ಮನೆ ಮನೆ ಮದ್ದು ಕಣ್ಣು ನೋವು

ಕಣ್ಣು ನೋವು

0

 1. ಕಣ್ಣಿನ ಪೂರೆ ನಿವಾರಣೆ ಆಗಲು ಕರಿಮೆಣಸನ್ನು ತೇದು ಹಾಗಲಕಾಯಿ ರಸ ಸೇರಿಸಿ ಕಣ್ಣಿಗೆ ಅಂಜನ ಹಾಕಿದರೆ ಪೊರೆ ನಿವಾರಣೆಯಾಗುತ್ತದೆ. ಆದರೆ ಊರಿ ಎಂದು ರೋದನ ಪ್ರಾರಂಭವಾಗುವುದರಿಂದ ಇದನ್ನು ತಡೆಯುವ ಆತ್ಮಬಲ ಇದ್ದವರು ಮಾಡಬಹುದು.

Join Our Whatsapp Group

2. ರುದ್ರಾಕ್ಷಿಯನ್ನು ನಿಂಬೆ ರಸದಲ್ಲಿ ತೇದು ಅದನ್ನು ಕಣ್ಣಿಗೆ ಹಚ್ಚಲು ಪೊರೆ  ನಿವೃತ್ತಿಯಾಗುತ್ತದೆ ಆದರೆ ಉರಿ ಹೆಚ್ಚಾಗಿರುತ್ತದೆ, ಉಜ್ಜಬಾರದು.

3. ಕಣ್ಣಿನ ಪೊರೆ ಕರಗಲು ರಾಗಿ ಪೈರಿನ ರಸವನ್ನು ಕಣ್ಣಿಗೆ ಹಾಕಲು ಪೊರೆ ಕರಗಿ ಹೋಗುವುದು.

4. ಕಣ್ಣಿನ ದೋಷಗಳು ನಿವಾರಣೆ ಆಗಲು ವಿಟಮಿನ್ ‘ಎ’ ಆತ್ಮಾವಶ್ಯಕವಾಗಿ ಬೇಕು. ಅದರ ಅಭಾವವೇ ಕಣ್ಣಿನ ರೋಗಿಗಳಿಗೆ ಕಾರಣವಾಗುವುದರಿಂದ ಅನ್ನಾಂಗ ‘ಎ’ ಹೆಚ್ಚಾಗಿರುವ ಕ್ಯಾರೆಟನ್ನು ಹಸಿಯಾದಾಗಿ  ಕೋಸಂಬರಿ ಮಾಡಿಕೊಂಡು ಸೇವಿಸುತ್ತಾ ಬರಬೇಕು.  

5. ಕ್ಯಾರೆಟನ್ನು  ತುರಿದು ಮಿಕ್ಸಿಗೆ ಹಾಕಿ ಹಾಲು ಬೆರೆಸಿ ಸೋಧಿಸಿಕೊಂಡು ಮಕ್ಕಳಿಗೆ ಆಗು ದೊಡ್ಡವರಿಗೆ ಕೊಟ್ಟು ಸೇವಿಸುತ್ತಾ ಬರಲು ಕಣ್ಣಿನ ರೋಗಗಳು ಮಾಯ ಮಾಣುವುದು.

6. ಇರುಳು ಕಣ್ಣು, ಸಂಜೆ ಕಣ್ಣು ಎಂಬ ರೋಗಗಳಿಗೆ ಅನ್ನಾಂಗ ‘ಎ’ ಕಡಿಮೆ ಇರುತ್ತದೆ. ಅದು ಹೆಚ್ಚಾಗಿ ಇರುವ ಮಾವಿನ ಹಣ್ಣಿನ ರಸ ಸೇವಿಸುವುದರಿಂದ ಗುಣ ಕಂಡುಬರುತ್ತದೆ. 

7. ಬೇವಿನ ಸೊಪ್ಪಿನ ರಸವನ್ನು ತಯಾರಿಸಿ ತೊಟ್ಟು ತೊಟ್ಟಾಗಿ ಬಿಡುವುದರಿಂದ ಕಣ್ಣಿನ ದೃಷ್ಟಿ ಹೆಚ್ಚುತ್ತದೆ.

8. ಕಣ್ಣಿನ ಉರಿ,ಕಣ್ಣು ಚುಚ್ಚುವುದು ನಿವಾರಣೆಗೆ ಎದೆಯ ಹಾಲನ್ನು ಕಣ್ಣಿಗೆ ಹಾಕುವುದರಿಂದ ನಿವಾರಣೆ ಆಗುತ್ತದೆ.

9. ಕಣ್ಣು ನೋವು ಗಾಳಿ ಕಾಲದಲ್ಲಿ ಬರುತ್ತದೆ. ಆಗ ಒಂದು ಸಣ್ಣ ಬಟ್ಟೆಯನ್ನು ಅರಿಶಿನದ ನೀರಿನಲ್ಲಿ ಅದ್ದಿ ಅದನ್ನು ಆಗಾಗ ಮುಟ್ಟಿಸುವುದರಿಂದ ತಣ್ಣಗಾಗುವುದು.

10. ನೇತ್ರರೋಗ ನಿವಾರಣೆಗೆ ಪ್ರತಿದಿನ ಬಿಸಿ ನೀರಿನ ಸ್ನಾನ ಮಾಡಬೇಕು.

11. ಗರಿಕೆ ರಸವನ್ನು ಪರಿಶುದ್ಧವಾಗಿ ತಯಾರಿಸಿ ಕಣ್ಣಿಗೆ ತೊಟ್ಟು ತೊಟ್ಟು ಹಾಕುವುದರಿಂದ ಕಣ್ಣಿನ ಕೆಂಪು ನಿವಾರಣೆ ಆಗುವುದು.

12. ಕಣ್ಣಿನ ರೋಗಗಳನ್ನು ದೂರ ಮಾಡಲು ನವಿಲುಕೋಸಿನ ಕೋಸಂಬರಿ ಮಾಡಿ ಸೇವಿಸಿ.

13. ನೇತ್ರ ರೋಗಗಳು ಬರದಂತೆ ತಡೆಯಲು ಗರಿಕೆ ರಸವನ್ನು ಕೊಬ್ಬರಿ ಎಣ್ಣೆಗೆ ಮಿಶ್ರಮಾಡಿ, ತಲೆಗೆ ಹಚ್ಚಿ,ಬೆಳಗಿನ ಬಿಸಿಲಿನಲ್ಲಿ ಒಂದೆರಡು ಗಂಟೆ ನೆನೆದು ಆಮೇಲೆ ಸ್ನಾನ ಮಾಡಬೇಕು.

14. ಕಣ್ಣಿನ ಊರಿಗೆ ಎದೆ ಹಾಲಿನಲ್ಲಿ ಒಂದು ಉಪ್ಪಿನ ಹರಳನ್ನು ಹಾಕಿ ಕರಗಿಸಿ ಕಣ್ಣಿಗೆ ತೊಟ್ಟು ತೊಟ್ಟಾಗಿ ಹಾಕುವುದರಿಂದ ನಿವಾರಣೆ  ಆಗುವುದಿಲ್ಲ.

15. ಬಾಳೆಹಣ್ಣನ್ನು ಅಥವಾ ಮಾವಿನ ಹಣ್ಣನ್ನು ಮೊಸರಿನಲ್ಲಿ ಸೇವಿಸುವುದರಿಂದ ಕಣ್ಣಿನ ಉರಿ ಕಡಿಮೆಯಾಗಿ ಆರೋಗ್ಯ ಸುಧಾರಿಸುವುದು.

16. ಮಜ್ಜಿಗೆಗೆ ಈರುಳ್ಳಿ ಹಾಕಿ ಕುಡಿಯಿರಿ. ಊಟದಲ್ಲಿ ಹೆಚ್ಚಾಗಿ ಹಸಿ ಈರುಳ್ಳಿ ಸೇವಿಸಿರಿ.ಆಗ ಕಣ್ಣುನೋವು ಇರುವುದಿಲ್ಲ. ಕಣ್ಣಿನ ಎಲ್ಲಾ ರೋಗಗಳಿಗೂ ತ್ರೀಫಲಾ ಅರ್ಧ ತೋಳಿಯಂತೆ ಜೇನಿನಲ್ಲಿ ಸೇವಿಸಲು ದೋಷ ನಿವಾರಣೆ ಆಗುವುದು.

17. ಅಗಸೆ ಸೊಪ್ಪಿನ ಪಲ್ಯ, ಹಸಿ ಮೂಲಂಗಿ ಬದನೆಕಾಯಿ ಪಲ್ಯಗಳನ್ನು ಆಗಾಗ ಸೇವಿಸುವುದರಿಂದ ಕಣ್ಣಿನ ವ್ಯಾದಿ ನಿವಾರಣೆ ಆಗುವುದು.

18. ಸೌತೆಕಾಯಿ ತಿರುಳನ್ನು ಕಣ್ಣಿಗೆ ಉಚ್ಚಿಕೊಂಡರೆ ಉರಿ ಶಮನವಾಗುವುದು.