ಮನೆ ಸುದ್ದಿ ಜಾಲ ಇತಿಹಾಸ ಪುಟ ಸೇರಿದ ಒಲಂಪಿಯಾ ಚಿತ್ರಮಂದಿರ

ಇತಿಹಾಸ ಪುಟ ಸೇರಿದ ಒಲಂಪಿಯಾ ಚಿತ್ರಮಂದಿರ

0

ಮೈಸೂರು (Mysuru)- ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಮತ್ತೊಂದು ಚಿತ್ರಮಂದಿರ ಇತಿಹಾಸದ ಪುಟ ಸೇರಿದೆ.
ಮೈಸೂರಿನ ಗಾಂಧಿ ವೃತ್ತದ ಬಳಿ ಇದ್ದ ಒಲಂಪಿಯಾ ಚಿತ್ರಮಂದಿರ ತನ್ನ ಆಟ ನಿಲ್ಲಿಸಿದೆ.
ಪ್ರೇಕ್ಷಕರ ಕೊರತೆ ಹಿನ್ನೆಲೆಯಲ್ಲಿ ಚಿತ್ರಮಂದಿರ ಮುಚ್ಚಲು ನಿರ್ಧಾರ ಕೈಗೊಳ್ಳಲಾಗಿದೆ. 1949ರಲ್ಲಿ ನಿರ್ಮಾಣವಾಗಿದ್ದ ಚಿತ್ರಮಂದಿರ ಇದೀಗ ಬಂದ್ ಆಗಿದೆ.
ಮೈಸೂರಿನಲ್ಲಿದ್ದ 26 ಚಿತ್ರಮಂದಿರಗಳ ಪೈಕಿ 16 ಚಿತ್ರಮಂದಿರಗಳು ಮುಚ್ಚಿದ್ದು, 10 ಚಿತ್ರಮಂದಿರ ಮಾತ್ರ ಉಳಿದಿದೆ.
ಕೆಲ ದಿನಗಳ ಹಿಂದೆ ಲಕ್ಷ್ಮಿ, ಸರಸ್ವತಿ, ಶಾಂತಲಾ ಚಿತ್ರಮಂದಿರಗಳು ಬಂದ್ ಆಗಿದ್ದವು. ಇದೀಗ ಆ ಸಾಲಿಗೆ ಒಲಂಪಿಯಾ ಚಿತ್ರಮಂದಿರ ಸೇರಿದೆ.