ಮನೆ ಮನೆ ಮದ್ದು ಎದೆಯಲ್ಲಿ ಹಾಲು ಬರಲು

ಎದೆಯಲ್ಲಿ ಹಾಲು ಬರಲು

0

1. ಶತಾವರಿ ಬೇರನ್ನು ಹಾಲಿನಲ್ಲಿ ಅರೆದು ಸಕ್ಕರೆ ಬೆರೆಸಿ ಶೋಧಿಸಿ,ಸೇವಿಸುವುದರಿಂದ ಎದೆಹಾಲು ಹೆಚ್ಚಾಗಿ ಉತ್ಪತ್ತಿಯಾಗುವುದು.

Join Our Whatsapp Group

2. ನುಗ್ಗೇಸೊಪ್ಪನ್ನು ಬೇಯಿಸಿ ರಸ ತೆಗೆದು ಗರ್ಭಿಣಿ ಸ್ತ್ರೀಯರಿಗೆ ಕೊಡುವುದರಿಂದ ಹೆರಿಗೆಯ ನಂತರ ಸಮೃದ್ಧಿಯಾಗಿ ಉತ್ಪತ್ತಿಯಾಗುವುದು.

3. ತಾಯಂದಿರ ಎದೆ ಹಾಲು ವೃದ್ದಿಗೆ,ಹೊನ್ನಗೊನ್ನೆ ಸೊಪ್ಪಿನ ರಸ ನಾಲ್ಕು ಚಮಚ, ಜೇನುತುಪ್ಪ ಎರಡು ಚಮಚ ಮಿಶ್ರಣ ಮಾಡಿ, ತಯಾರಿಸಿ ಮಕ್ಕಳ ತಾಯಂದಿರು ನಿತ್ಯವೂ ಸೇವಿಸುತ್ತಿದ್ದರೆ ಎದೆ ಹಾಲು ಎಚ್ಚುವುದು.

4. ಶಬ್ಬಸಿಗೆ ಬೀಜ, ಮೆಂತ್ಯದ ಕಾಳು ಸಮ ಪ್ರಮಾಣದಲ್ಲಿ ರಾತ್ರಿ ನೆನೆಯಿಟ್ಟು ಮಾರನೆಯ ದಿನ ಬೆಳಗ್ಗೆ ತೊಳೆದು ಒಣಗಿಸಿ ಪುಡಿ ಮಾಡಿಟ್ಟುಕೊಂಡು, ಹಾಲಿಗೆ ಒಂದು ಚಮಚ ಪುಡಿ ಬೆರೆಸಿ ಸಕ್ಕರೆ ಸೇರಿಸಿ ಕುಡಿಯುತ್ತಾ ಬಂದರೆ ಎದೆ ಹಾಲು ಹೆಚ್ಚುವುದು. ತಾಯಿ ಮಗುವಿನ ಆರೋಗ್ಯ ಸುಧಾರಿಸುವುದು.

5. ಎದೆಹಾಲು ಹೆಚ್ಚಾಗಲು ಮೆಂತ್ಯದ ಕಾಳನ್ನು ನೆನೆಸಿ ಗಂಜಿಯಂತೆ ಮಾಡಿ ಬಿಸಿ ಹಾಲಿನಲ್ಲಿ ಸೇವಿಸುವುದರಿಂದ ಎದೆ ಹಾಲು ಉದ್ಧಿಯಾಗುವುದು.

6. ಜೀವಂತಿ,ಕಾಂಭೋಜಿನ್ ಗಳನ್ನು ಹಾಲಿನಲ್ಲಿ ಅರೆದು ಸೇವಿಸಲು ಸ್ತ್ರೀಯರ ಎದೆಯಲ್ಲಿ ಹಾಲು ಬರುವುದು

7. ಮುಟ್ಟಿದರೆ ಮುನಿ ಸೊಪ್ಪನ್ನು ನೀರಿನಲ್ಲಿ ಅರೆದು ಸ್ತನಗಳಿಗೆ ಕಟ್ಟಿದರೆ ಹಾಲು ಬರುತ್ತದೆ.

8. ಜೀವನೀಯ ಗಣದಲ್ಲಿ ಸ್ರೀ ಹಾಲೆ ಕಾಡು ಹೆಸರು, ಕಾಡು ಉದ್ದು, ಕಾಕೋಲಿ,ಕ್ಷೀರ  ಕಾಕೋಲಿ, ಋಷಭಕ,ಮಧು, ಮಹಾಮೇಧ, ಜೇಷ್ಠ ಮಧು ಇವೆಲ್ಲವೂ ಸ್ತ್ರೀಯರ ಸ್ತನದಲ್ಲಿ ಹಾಲು ಉತ್ಪತ್ತಿ ಮಾಡುವ ಗುಣಗಳನ್ನು ಹೊಂದಿದೆ. ಇವುಗಳಲ್ಲಿ ಯಾವುದಾದರೂ ಒಂದು ಮೂಲಿಕೆಯನ್ನು ಪುಡಿ ಮಾಡಿ ಹಾಲಿನಲ್ಲಿ ಸೇವಿಸಲು ಸ್ತನದಲ್ಲಿ ಹಾಲು ಹೆಚ್ಚುವುದು. ಜೇಷ್ಠ ಮಧುವಿನ ಚೂರ್ಣವನ್ನು ಹಾಲಿನಲ್ಲಿ ಹಾಕಿ ಸೇವಿಸುತ್ತಿದ್ದರೆ  ಸ್ತನದಲ್ಲಿ ಹಾಲು ಉಕ್ಕಿ ಹರಿಯುವುದು.  

9.ಚಿಟ್ಟ ಹರಳೆಲೆ ಸ್ವರಸ ಕುಡಿಸಿ ಎಲೆಗಳನ್ನು ಬಿಸಿ ಮಾಡಿ  ಕುಟ್ಟಿ ಅದನ್ನು ಎದೆಗೆ ಕಟ್ಟಿದರೆ ಹಾಲು ಬರುತ್ತದೆ.

10. ಅಶ್ವಗಂಧಿ ಚೂರ್ಣವನ್ನು 10 ಗ್ರಾಂನಷ್ಟು ಒಂದು ಲೋಟ ಹಾಲಿನಲ್ಲಿ ಹಾಕಿ ಒಂದು ಲೋಟ ನೀರು ಬೆರೆಸಿ, ಕುದಿಸಿ ನೀರಿನ ಭಾಗ ಹೋದಮೇಲೆ ಸಕ್ಕರೆ ಬೆರೆಸಿ ಕುಡಿಯುವುದರಿಂದ ಎದೆ ಹಾಲು ವೃದ್ಧಿಯಾಗುವುದು ;ಇದಕ್ಕೆ ಸ್ವಲ್ಪ ತುಪ್ಪ ಬೆರೆಸಬೇಕು. 

11. ಅಶ್ವಗಂಧಿ ಚೂರ್ಣಕ್ಕೆ ಜೇಷ್ಠ ಮಧುವಿನ ಚೂರ್ದ ಐದು ಗ್ರಾಂ ಒಂದು ಲೋಟ ಹಾಲಿನಲ್ಲಿ ಬೆರೆಸಿ ಅಷ್ಟೇ ನೀರು ಬೆರೆಸಿ, ನೀರು ಇಂಗಿಸಿ ಹಾಲು ಉಳಿಸಿಕೊಂಡು ಸಕ್ಕರೆ ಬೆರೆಸಿ ಕುಡಿಯಲು ಎದೆ ಹಾಲು ಬರುವುದು.

12. ಸಬ್ಬಸಿಗೆ ಸೊಪ್ಪು, ಹೊನೆಗನ್ನೆ ಸೊಪ್ಪು, ಗರುಗದ ಸೊಪ್ಪುಗಳನ್ನು ಒಂದೊಂದು ದಿನ ಒಂದು ವಿಧವಾದ ಸೊಪ್ಪಿನ ಪಲ್ಯದ ಸಾರು, ಹುಳಿ ಮಾಡಿ ಸೇವಿಸಲು ಸ್ತಾನದಲ್ಲಿ ಹಾಲು ವೃದ್ಧಿಯಾಗುವುದು.ಪ್ರತಿದಿನವೂ ಬೆಳ್ಳಿಗೆ,ಸಾಯಂಕಾಲ ಒಂದೊಂದು ಲೋಟ ಹಾಲು ಕುಡಿಯುತ್ತಿದ್ದರೆ ಸ್ತನದಲ್ಲಿ ಹಾಲು ಉತ್ಪತ್ತಿಯಾಗುವುದು.