ಮನೆ ಅಪರಾಧ ಕ್ರೂಸರ್ ವಾಹನ ಪಲ್ಟಿ: ಮೂವರು ಮಹಿಳೆಯರು ಸಾವು

ಕ್ರೂಸರ್ ವಾಹನ ಪಲ್ಟಿ: ಮೂವರು ಮಹಿಳೆಯರು ಸಾವು

0

ಚಿಕ್ಕೋಡಿ/ಅಥಣಿ: ಶನಿವಾರ ಮಹಾರಾಷ್ಟ್ರದ ಜತ್ತ ಬಳಿ ಕ್ರೂಸರ್ ವಾಹನ ಪಲ್ಟಿಯಾಗಿ ಅಥಣಿ ತಾಲ್ಲೂಕಿನ ಬಳ್ಳಿಗೇರಿಯ ಮೂವರು ಮಹಿಳೆಯರು ಮೃತಪಟ್ಟಿದ್ದಾರೆ.

Join Our Whatsapp Group

ಮಹಾದೇವಿ ಚೌಗಲಾ, ಗೀತಾ ದೊಡಮನಿ, ಕಸ್ತೂರಿ ಮೃತರು. ಇವರೆಲ್ಲರೂ ಕೆಲಸಕ್ಕಾಗಿ ಮಹಾರಾಷ್ಟ್ರಕ್ಕೆ ಹೊರಟಿಟ್ದರು. ಕ್ರೂಸರ್ ವಾಹನದ ಎಡಬದಿಯ ಟೈಯರ್‌ ಸ್ಫೋಟಗೊಂಡು ಅಪ‍ಘಾತ ಸಂಭವಿಸಿದೆ.

ಇದೇ ವಾಹನದಲ್ಲಿ ಸಂಚರಿಸುತ್ತಿದ್ದ ಹಲವರಿಗೆ ಗಂಭೀರ ಗಾಯವಾಗಿದೆ. ಗಾಯಾಳುಗಳನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಘಟನೆಯಿಂದಾಗಿ ಬಳ್ಳಿಗೇರಿಯಲ್ಲಿ ನೀರವ ಮೌನ ಆವರಿಸಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ಹಿಂದಿನ ಲೇಖನಕೆಎ​ಎಸ್ ಅಧಿಕಾರಿಯ ಪತ್ನಿ ನೇಣು ಬಿಗಿದುಕೊಂಡು ಆತ್ಮಹತ್ಯೆ
ಮುಂದಿನ ಲೇಖನಹಣಕ್ಕೆ ಬೇಡಿಕೆ ಇಟ್ಟು ಸೆಕೆಂಡ್ ​ಹ್ಯಾಂಡ್ ಕಾರು ವ್ಯಾಪಾರಿಯನ್ನು ಬೆತ್ತಲೆ ಮಾಡಿ ಹಲ್ಲೆ: ಆರೋಪಿಗಳ ಬಂಧನ