ಮನೆ ಮನರಂಜನೆ ಕೋಮಲ್ ಕುಮಾರ್ ಜನ್ಮದಿನ: ‘ಎಲಾ ಕುನ್ನಿ’ ಪೋಸ್ಟರ್​ ರಿಲೀಸ್

ಕೋಮಲ್ ಕುಮಾರ್ ಜನ್ಮದಿನ: ‘ಎಲಾ ಕುನ್ನಿ’ ಪೋಸ್ಟರ್​ ರಿಲೀಸ್

0

ಕನ್ನಡ ಚಿತ್ರರಂಗ ಎಂದಿಗೂ ಮರೆಯದಂತಹ ನಟ ವಜ್ರಮುನಿ. ಅವರಿಗೆ ಸರಿಸಾಟಿ ಆಗುವಂತಹ ಕಲಾವಿದ ಮತ್ತೊಬ್ಬರಿಲ್ಲ. ವಜ್ರಮುನಿ ಅವರ ಮ್ಯಾನರಿಸಂ ಸಖತ್​ ಫೇಮಸ್​. ‘ಎಲಾ ಕುನ್ನಿ..’ ಎಂದು ಅವರು ಹೇಳಿದ್ದ ಡೈಲಾಗ್ ​ಗೆ ಅಭಿಮಾನಿಗಳು ಫಿದಾ ಆಗಿದ್ದರು. ಅದನ್ನೇ ಈಗ ಶೀರ್ಷಿಕೆಯಾಗಿಸಿಕೊಂಡು ಸಿನಿಮಾ ಮೂಡಿಬರುತ್ತಿದೆ.

Join Our Whatsapp Group

‘ಯಲಾ ಕುನ್ನಿ’ ಚಿತ್ರದಲ್ಲಿ ಕೋಮಲ್​ ಕುಮಾರ್ ಮುಖ್ಯಪಾತ್ರದಲ್ಲಿ ನಟಿಸುತ್ತಿದ್ದಾರೆ. ಇಂದು ಅವರ ಜನ್ಮದಿನ. ಆ ಪ್ರಯುಕ್ತ ಹೊಸ ಪೋಸ್ಟರ್​ ಬಿಡುಗಡೆ ಮಾಡಲಾಗಿದೆ. ವಜ್ರಮುನಿ ಲುಕ್ ​ನಲ್ಲಿಯೇ ಈ ಪೋಸ್ಟರ್​ ಮೂಡಿಬಂದಿದೆ ಎಂಬುದು ವಿಶೇಷ.

‘ಯಲಾ ಕುನ್ನಿ’ ಸಿನಿಮಾವನ್ನು ‘ಸೌಭಾಗ್ಯ ಸಿನಿಮಾಸ್’ ಬ್ಯಾನರ್​ ಮೂಲಕ ಮಹೇಶ್ ಗೌಡ ಅವರು ನಿರ್ಮಿಸುತ್ತಿದ್ದಾರೆ. ಕಥೆ, ಚಿತ್ರಕಥೆ ಮತ್ತು ಸಂಭಾಷಣೆ ಬರೆದು ಎನ್.ಆರ್. ಪ್ರದೀಪ್ ಅವರು ಈ ಸಿನಿಮಾವನ್ನು ನಿರ್ದೇಶಿಸುತ್ತಿದ್ದಾರೆ.

ಅಭಿಮಾನಿಗಳು ಮಾತ್ರವಲ್ಲದೇ ಕನ್ನಡ ಚಿತ್ರರಂಗದ ಸೆಲೆಬ್ರಿಟಿಗಳು ಕೂಡ ‘ಎಲಾ ಕುನ್ನಿ’ ಚಿತ್ರದ ಪೋಸ್ಟರ್ ಶೇರ್​ ಮಾಡಿಕೊಂಡಿದ್ದಾರೆ.

‘ನವರಸ ನಾಯಕ’ ಜಗ್ಗೇಶ್ ಅವರ ಮಗ ಯತಿರಾಜ್ ಹಾಗೂ ವಜ್ರಮುನಿ ಅವರ ಮೊಮ್ಮಗ ಆಕರ್ಶ್ ಅವರು ಸಹ ಈ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ‘ಎಲಾ ಕುನ್ನಿ’ ಚಿತ್ರದ ಶೀರ್ಷಿಕೆ ಗಮನ ಸೆಳೆಯುತ್ತಿದೆ. ಅಷ್ಟೇ ಅಲ್ಲದೇ, ‘ಮೇರಾ ನಾಮ್ ವಜ್ರಮುನಿ’ ಎಂಬ ಟ್ಯಾಗ್​ ಲೈಗ್​ ಕೂಡ ಹೈಲೈಟ್​ ಆಗಿದೆ. ‘ನರಕ ತುಂಬಿ ಮರಳಿ ಬಂದ ರಾಮನ ಗುಣದ ರಾವಣ’ ಎಂಬ ಸಾಲು ಈ ಪೋಸ್ಟರ್​ ನಲ್ಲಿದೆ.

ಹಿಂದಿನ ಲೇಖನಮೈಸೂರು: ವಿವಿಧ ಕಾರಣಗಳಿಂದ ತೆರವಾಗಿರುವ ಗ್ರಾಮ ಪಂಚಾಯಿತಿ ಸದಸ್ಯ ಸ್ಥಾನಗಳಿಗೆ ಉಪ ಚುನಾವಣೆ
ಮುಂದಿನ ಲೇಖನವಿದ್ಯುತ್ ಲೈನ್ ಕಡಿತಕ್ಕೆ ಲಂಚ: ಲೈನ್ ಮ್ಯಾನ್ ಲೋಕಾಯುಕ್ತ ಬಲೆಗೆ