ಮನೆ ದೇವಸ್ಥಾನ ಶ್ರೀ ಚಾಮುಂಡೇಶ್ವರಿ ಬಸಪ್ಪನವರ ಪುಣ್ಯಕ್ಷೇತ್ರ

ಶ್ರೀ ಚಾಮುಂಡೇಶ್ವರಿ ಬಸಪ್ಪನವರ ಪುಣ್ಯಕ್ಷೇತ್ರ

0

ಸುಮಾರು 60 ಅಡಿ ಎತ್ತರದ ವಿಶೇಷವಾದ ಪಂಚಲೋಹದ ಶ್ರೀ ಚಾಮುಂಡೇಶ್ವರಿ ಅಮ್ಮನವರ ವಿಗ್ರಹ ಇರುವಂತ ಪುಣ್ಯಕ್ಷೇತ್ರ. ಇಲ್ಲಿಯ ಚಾಮುಂಡೇಶ್ವರಿ ಅಮ್ಮನವರ ಮೂಲ ವಿಗ್ರಹವು ಸ್ವಾಮೀಜಿಯವರಿಗೆ ಸಿಕ್ಕಿದಂತಹದು. ಅದಕ್ಕೆ ಒಂದು ಚಿಕ್ಕ ಗುಡಿಕಟ್ಟಿ ಪ್ರತಿಷ್ಠಾಪನೆ ಮಾಡಲಾಯಿತು. ಬಂದಂತಹ ಭಕ್ತರಿಗೆ ಹರಸುವ ತಾಯಿಯಾದಳು. ಕನಸಿನಲ್ಲಿ ಒಬ್ಬ ಭಕ್ತರಿಗೆ ಒಂದು ಹೆಣ್ಣು ಮಗಳ ರೂಪದಲ್ಲಿ ಬಂದು ನಿನ್ನ ಮನೆಯಿಂದ ಒಂದು ಗೋವನ್ನು ಚಾಮುಂಡೇಶ್ವರಿ ಕ್ಷೇತ್ರಕ್ಕೆ ಕೊಡಬೇಕೆಂದು ಆಜ್ಞೆ ಮಾಡಿದಂತಾಯಿತು.

Join Our Whatsapp Group

    ಅವರಿಗೆ ಆಶರ್ಯವಾಗಿ ಜೋಯಿಸರನ್ನು ಕೇಳಿದಾಗ ಅವರು ಅಮ್ಮನವರ ಆಜ್ಞೆಯಿಗಿದೆ ಆದ್ದರಿಂದ ಕೊಡಿ ಎಂದು ಹೇಳಿದರು. ಅವರು ಆ ಕ್ಷೇತ್ರಕ್ಕೆ ಬಂದು ಹೇಳಿದಾಗ ಮುಖ್ಯಸ್ಥರು ಕಸಾಯಿಖಾನೆಗೆ  ಮಾರಾಟವಾದ ಒಬ್ಬ ರೈತನ ಹತ್ತಿರ ಕೇಳಿದರು ನಮಗೆ ಕರು ಬೇಕು ಕೊಡ್ತೀರಾ ಎಂದು. ಅವನು ಕಸಾಯಿಖಾನೆಗೆ ಐದು ಸಾವಿರ ಮಾರಾಟ ಮಾಡಿದ್ದೇನೆ ಎಂದನು. ಕ್ಷೇತ್ರದ ಮುಖ್ಯಸ್ಥರು 3600 ಕೊಟ್ಟು ಆ ಹಸುವನ್ನು ಖರೀದಿಸಿ ಕ್ಷೇತ್ರಕ್ಕೆ ತಂದರು.

   ಆ ಕ್ಷೇತ್ರಕ್ಕೆ ತರುವ ಮೊದಲು ಹಸುವಿಗೆ ಮುದ್ರಾಧಾರಣೆ ಮಾಡಿದರು.ಅದಾದನಂತರ ಬಸವನಿಗೆ ಬಹಳ ಮಹಿಮೆ ಬಂದಿದೆ.ಭಕ್ತರ ಕೋರಿಕೆಯನ್ನು ಈಡೇರಿಸುತ್ತಾ ಪ್ರತ್ಯಕ್ಷ ಭಗವಂತನ ರೂಪದಲ್ಲಿ ಬಸವಣ್ಣನವರು ನಡೆದಾಡುವ ದೇವರಾಗಿ ಹಲವಾರು ಭಕ್ತರ ಸಮಸ್ಯೆಗಳಿಗೆ ಪರಿಹಾರ ಮಾಡುತ್ತಾ ಕರುಣಾಮಯಿ ಆಗಿ ನೆಲೆಸಿದ್ದಾರೆ.

   12ನೇ ಶತಮಾನದಲ್ಲಿ ಬಸವಣ್ಣನವರು ಸಮಾಜ ಸುಧಾರಣೆ ಕಾರ್ಯಕ್ಕಾಗಿ ತಮ್ಮ ಜೀವನವನ್ನು ಮುಡುಪಾಗಿಟ್ಟವರು.ಆದರೆ ಕಲಿಯುಗದಲ್ಲಿ ಗೌಡಗೆರೆ ಶ್ರೀ ಕ್ಷೇತ್ರವು ಪ್ರಸಿದ್ಧಿ ಹೊಂದಲು ಬಂದಂತಹ ಈ ಬಸವಣ್ಣನವರು ಭಕ್ತಾದಿಗಳ ಹಲವಾರು ರೀತಿಯ ಕಷ್ಟಗಳನ್ನು ಪರಿಹಾರ ಮಾಡಲಿಕ್ಕಾಗಿ ಧರೆಗಿಳಿದು ಬಂದಂತವರು.

   ಈ ಬಸಪ್ಪನವರು ಆಗಿನ ಕಾಲದ ಬಸವಣ್ಣನವರು ಸ್ವತಂತ್ರಕ್ಕಾಗಿ ಅಡಿಪಾಯ ಇಟ್ಟಂತ ಸ್ಥಳ ಉತ್ತರ ಕರ್ನಾಟಕದ  ಬೆಳಗಾವಿ ಜಿಲ್ಲೆಯ ಬೈರಮಂಗಲ ತಾಲೂಕಿನ ಸಮೀಪದಲ್ಲೇ ಬಸಪ್ಪನವರು ತಮ್ಮ ಮತ್ತೊಂದು ಶಾಖೆಯನ್ನು ಪ್ರಾರಂಭ ಮಾಡಿದರು.

   ಅಲ್ಲಿನ ಭಕ್ತಾದಿಗಳ ಕಷ್ಟ ಪರಿಹರಿಸಿ ಅವರು ಕೊಟ್ಟಂತಹ ಉಡುಗೊರೆ ರೂಪದ ಭೂಮಿಯನ್ನು ಬೇರೆ ಯಾವುದಕ್ಕೂ ಉಪಯೋಗಿಸಬಾರದು ಪ್ರತಿ ವರ್ಷ ಅವರಿಗೆ ಉತ್ತರ ಕರ್ನಾಟಕದಲ್ಲಿ ಜಾತ್ರಾ ಮಹೋತ್ಸವ ನೆರವೇರಿಸಬೇಕೆಂದು ಹರಸಿ ಅಲ್ಲಿ ಮತ್ತೊಂದು ಶಾಖೆಯನ್ನು ಮಾಡಿಕೊಂಡು ಪ್ರತಿ ಮೂರು ತಿಂಗಳಿಗೊಮ್ಮೆ ಬಸಪ್ಪನವರ ಕ್ಷೇತ್ರಕ್ಕೆ ಹೋಗುತ್ತಾರೆ.

    ಮತ್ತು ಭಕ್ತಾದಿಗಳು ಹೊರ ರಾಜ್ಯಗಳಿಂದ ದೇಶಗಳಿಂದ ಬಸಪ್ಪನವರ ದರ್ಶನಕ್ಕೆಂದು ಬರುತ್ತಾರೆ ಇಲ್ಲಿ ದಾಸೋಹ ಭವನ ಮಾಡಿದ್ದಾರೆ.ಇಲ್ಲಿ ಸ್ವಾಮೀಜಿಯವರಿಗೆ ಸಿಕ್ಕಂತಹ ಚಾಮುಂಡೇಶ್ವರಿ ಅಮ್ಮನವರ ವಿಗ್ರಹವನ್ನು ಪ್ರತಿ ಭೀಮನ ಅಮಾವಾಸ್ಯೆಯೆಂದು ಎಲ್ಲರೂ ದರ್ಶನ ಮಾಡಲು ಹೊರಗೆ ತರುತ್ತಾರೆ.