ಬೆಂಗಳೂರು: ವೈಟ್ ಬೋರ್ಡ್ನಲ್ಲಿ ಅನಧಿಕೃತವಾಗಿ ಸಂಚಾರ ಮಾಡ್ತಿದ್ದ ಬಿಎಂಡಬ್ಲೂ, ವೋಲ್ವೋ, ಎಲೆಕ್ಟ್ರಿಕ್ ಬಿವೈಡಿ ಸೇರಿದಂತೆ ನಲವತ್ತಕ್ಕೂ ಹೆಚ್ಚು ವಾಹನಗಳನ್ನು ಆರ್ಟಿಓ ಅಧಿಕಾರಿಗಳು ಸೀಜ್ ಮಾಡಿದ್ದಾರೆ.
ಆ್ಯಪ್ಗಳ ಮೂಲಕ ಅನಧಿಕೃತವಾಗಿ ವೈಟ್ ಬೋರ್ಡ್ ಕಾರುಗಳನ್ನು ಬಾಡಿಗೆಗೆ ನೀಡಲಾಗುತ್ತಿತ್ತು. ಇದೀಗ ಎಚ್ಚೆತ್ತ ಆರ್ಟಿಓ ಅಧಿಕಾರಿಗಳು ಇನ್ನೂರಕ್ಕೂ ಹೆಚ್ಚು ಕೇಸ್ ದಾಖಲಿಸಲಾಗಿದೆ.
ಇಂದು ಬೆಳ್ಳಂಬೆಳಗ್ಗೆ ಬೆಂಗಳೂರಿನಲ್ಲಿ ಹತ್ತು ತಂಡಗಳಾಗಿ ಕಾರ್ಯಾಚರಣೆ ನಡೆಸಿದ ಆರ್ಟಿಓ ಅಧಿಕಾರಿಗಳು, ತೆರಿಗೆ ಕಟ್ಟದ, ವಾಹನಗಳ ಮೇಲೆ ಅನಧಿಕೃತವಾಗಿ ಅಡ್ವರ್ಟೈಸ್ಮೆಂಟ್ ಹಾಕಿದ, ಹೆಚ್ಚುವರಿ ಲೈಟ್ಸ್, ಬಸ್ ಮೇಲೆ ಹೆವಿ ಲೋಡ್ ಸೇರಿದಂತೆ ಎಲ್ಲಾ ವಾಹನಗಳನ್ನು ಸೀಜ್ ಮಾಡಿದ್ದಾರೆ. ಸಿಲಿಕಾನ್ ಸಿಟಿಯ ಸಾಕಷ್ಟು ಕಾರು ಮಾಲೀಕರು ತಮ್ಮ ವೈಟ್ ಬೋರ್ಡ್ ಕಾರುಗಳಲ್ಲಿ ಟ್ರಾವೆಲ್ಸ್ ನಡೆಸುತ್ತಿರುವ ಬಗ್ಗೆ ದೂರುಗಳು ಬಂದ ಹಿನ್ನೆಲೆಯಲ್ಲಿ ಇಂದಿನಿಂದ ಅಂತಹ ವಾಹನಗಳನ್ನು ಸೀಜ್ ಮಾಡಲು ಆರ್ ಟಿಓ ಅಧಿಕಾರಿಗಳು ಮುಂದಾಗಿದ್ದಾರೆ.