ಮನೆ ಪ್ರವಾಸ ಅನೇಕ ಅದ್ಭುತ ಐತಿಹಾಸಿಕ ತಾಣಗಳ ನೆಲೆ ಮಹಾರಾಷ್ಟ್ರ

ಅನೇಕ ಅದ್ಭುತ ಐತಿಹಾಸಿಕ ತಾಣಗಳ ನೆಲೆ ಮಹಾರಾಷ್ಟ್ರ

0

ಮಹಾರಾಷ್ಟ್ರ ರಾಜ್ಯದಲ್ಲಿ ಅದ್ಭುತವಾದ ಐತಿಹಾಸಿಕ ಕೋಟೆಗಳಿಗೆ ನೆಲೆಯಾಗಿದೆ. ೧೭ ನೇ ಶತಮಾನದಲ್ಲಿ ಯೋಧ ರಾಜ ಛತ್ರಪತಿ ಶಿವಾಜಿ ನೇತೃತ್ವದಲ್ಲಿ ಮರಾಠ ಸಾಮ್ರಾಜ್ಯದ ವೈಭವದ ಆಳ್ವಿಕೆಯನ್ನು ಪ್ರತಿಬಿಂಬಿಸುವ, ಅನೇಕ ಅದ್ಭುತ ಐತಿಹಾಸಿಕ ತಾಣಗಳಿಗೆ ಮಹಾರಾಷ್ಟ್ರ ನೆಲೆಯಾಗಿದೆ.

ಇದಲ್ಲದೆ, ಪ್ರಾಚೀನ ಪ್ರಕೃತಿಯ ನಡುವಿನ ಬೆರಗುಗೊಳಿಸುವ ಸ್ಥಳಗಳನ್ನು ಹೊಂದಿದೆ. ವಾರಾಂತ್ಯ ಅಥವಾ ರಜಾ ದಿನಗಳಲ್ಲಿ ಮುಂಬೈನ ಕೋಟೆಗಳನ್ನು ಅನ್ವೇಷಣೆ ಮಾಡಬಹುದು. ಇತಿಹಾಸ ಪ್ರೇಮಿಗಳು ಖಂಡಿತವಾಗಿಯು ಮಿಸ್‌ ಮಾಡಿಕೊಳ್ಳಬಾರದ ತಾಣಗಳಿವು.

ಇದು ಶಿವಾಜಿ ಜನನವಾದ ಕೋಟೆಯಾಗಿದೆ. ಅದರ ಬಗ್ಗೆ ಮಾಹಿತಿ ಇಲ್ಲಿ ಪಡೆಯಿರಿ.

ರಾಯಗಢ ಕೋಟೆ

ಮಹಾರಾಷ್ಟ್ರದ ಈ ರಾಯಗಢ ಕೋಟೆಯು ಅತ್ಯಂತ ಸುಂದರ ಮತ್ತು ಭದ್ರವಾದ ಕೋಟೆಯಾಗಿದೆ. ಇದನ್ನು ‘ದಿ ಜಿಬ್ರಾಲ್ಟರ್ ಆಫ್‌ ದಿ ಈಸ್ಟ್’ ಎಂದು ವಿಶೇಷವಾಗಿ ಯುರೋಪಿಯನ್ನರು ಕರೆಯುತ್ತಾರೆ. ಹಚ್ಚ ಹಸಿರಿನ ಸಹ್ಯಾದ್ರಿ ಶ್ರೇಣಿಗಳಲ್ಲಿ ಈ ಕೋಟೆ ನೆಲೆಗೊಂಡಿದೆ.

ಈ ಭದ್ರವಾದ ಕೋಟೆಯು ಸಮುದ್ರಮಟ್ಟದಿಂದ ಸುಮಾರು ೮೦೦ ಮೀಟರ್ ಎತ್ತರದಲ್ಲಿದೆ. ರಾಯಗಡ ಕೋಟೆಯು ಮರಾಠ ಸಾಮ್ರಾಜ್ಯದ ರಾಜಧಾನಿಯಾಗಿತ್ತು. ನೀವು ಟ್ರೆಕ್ಕಿಂಗ್‌ ಮಾಡಲು ಉತ್ಸಾಹ ಹೊಂದಿದ್ದರೆ ತಪ್ಪದೇ ಈ ತಾಣಕ್ಕೆ ಭೇಟಿ ನೀಡಬಹುದು.

​ಸಿಂಹಗಡ ಕೋಟೆ

ಸಿಂಹಗಡ ಕೋಟೆಯು ೧೬೭೧ ರಲ್ಲಿ ಮರಾಠರ ಮೊಘಲ್ ಯುದ್ಧದಲ್ಲಿ ಪ್ರಮುಖ ಪಾತ್ರವನ್ನು ವಹಿಸಿತು. ಸಿಂಹಗಢದ ಯುದ್ಧದಲ್ಲಿ ಮರಾಠರ ವೀರ ಸೈನಿಕ ತಾನ್ಹಾಜಿ ಮಾಲುಸರೆ ಅವರು ಪ್ರಾಣವನ್ನು ಕಳೆದುಕೊಂಡರು. ಈ ಸಿಂಹಗಡ ಕೋಟೆಯು ಮುಂಬೈನಲ್ಲಿ ನೆಲೆಸಿದ್ದು, ಪ್ರಮುಖವಾದ ಪ್ರವಾಸಿ ತಾಣವಾಗಿದೆ. ವಾರಾಂತ್ಯದ ಸಮಯದಲ್ಲಿ ಈ ಕೋಟೆಯನ್ನು ಅನ್ವೇಷಣೆ ಮಾಡಬಹುದು.

​ಶಿವನೇರಿ ಕೋಟೆ

ಶಿವನೇರಿ ಕೋಟೆಯು ಅತ್ಯಂತ ಪ್ರಾಚೀನವಾದ ಕೋಟೆಯಾಗಿದೆ. ಇದು ಪುಣೆ ಜಿಲ್ಲೆಯ ಜುನ್ನಾರ್ ಬಳಿ ಇದೆ. ಮುಖ್ಯ ನಗರದಿಂದ ಸುಮಾರು ೯೫ ಕಿ,ಮೀ ದೂರದಲ್ಲಿದ್ದು, ಜನಪ್ರಿಯ ಪ್ರವಾಸಿ ಆಕರ್ಷಣೆಯಾಗಿದೆ. ಈ ಶಿವನೇರಿ ಕೋಟೆಯು ಛತ್ರಪತಿ ಶಿವಾಜಿ ಮಹಾರಾಜರ ಜನ್ಮ ಸ್ಥಳ ಎನ್ನಲಾಗುತ್ತದೆ.

ಈ ಭದ್ರವಾದ ಕೋಟೆಯು ಶಿವಾಜಿ ಮಹಾರಾಜರ ತಂದೆ ಶಹಾಜಿ ಮಹಾರಾಜರು ನಿರ್ಮಿಸಿದರು. ಶಿವನೇರಿ ಕೋಟೆಯನ್ನು ತ್ರಿಕೋನ ಆಕಾರದಲ್ಲಿ ನಿರ್ಮಿಸಲ್ಪಟ್ಟಿದೆ.

​ಪ್ರತಾಪಗಡ ಕೋಟೆ

ಐತಿಹಾಸಿಕ ಪ್ರತಾಪಗಡ ಕೋಟೆಯು ಮಹಾರಾಷ್ಟ್ರದ ಸತಾರಾ ಜಿಲ್ಲೆಯಲ್ಲಿರುವ ಮಹಾಬಲೇಶ್ವರದಲ್ಲಿ ನೆಲೆಸಿದೆ. ಈ ಪ್ರತಾಪಗಡವು ಬಿಜಾಪುರ ಸೈನ್ಯದ ಮೇಲೆ ಮರಾಠರ ವಿಜಯಕ್ಕೆ ಕಾರಣವಾಯಿತು. ಮುಖ್ಯವಾಗಿ ಈ ಯುದ್ಧವು ಶಿವಾಜಿ ಮಹಾರಾಜ್‌ ಮತ್ತು ಅಫ್ಜಲ್‌ ಖಾನ್‌ ನಡುವೆ ನಡೆಯಿತು. ಪ್ರತಾಪಗಡ ಕೋಟೆಯು ಶಿವಾಜಿ ಮಹಾರಾಜರಿಂದ ನಿರ್ಮಿಸಲ್ಪಟ್ಟ ಅದ್ಭುತವಾಗಿದೆ. ಕೋಟೆಯ ಸುತ್ತ ರಮಣೀಯವಾದ ದೃಶ್ಯಗಳು ಪ್ರಕೃತಿ ಪ್ರೇಮಿಗಳನ್ನು ಆಕರ್ಷಿಸುತ್ತದೆ. ಮಹಾರಾಷ್ಟ್ರದ ಐತಿಹಾಸಿಕ ಪ್ರವಾಸ ಪಟ್ಟಿಯಲ್ಲಿ ತಪ್ಪದೇ ಈ ಪ್ರತಾಪಗಡ ಕೋಟೆ ಇರಲೇಬೇಕು.

​ದೌಲತಾಬಾದ್‌ ಕೋಟೆ

ದೌಲತಾಬಾದ್‌ ಕೂಡ ಮಹಾರಾಷ್ಟ್ರದ ಐತಿಹಾಸಿಕ ತಾಣವಾಗಿದೆ. ಆದರೆ ಈ ದೌಲತಾಬಾದ್‌ ಮರಾಠ ಸಾಮ್ರಾಜ್ಯದೊಂದಿಗೆ ಯಾವುದೇ ಸಂಬಂಧವನ್ನು ಹೊಂದಿಲ್ಲ. ಇದು ಮಹಾರಾಷ್ಟ್ರ ರಾಜ್ಯದ ಔರಂಗಾಬಾದ್‌ ಜಿಲ್ಲೆಯ ಸಮೀಪದಲ್ಲಿರುವ ಸುಂದರವಾದ ಕೋಟೆಯಾಗಿದೆ. ಕೆಲವು ವರ್ಷಗಳ ಕಾಲ ದೆಹಲಿ ಸುಲ್ತಾನರ ರಾಜಧಾನಿ ಇದಾಗಿತ್ತು. ಸಮುದ್ರ ಮಟ್ಟದಿಂದ ಸುಮಾರು ೨೦೦ ಮೀಟರ್ ಎತ್ತರದಲ್ಲಿರುವ ಈ ಕೋಟೆಯನ್ನು ನಿರ್ಮಿಸಿದವರು ಯಾದವ ರಾಜವಂಶದವರು.

ಹಿಂದಿನ ಲೇಖನಡೊನಾಲ್ಡ್ ಟ್ರಂಪ್ ಮೊದಲ ಪತ್ನಿ ಇವಾನಾ ಟ್ರಂಪ್ ನಿಧನ
ಮುಂದಿನ ಲೇಖನಪತ್ನಿಯ ಶಿರಚ್ಛೇದ ಮಾಡಿ, ಆಕೆಯ ರುಂಡದೊಂದಿಗೆ ಪೊಲೀಸ್ ಠಾಣೆಗೆ ಬಂದ ವ್ಯಕ್ತಿ