‘ಗೋರಕ್ಷ’ ಅಂದರೆ ಹಸುಕಾಯುವವ. ಈ ಭಂಗಿಯಲ್ಲಿ ಸಮತೋಲನಮಾಡಿ ನಿಲ್ಲುವುದು ಸ್ವಲ್ಪ ಕಷ್ಟ ಈ ಆಸನದಲ್ಲಿ ನಿಲ್ಲುವ ಕಾಲ ಅತಿಸ್ವಲ್ಪವಾದರೂ ಅಭ್ಯಾಸ ಕನಿಗೆ ಆದರಿಂದ ಉತ್ಸಾಹವು ಅಧಿಕಗೊಳ್ಳುವ ಅನುಭವವಾಗುವುದು.
ಅಭ್ಯಾಸ ಕ್ರಮ
1.ಮೊದಲು ಪದ್ಮಾಸನದಲ್ಲಿ ಕುಳಿತುಕೊಳ್ಳಬೇಕು ಬಳಿಕ ಕೈಗಳನ್ನು ನೇರವಾಗಿ ಮುಂದಕ್ಕೆ ಜಾತಿ ಅವುಗಳನ್ನು ನೆಲಕ್ಕಂಟಿಸಿಡಬೇಕು.
2. ಬಳಿಕ ಕೈಗಳ ಆಧಾರದಿಂದ ಪೃಷ್ಟಗಳನ್ನು ನೆಲದಿಂದ ಮೇಲೆತ್ತಬೇಕು.
3. ಅನಂತರ ಮುಂಡವನ್ನು ಮೇಲಕ್ಕೆ ನೇರ ವಾಗಿ ಹಿಗ್ಗಿಸಿ,ಮಂಡಿಗಳ ಹೊರಬದಿಯನ್ನು ನೆಲದ ಮೇಲೊತ್ತಿಟ್ಟು ದೇಹವನ್ನು ನೆಟ್ಟಗೆ ನಿಲ್ಲಿಸಬೇಕು.
4. ಆಮೇಲೆ ತೊಡೆಗಳನ್ನೆಳೆದು ಹಿಗ್ಗಿಸಿ ಕೈಗಳನ್ನು ಒಂದೊಂದಾಗಿ ಮೇಲೆತ್ತಿ, ಸಮತೋಲನದಲ್ಲಿ ನಿಲ್ಲಿಸಬೇಕು.
5. ಹೀಗೆ ಸಮತೋಲನಸ್ಥಿತಿಯು ಕೈವಸವಾದಮೇಲೆ, ಕೈಗಳನ್ನು ಎದೆಯ ಮೇಲ್ಭಾಗದಲ್ಲಿ ಜೋಡಿಸಿಟ್ಟು ಈ ಭಂಗಿಯಲ್ಲಿ ಸಾಧ್ಯವಾದಷ್ಟು ಕಾಲ ನೆಲೆಸಬೇಕು.
6. ತರುವಾಯ ಕೈಗಳನ್ನು ನೆಲದ ಮೇಲಿರಿಸಿ, ಕಳಗೆ ಕುಳಿತು ಕಾಲುಗಳನ್ನು ಸಡಿಲರಿಸಬೇಕು.
7. ಕೊನೆಯಲ್ಲಿ ಕಾಲುಗಳ ಸ್ಥಾನಗಳನ್ನು ಬದಲಿಸಿ ಇದೇ ಭಂಗಿಯನ್ನು ಅಭ್ಯಸಿಸಬೇಕು. ಎರಡೂ ಕಡೆ ಭಂಗಿಯಲ್ಲಿ ನೆಲೆಸುವ ಕಾಲ ಸಮವಾಗಿರಬೇಕು. *
ಪರಿಣಾಮಗಳು
ಈ ಆಸನದಲ್ಲಿ ಪದ್ಮಾಸನದಿಂದ ದೊರಕುವ ಸೌಲಭ್ಯಗಳು ಮಾತ್ರವಲ್ಲದೆ ಅಭ್ಯಾಸಕನಿಗೆ ಸಮತೋಲನ ಕ್ರಮದ ಅರಿ ವುಂಟಾಗುತ್ತದೆ. ಬೆನ್ನುಮೂಳೆಯ ಪುಚ್ಛ ಅಂದರೆ ತ್ರಿಕ ಅಥವಾ ಕಾಕ್ಸಿಸ್ ಎಂಬ ಮೂಳೆಯು ಸ್ಥಿತಿಸ್ಥಾಪಕತ್ವವನ್ನು ಗಳಿಸಲು ಈ ಆಸನವು ಸಹಕಾರಿಯಾಗಿದೆ.