ಮನೆ ಹಾಸ್ಯ ಹಾಸ್ಯ

ಹಾಸ್ಯ

0

 ಗೀತ : ರೀ ಪಕ್ಕದ್ಮನೇರು ಬಂದಿದ್ರು

 ರಾಜು : ಯಾಕಂತೆ?

 ಗೀತ   : ಅವರ ಮೂರನೇ ಹೆಂಡ್ತಿ ತಿಥಿಯಂತೆ. ಅದಕ್ಕೆ ಊಟಕ್ಕೆ ಹೋಗ್ಬೇಕಂತೆ.

 ರಾಜು : ನಾನು ಹೋಗೋದಿಲ್ಲ.

 ಗೀತ : ಯಾಕೆ ಹೋಗೋದಿಲ್ಲ?

 ರಾಜು : ಅಲ್ವೇ ಅವರು ಮೂರು ಬಾರಿ ಕರೆದಿದ್ದಾರೆ.ನಾನು ಒಂದು ಬಾರೀನೂ ಕರೆದಿಲ್ಲ ಅದಕ್ಕೆ.

Join Our Whatsapp Group

***

 ರಾಜು : ಡಾಕ್ಟ್ರೇ ನಾನು ಸ್ಲಿಮ್ ಆಗ್ಬೇಕು, ಏನ್ಮಾಡ್ಲೀ?

 ಡಾಕ್ಟರ್ : ಪ್ರತಿದಿನ 10 ಕಿ.ಮೀಟರ್ ನಂತೆ 200 ದಿನ ನಡೆಯಬೇಕು.

ರಾಜು :(200 ದಿನದ ನಂತರ ಡಾಕ್ಟರ್ ಗೆ ಫೋನ್ ಮಾಡಿದ್ದು ಡಾಕ್ಟರೇ,ನೀವು ಹೇಳಿದಂತೆ ನಡೆದೆ).

 ಡಾಕ್ಟರ್ : ಅದ್ಸರಿ ಈಗೆಲ್ಲಿದ್ದೀಯಾ?

 ರಾಜು : ದಿನಕ್ಕೆ ಹತ್ತು ಕಿಲೋಮೀಟರ್ ಇನ್ನೂರು ದಿನ ನಡೆದು ಈಗ ನಾನು ಊರಿಂದ ಎರಡು ಸಾವಿರ ಕಿಲೋಮೀಟರ್ ದೂರದಲ್ಲಿದ್ದೇನೆ. ಊರಿಗೆ ಬರಲು ಬಸ್ ಚಾರ್ಜ್ ಕಳಿಸಿ.