ್ಗಿಸಬೇಕು.
6. ಈ ರೀತಿಯಲ್ಲಿ ಸುಮಾರು 30 – 60 ಸೆಕೆಂಡುಗಳವರೆಗೂ ಕಾಲವರೆಗೂ ಸಾಮಾನ್ಯ ಉಸಿರಾಟದಿಂದ ನೆಲೆಸಬೇಕು.
7. ಆಮೇಲೆ ಉಸಿರನ್ನು ಹೊರಕ್ಕೆ ಬಿಟ್ಟು ಮುಂದಾಗಿ, ತಲೆಯನ್ನು ನೆಲದ ಮೇಲಿರಿಸಬೇಕು ಈ ಭಂಗಿಯಲ್ಲಿಯೂ ಸಹ ಸಾಮಾನ್ಯ ಉಸಿರಾಟದಿಂದ ಸುಮಾರು 30 – 60 ಗಂಟೆಗಳ ಕಾಲ ನೆಲೆಸಬೇಕು.
8. ತರುವಾಯು ಉಸಿರನ್ನು ಒಳಕ್ಕೆಳೆದು, ತಲೆಯನ್ನು ನೆಲದಿಂದ ಮೇಲೆತ್ತಿ, ಮತ್ತೆ ಮೇಲಿನ 5ನೇ ಹಂತಕ್ಕೆ ಹಿಂದಿರುಗಬೇಕು.
9. ಕೊನೆಯಲ್ಲಿ ಕೈಗಳನ್ನು ಬಿಚ್ಚಿ, ನೆಲದ ಮೇಲೆ ವಿಶ್ರಾಂತಿ ಪಡೆಯಬೇಕು.
ಪರಿಣಾಮಗಳು
ಈ ಆಸನವೂ ಕಿಬ್ಬೊಟ್ಟೆಳಗಿನ ಅಂಗಗಳಿಗೆ ಹುರುಪು ಕೊಡುವುದಲ್ಲದೆ ಬೆನ್ನುನೋವನ್ನು ಕಳೆಯುತ್ತದೆ.