ಮನೆ ಅಪರಾಧ ಹರ್ಯಾಣದ ಡಾಬಾದಲ್ಲಿ ಅವಳಿ ಸಿಲಿಂಡರ್ ಸ್ಫೋಟ: ಐವರ ಸ್ಥಿತಿ ಚಿಂತಾಜನಕ

ಹರ್ಯಾಣದ ಡಾಬಾದಲ್ಲಿ ಅವಳಿ ಸಿಲಿಂಡರ್ ಸ್ಫೋಟ: ಐವರ ಸ್ಥಿತಿ ಚಿಂತಾಜನಕ

0

ಹರ್ಯಾಣದ ಬಹುದ್ದೂರ್​ ಗಢದ ಡಾಬಾದಲ್ಲಿ ಅವಳಿ ಸಿಲಿಂಡರ್​ ಸ್ಫೋಟಗೊಂಡಿದ್ದು, ಐವರ ಸ್ಥಿತಿ ಚಿಂತಾಜನಕವಾಗಿದೆ. ಹಲವು ಮಂದಿ ಗಾಯಗೊಂಡಿದ್ದಾರೆ.

Join Our Whatsapp Group

ಮಾಡರ್ನ್ ಇಂಡಸ್ಟ್ರಿಯಲ್ ಏರಿಯಾದ ಮೆಟ್ರೋ ಪಿಲ್ಲರ್ 770 ಬಳಿ ಈ ಘಟನೆ ನಡೆದಿದೆ. ಸಿಲಿಂಡರ್ ಸ್ಫೋಟದ ಘಟನೆಯಲ್ಲಿ ಗಾಯಗೊಂಡವರಲ್ಲಿ ಡಾಬಾದಲ್ಲಿದ್ದ ಕೆಲಸಗಾರರು ಮತ್ತು ಆ ಪ್ರದೇಶದಲ್ಲಿ ಓಡಾಡುತ್ತಿದ್ದ ಜನರು ಕೂಡ ಸೇರಿದ್ದಾರೆ.

ಗಾಯಾಳುಗಳು ಜೆಜೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರಲ್ಲಿ ಐವರ ಸ್ಥಿತಿ ಚಿಂತಾಜನಕವಾಗಿದ್ದು, ಶೇ.50ರಷ್ಟು ಸುಟ್ಟ ಗಾಯಗಳಾಗಿವೆ.

ಸಿಲಿಂಡರ್ ಸ್ಫೋಟದಿಂದ ಉಂಟಾದ ಕಾಲ್ತುಳಿತದಲ್ಲಿ ವ್ಯಕ್ತಿಯ ಕಾಲು ಕೂಡ ಮುರಿದಿದೆ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ.