ಮನೆ ಮಾನಸಿಕ ಆರೋಗ್ಯ ಸ್ಕಿಜೋಫ್ರೇನಿಯಾ ರೋಗಿಗಳು ಮನೆಯಲ್ಲಿ ಆರೈಕೆ

ಸ್ಕಿಜೋಫ್ರೇನಿಯಾ ರೋಗಿಗಳು ಮನೆಯಲ್ಲಿ ಆರೈಕೆ

0

    ಈ ರೋಗಿಗಳನ್ನು ಮಾನಸಿಕ ಆಸ್ಪತ್ರೆಗಳಿಗೆ ಸೇರಿಸುವಾಗ ಅಗತ್ಯ ಬಲು ಕಡಿಮೆ. ಯಾವುದೋ ಒಂದು ಹಂತದಲ್ಲಿ ಸೇರಿಸಿದರೂ ಅಲ್ಪಕಾಲ ಆಸ್ಪತ್ರೆಯಲ್ಲಿದ್ದರೆ ಸಾಕೆನಿಸುತ್ತದೆ. ರೋಗವನ್ನು ಬೇಗ ಗುರುತಿಸಿ, ರೋಗಿಯನ್ನು ಸಮೀಪದ ಮನೋ ವೈದ್ಯರಲ್ಲಿಗೆ ಅಥವಾ ತರಬೇತು ಪಡೆದ ಯಾವುದೇ ವೈದ್ಯರಲ್ಲಿ ಕರೆದೊಯ್ಯಬೇಕು ಔಷಧಿಯನ್ನು ಕ್ರಮವಾಗಿ ಕೊಡಬೇಕು. ರೋಗಿ ತನ್ನ ಮನೆಯಲ್ಲಿ ತನ್ನ ಮನೆಯವರ ಆರೈಕೆಯಲ್ಲಿ ಉಳಿದರೆ,ಕಾಯಿಲೆ ಬಹುಬೇಗ ಹತೋಟಿಗೆ ಬರುತ್ತದೆ ಎಂಬುದು ಈಗ ಸಾಬೀತಾಗಿದೆ. ಪಾಶ್ಯಾತ್ಯ ರಾಷ್ಟ್ರಗಳಿಗೆ ಹೋಲಿಸಿದರೆ ಭಾರತದಲ್ಲಿ  ಸ್ಕಿಜೋಫ್ರೀನಿಯ ರೋಗಿಗಳು ಬೇಗ ಗುಣಮುಖರಾಗಿ, ಸಂಸಾರಕ್ಕೂ ಸಮಾಜಕ್ಕೂ ಉಪಯುಕ್ತ ವ್ಯಕ್ತಿಗಳಾಗಿ ಬದುಕಬಲ್ಲರಾಗಿದ್ದಾರೆ ಎಂದು ಅಧ್ಯಯನಗಳು ತಿಳಿಸಿವೆ.

Join Our Whatsapp Group

    ಈಗ ಕರ್ನಾಟಕದಲ್ಲಿ ಎಲ್ಲ ಜಿಲ್ಲಾ ಕೇಂದ್ರಗಳಲ್ಲೂ ಮನೋವೈದ್ಯರಿದ್ದಾರೆ ಎಲ್ಲ ವೈದ್ಯಕೀಯ ಕಾಲೇಜು ಆಸ್ಪತ್ರೆಗಳಲ್ಲಿ ಮನೋವೈದ್ಯ ಘಟಕಗಳಿವೆ, ಬೆಂಗಳೂರಿನ ನಿಮಾನ್ಸ್ ಆಸ್ಪತ್ರೆ ಧಾರವಾಡದ ಮಾನಸಿಕ ಆರೋಗ್ಯ ಸಂಸ್ಥೆ ಪ್ರಮುಖವೆನಿಸಿವೆ. ಸ್ಕಿಜೋಫ್ರೋನಿಯ  ರೋಗಿಗಳ ಬಗ್ಗೆ ನಿರ್ಲಕ್ಷ ಸಲ್ಲದು. ಅವರಿಗೆ ಕಾಯಿಲೆ  ಬರಲು ದೆವ್ವ, ಮಾಟ ಮಂತ್ರ ಮದ್ದಿಡುವುದು ಕಾರಣ ಎಂದು ತಪ್ಪಾಗಿ ತಿಳಿಯದೆ, ಆದಷ್ಟು ಬೇಗ ಔಷಧೋಪಚಾರವನ್ನು ಪ್ರಾರಂಭಿಸಿದರೆ, ಈ ರೋಗ ಬಲು ಬೇಗ ಹತೋಟಿಗೆ ಬರುತ್ತದೆ. ರೋಗಿ ರೋಗಮುಕ್ತನಾಗಿ ಉಪಯುಕ್ತ ಜೀವನವನ್ನು ಮಾಡಬಲ್ಲ

ಮೇನಿಯಾ ವಿಕಲತೆ

35 ವರ್ಷದ ಕೃಷ್ಣಯ್ಯ ಸೈಕಲ್ ಶಾಪ್ ಇಟ್ಟಿದ್ದಾನೆ.ಎಲ್ಲರೊಂದಿಗೆ ಸ್ನೇಹಪೂರವಾಗಿ ನಡೆದುಕೊಳ್ಳುತ್ತಿದ್ದ ಈಗ ಎರಡು ತಿಂಗಳಿಂದ, ಆತ ಹೆಚ್ಚು ಮಾತನಾಡುತ್ತಾನೆ.ನಾನೇ ಈ ತಾಲ್ಲೂಕಿನ ಅಮಲ್ದಾದ ಎನ್ನುತ್ತಾನೆ!“ನಿಮಗೇನು ಬೇಕು ಹೇಳಿ.ಈಗಲೇ ಅದನ್ನು ಕೊಡುವಂತೆ ಅಪ್ಪಣೆ ಮಾಡುತ್ತೇನೆ” ಎಂದು ಜನರಿಗೆ ಹೇಳುತ್ತಾನೆ “ತಾಲೂಕು ಕಚೇರಿಯ ಸಿಬ್ಬಂದಿಯಲ್ಲ ಲಂಚಕೋರರು ಕಳ್ಳರು, ಅವರನ್ನು ಕೆಲಸದಿಂದ ವಜಾ ಮಾಡುತ್ತೇನೆ” ಎನ್ನುತ್ತಾನೆ ಇತ್ತೀಚಿಗೆ ಬಹಳ ಶಿಸ್ತಾಗಿ ಅಲಂಕಾರ ಮಾಡಿಕೊಳ್ಳುತ್ತಾನೆ.ನೋಡಿದರೆ ಬಹಳ ಖುಷಿಯಲ್ಲಿರುವಂತೆ ಕಾಣುತ್ತಾನೆ “ನೀನು ಬಹಳ ಚೆನ್ನಾಗಿ ಕಾಣುತ್ತೀಯ” ಎಂದು ಯಾರೋ ಹೇಳಿದಾಗ ಅವನು ಎದೆಯುಬ್ಬಿಸಿ “ಸಿನೇಮಾ ತಾರೆಯೊಬ್ಬಳನ್ನು ನನ್ನನ್ನು ಮದುವೆಯಾಗು ಎಂದ ದುಂಬಾಲು ಬಿದ್ದಿದ್ದಾಳೆ” ಎಂದ! ಈಗ ಅವನು ಬಹಳ ಉದಾರಿ ಎಷ್ಟೋ ಸಾರಿ ಸೈಕಲ್ ಬಾಡಿಗೆಯನ್ನೇ ಕೇಳುವುದಿಲ್ಲ ಈ ರೀತಿ ದುಂಡು ಮಾಡಿ ಆತ ಸಾಕಷ್ಟು ಹಣ ಕಳೆದುಕೊಂಡಿದ್ದಾನೆ. ಕೆಲವರೊಂದಿಗೆ ವಿನಾಕಾರಣ ಜಗಳ ಮಾಡಿದ್ದಾನೆ.ಮನೆಯಲ್ಲಿ ಆತ ಹೆಂಡತಿ ಕಂಡಂತೆ ಕೃಷ್ಣಯ್ಯ ರಾತ್ರಿ ಹೊತ್ತು ನಿದ್ದೆ ಮಾಡನು.ಎದ್ದು ಅಂಗಳದಲ್ಲಿ ತಿರುಗುತ್ತಾನೆ. ಐದು ವರ್ಷಗಳ ಹಿಂದೆ ಕೃಷ್ಣಯ್ಯ ಇದೇ ರೀತಿ ಆಡಿದ್ದನೆಂದೂ. ಆಗ ಅವನ ಗಲಾಟೆ ತಡೆಯಲಾರದೆ ಅವನನ್ನು ಮಾನಸಿಕ ಆಸ್ಪತ್ರೆಗೆ ಸೇರಿಸಬೇಕಾಯಿತೆಂದು ಆತನ ತಾಯಿ ನೆನಪ್ಪಿಸಿಕೊಳ್ಳುತ್ತಾರೆ.ಆಗ ಒಂದುವರೆ ತಿಂಗಳಲ್ಲಿ ಅವನಿಗೆ ಗುಣವಾಗಿತ್ತಂತೆ.

   ಮೇನಿಯಾ ವಿಕಲತೆಯಲ್ಲಿ ಮುಖ್ಯವಾಗಿ ಭಾವನೆ ಏರುಪೇರು ಗುತ್ತದೆ.ವಿನಾಕಾರಣ ವಿಪರೀತ ಸಂತೋಷವೇ ಈ ವಿಕಲತೆಯ ಲಕ್ಷಣ.ಇಚ್ಚಿತ್ತ ವಿಕಲತೆಯ ರೋಗಿಯಂತೆ ಈ ಖಾಯಿಲೆಯ ರೋಗಿ ಹೆಚ್ಚಾಗಿ ಮಾತನಾಡಿದರೂ, ಅವನ ಮಾತು ಬೇರೆಯವರಿಗೆ ಅರ್ಥವಾಗದಂತೆ ರೋಗಿ ತಾನೊಬ್ಬ ವಿಶೇಷ ಶಕ್ತಿಯುಳ್ಳ ದೊಡ್ಡ ಮನುಷ್ಯ ಎಂದು ಭ್ರಮಿಸಿ ಹಾಗೇ ನಡೆದುಕೊಳ್ಳುತ್ತಾನೆ. ರೋಗಿಗೆ ವಿಪರೀತ ಸಾಮರ್ಥ್ಯವಿದ್ದಂತೆ, ಆತನಿಗೆ ಆಯಾಸವೇ ಆಗುವುದಿಲ್ಲವೇನೋ ಎನ್ನುವಂತೆ ಅತಿಯಾಗಿ ಆಡುತ್ತಾನೆ.ಆತ ವ್ಯಂಗ್ಯೋಕ್ತಿಗಳಿಂದ,ನಗೆ ಚಟಾಕಿಗಳಿಂದ ಇತರರನ್ನು ನಗಿಸಬಹುದು.ಬೇರೆಯವರು ಹೇಳಿದ್ದಕ್ಕೆ ಒಪ್ಪದಿದ್ದರೆ, ಕೋಪಗೊಂಡು ಕೂಗಾಡಬಹುದು.ಸ್ವಲ್ಪಕ್ಕೆ ಆತ ವಿದ್ ಉದ್ರೇಗಗೊಂಡು, ಹೊಡೆದಾಟಕ್ಕೆ ಹಿಂಸಾಚಾರಕ್ಕೆ ಇಳಿಯಬಹುದು. ಈ ವಿಕಲತೆ ಸಾಮಾನ್ಯವಾಗಿ 30 ವಯಸ್ಸಿನ ನಂತರ ಶುರುವಾಗುತ್ತದೆ ಮತ್ತೆತ್ತೆ ಬರಬಲ್ಲ ಈ ಖಾಯಿಲೆಯಲ್ಲಿ ಖಾಯಿಲೆಯ ನಡುವೆ ವ್ಯಕ್ತಿ ಪೂರಾ ಆರೋಗ್ಯವಾಗಿರುತ್ತಾನೆ .

          ಸಮಾಧಾನಕರ ಔಷಧಗಳು, ವಿದ್ಯುತ್ ಕಂಪನ ಚಿಕಿತ್ಸೆಗಳಿಂದ ಈ ಕಾಯಿಲೆ ಹತೋಟಿಗೆ ಬರುತ್ತದೆ.ಒಂದು ವರ್ಷದಲ್ಲಿ ಎರಡಕ್ಕಿಂತ ಹೆಚ್ಚು ಬಾರಿ ಮೇನಿಯಾ ವಿಕಲತೆ ಬಂದರೆ, ಅದು ಹಾಗೆ ಬರದಂತೆ ಮಾಡಬಲ್ಲ ನಿವಾರಣೀಯ ಔಷಧ ಲಿಥಿಯಂ ಅಥವಾ ಸೋಡಿಯಂ ವಾಲ್ ಪ್ರೊಯೇಟ್ ಅನ್ನು ಕೊಡಲಾಗುತ್ತದೆ.ಈ ಔಷಧವನ್ನು ವೈದ್ಯರ ಮಾರ್ಗದರ್ಶನದಲ್ಲಿ ಬಹಳ ಕಾಲ ಸೇವಿಸಬೇಕಾಗುತ್ತದೆ.