ಮನೆ ಕಾನೂನು ಸೆಪ್ಟೆಂಬರ್ 15ರವರೆಗೆ ಎಚ್‌ಎಸ್‌ಆರ್‌ಪಿ ನೇಮ್ ಪ್ಲೇಟ್ ಗಡುವು ವಿಸ್ತರಣೆ

ಸೆಪ್ಟೆಂಬರ್ 15ರವರೆಗೆ ಎಚ್‌ಎಸ್‌ಆರ್‌ಪಿ ನೇಮ್ ಪ್ಲೇಟ್ ಗಡುವು ವಿಸ್ತರಣೆ

0

ಬೆಂಗಳೂರು: 2019ರ ಏಪ್ರಿಲ್ 1ಕ್ಕಿಂತ ಹಿಂದೆ ನೋಂದಣಿಯಾದ ವಾಹನಗಳಿಗೆ ಅತಿ ಸುರಕ್ಷಿತ ನೋಂದಣಿ ಫಲಕ (ಎಚ್‌ಎಸ್‌ಆರ್‌ಪಿ) ಅಳವಡಿಸುವ ಅವಧಿಯನ್ನು ರಾಜ್ಯ ಸರ್ಕಾರವು ಸೆಪ್ಟೆಂಬರ್ 15, 2024ರವರೆಗೆ ವಿಸ್ತರಿಸಿ ಅಧಿಸೂಚನೆ ಹೊರಡಿಸಿದೆ. 

Join Our Whatsapp Group

ವಾಹನ ಮಾಲೀಕರಿಂದ ಸೂಕ್ತ ಸ್ಪಂದನೆ ದೊರಕದಿರುವ ಹಿನ್ನೆಲೆಯಲ್ಲಿ ಹಳೆಯ ವಾಹನಗಳಿಗೆ ಎಚ್‌ಎಸ್ಆರ್‌ಪಿ ಆಳವಡಿಸುವ ಅವಧಿಯನ್ನು ಮತ್ತೆ ಮೂರು ತಿಂಗಳ ಕಾಲ ವಿಸ್ತರಿಸಲಾಗಿದೆ.

2019ರ ಏಪ್ರಿಲ್ ನಂತರದ ವಾಹನಗಳ ನೋಂದಣಿ ಮಾಡಿಕೊಳ್ಳುವಾಗಲೇ ಎಚ್‌ಎಸ್‌ಆರ್‌ಪಿ ಅಳವಡಿಸಲಾಗಿರುತ್ತದೆ. ಅದಕ್ಕಿಂತ ಹಿಂದೆ ನೋಂದಣಿಯಾಗಿರುವ ವಾಹನಗಳಿಗೆ ಎಚ್‌ಎಸ್‌ಆರ್‌ಪಿ ಆಳವಡಿಸಬೇಕಿದೆ. ಈ ಹಿಂದೆಯೂ ಗಡುವು ಹಲವು ಬಾರಿ ವಿಸ್ತರಿಸಲಾಗಿತ್ತು.