ಮನೆ ರಾಜಕೀಯ ಪೆನ್​ ಡ್ರೈವ್ ಕೇಸ್ ​ನಲ್ಲಿ ಬಂಧನ ಆಗಿರುವುದು ನನ್ನ ಪಿಎ ಅಲ್ಲ: ಪ್ರೀತಂಗೌಡ

ಪೆನ್​ ಡ್ರೈವ್ ಕೇಸ್ ​ನಲ್ಲಿ ಬಂಧನ ಆಗಿರುವುದು ನನ್ನ ಪಿಎ ಅಲ್ಲ: ಪ್ರೀತಂಗೌಡ

0

ಬೆಂಗಳೂರು: ಪೆನ್​ ಡ್ರೈವ್ ಕೇಸ್ ​ನಲ್ಲಿ ಬಂಧನ ಆಗಿರುವುದು ನನ್ನ ಪಿಎ ಅಲ್ಲ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರೀತಂಗೌಡ ಹೇಳಿದ್ದಾರೆ.

Join Our Whatsapp Group

ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಹಾಸನದಲ್ಲಿ 2 ಲಕ್ಷ ಮೊಬೈಲ್ ಇದ್ದರೆ ಎಲ್ಲ ಮೊಬೈಲ್​ನಲ್ಲೂ ಇರುತ್ತೆ. ಇದರಲ್ಲಿ ಯಾವುದೇ ಅನುಮಾನ ಬೇಡ. ಯಾಕೆಂದರೆ ಯಾರು ಬೇಕು ಅಂತಾ ತರಿಸಿಕೊಂಡಿರುವುದಿಲ್ಲ. ನನ್ನ ಕಚೇರಿಯಲ್ಲಿ 40-50ಕ್ಕಿಂತ ಹೆಚ್ಚು ಜನ ಕೆಲಸ ಮಾಡುತ್ತಾರೆ. ಒಬ್ಬ ಪೆನ್ ​ಡ್ರೈವ್​ ನಲ್ಲಿ ಹಾಕಿ ನೋಡಿದರೆ ಅಪರಾಧ ಅಂದರೆ ಹೇಗೆ ಎಂದು ಪ್ರಶ್ನಿಸಿದ್ದಾರೆ.

ಎಸ್​ಐಟಿ ಇದೇ ಮಾನದಂಡದಲ್ಲಿ ತನಿಖೆ ಮಾಡುತ್ತದೆ ಅಂತಾದರೆ ಜಿಲ್ಲೆಯಲ್ಲಿ 15 ಲಕ್ಷ ಮೊಬೈಲ್ ಬಳಕೆದಾರರು ತಪ್ಪಿತಸ್ಥರಾಗುತ್ತಾರೆ. ನಮ್ಮ ಕಚೇರಿಯಲ್ಲಿ ಸಂಬಳಕ್ಕೆ ಕೆಲಸ ಮಾಡುವವರು ಇದ್ದಾರೆ. ವಾಲಂಟರಿಯಾಗಿ ಕೆಲಸ ಮಾಡುವವರೂ ಇದ್ದಾರೆ. ಏಪ್ರಿಲ್ 23ರಂದು ಲಾಯರ್ ಪೆನ್ ಡ್ರೈವ್ ತಂದು ಕೊಟ್ಟಿದ್ದಾರೆ. ಹಾಗಂತ ಲಾಯರ್ ಮೇಲೆ ಕೇಸ್ ದಾಖಲಿಸಲು ಆಗುತ್ತಾ ಎಂದಿದ್ದಾರೆ. ನಾನು ಯಾರಿಗೂ ವಕ್ತಾರ ಆಗಲು ರೆಡಿ ಇಲ್ಲ. ಸಂತ್ರಸ್ತರ ವಿಡಿಯೋ ಹರಿಬಿಡಬಾರದು ಎಂಬುದೇ ನನ್ನ ನಿಲುವು ಎಂದು ಹೇಳಿದ್ದಾರೆ.

ಪೆನ್ ​ಡ್ರೈವ್ ಕೇಸ್ ​ನಲ್ಲಿ ಪ್ರೀತಂಗೌಡ ಆಪ್ತರ ಬಂಧನ ವಿಚಾರವಾಗಿ ಪ್ರತಿಕ್ರಿಯಿಸಿದ್ದು, ತನಿಖೆ ನಡೆಯುತ್ತಿರುವಾಗ ಆ ಬಗ್ಗೆ ಮಾತಾಡುವುದು ಸರಿಯಲ್ಲ. ಯಾರು ಏನು ಮಾಡಿದ್ದಾರೆ ಅಂತಾ ತನಿಖೆ ಮೂಲಕ ಗೊತ್ತಾಗುತ್ತದೆ. ಯಾವುದೇ ಕಾರಣಕ್ಕೂ ಅಶ್ಲೀಲ ವೀಡಿಯೋಗಳನ್ನು ಇಟ್ಟುಕೊಳ್ಳಬೇಡಿ. ಫಾರ್ವರ್ಡ್ ಮಾಡಬೇಡಿ ಅಂತಾ ನಮ್ಮ ಕಾರ್ಯಕರ್ತರಿಗೆ ಹೇಳಿದ್ದೆ. ಇಂದಿನವರೆಗೂ ಜವಾಬ್ದಾರಿಯುತ ವ್ಯಕ್ತಿಯಾಗಿ ನಡೆದುಕೊಂಡಿದ್ದೇನೆ ಎಂದರು.

ಈ ರೀತಿ ಆದರೆ ಒಂದೂವರೆ ಲಕ್ಷ ಜನರನ್ನು ವಶಕ್ಕೆ ಪಡೆಯಬೇಕು. ಹಾಸನದಲ್ಲಿ ಒಂದರಿಂದ ಒಂದೂವರೆ ಲಕ್ಷ ಜನರ ವಶಕ್ಕೆ ಪಡೆಯಬೇಕು. ಜನರ ಮೊಬೈಲ್​ನಲ್ಲಿ ಇರುವುದರ ಬಗ್ಗೆ ಮಾತನಾಡಿದರೆ ಉಪಯೋಗವಿಲ್ಲ. ವ್ಯವಸ್ಥಿತವಾಗಿ ತನಿಖೆಯನ್ನು ಮಾಡುವುದು ಬಹಳ ಅವಶ್ಯಕತೆ ಇದೆ. ಇದಕ್ಕೆ ಬೇರೆ ಅರ್ಥ ಕಲ್ಪಿಸುವ ಅವಶ್ಯಕತೆ ಇಲ್ಲ ಎಂದು ಹೇಳಿದ್ದಾರೆ.