ಮನೆ ಮಾನಸಿಕ ಆರೋಗ್ಯ ಕಾಲ ಬದಲಾಯಿತು ನಾವು ಬದಲಾಗೋಣ

ಕಾಲ ಬದಲಾಯಿತು ನಾವು ಬದಲಾಗೋಣ

0

    ಈ ಮುಂಚೆ ನಾವು ಮಕ್ಕಳೊಂದಿಗೆ ಹೇಗೆ ನಡೆದುಕೊಳ್ಳಬೇಕು ಎಂಬ ಪುಸ್ತಕಗಳು ನೋಡೋಣವೆಂದರೂ ಸಿಗುತ್ತಿರಲಿಲ್ಲ.ಮಕ್ಕಳು ಹಿರಿಯರೊಂದಿಗೆ ಹೇಗೆ ನಿಂತುಕೊಳ್ಳಬೇಕು?ಎಂಬ ಮೌಲ್ಯ ಗಳನ್ನು ಕಳಿಸುವ ಪುಸ್ತಕಗಳು ಒಂದೆರಡಿದ್ದವು.ಅದರೀತ ಪರಿಸ್ಥಿತಿ ಬದಲಾಗಿದೆ. ಯಾವ ದೇಶದಲ್ಲಿ ನೋಡಿದರೂ ಹಿರಿಯರು ಹೇಗೆ ಪವರ್ತಿಸಬೇಕೆಂಬುದರ  ಬಗ್ಗೆ ಸಾಕಷ್ಟು ಪುಸ್ತಕಗಳು ಸಿಕುತ್ತವೆ.ಇಂಟರ್ ನೆಟ್ ನಲ್ಲಿ ಸೆಕ್ಸ್ ನಂತರ ಅತ್ಯಧಿಕ ವೆಬ್ಸೈಟ್ ಗಳು ಪೇರೆಂಟ್ಸ್   ಮಕ್ಕಳನ್ನು ಬೆಳೆಸುವುದು ಒಂದು ಚಾಲೆಂಜ್ ಆಗಿದೆ.ಅದರ ಜೊತೆಗೆ ತಾಯಿ ತಂದೆಯರಿಬ್ಬರೂ ಉದ್ಯೋಗಿಗಳಾಗಿ, ಮನೆಯಲ್ಲಿ ಬೇರೆ ಅದರ ಜೊತೆಗೆ ತಾಯಿ ತಂದೆಯರಿಬ್ಬರೂ ಉದ್ಯೋಗಿಗಳಾಗಿ, ಮನೆಯಲ್ಲಿ ಬೇರೆ ಹಿರಿಯರಾರೂ ಇಲ್ಲದಿರುವುದರಿಂದ ಮತ್ತಷ್ಟು ಸಮಸ್ಯೆಗಳು ಜೊತೆಯಾಗುತ್ತಿವೆ.ಆದ್ದರಿಂದ ತಾಯಿ ತಂದೆಯರು ತಮ್ಮ ಮಕ್ಕಳೊಂದಿಗೆ ಸ್ನೇಹದಿಂದರುತ್ತಾ ಎಲ್ಲಾ ವಿಷಯಗಳನ್ನು ಚರ್ಚಿಸುತ್ತಾ, ಈ ಸೀರಿಯಸ್ ಜಾಬ್ ಅನ್ನು ಜಾಲಿಯಾಗಿ, ಸಂತೋಷವಾಗಿ ಪೂರ್ಣಗೊಳಿಸಿದರೆ ತಮ್ಮ ಕರ್ತವ್ಯವನ್ನು ಸಮರ್ಥವಾಗಿ ನಿರ್ವಹಿಸಿದ ಹಾಗೆಯೇ.

Join Our Whatsapp Group

 ಮಕ್ಕಳು ಮತ್ತು ದೇವರು ಸದಾ ಒಳ್ಳೆಯವರೇ !

   “ಎಲ್ಲ ಮಕ್ಕಳು ಜನ್ಮಂತಃ ಒಳ್ಳೆಯವರೇ,ಬಂದಿರುವ ಬಿಕಟ್ಟುಗಳೆಲ್ಲಾ ಹಿರಿಯರಿಗೇ” ಎನ್ನುತ್ತಾರೆ ಮಕ್ಕಳ ವಿದ್ಯಾ ಬೋಧನೆಯಲ್ಲಿ ಅಪಾರ ನೈಪುಣ್ಯತೆ ಪಡೆದ ಮಹಿಳೆ ಡಾ||ಮಾಂಟಿಸ್ಸೋರಿ.

    ತಾಯಿ, ತಂದೆಯವರ ನಡವಳಿಕೆ,ಪ್ರವರ್ತನೆ,ಹಾಗೂ ವಿದ್ಯಾಬುದಿಗಳನ್ನು ಕಲಿಸುವ ಗುರುಗಳ ವೈಖರಿಗನುಸಾರವಾಗಿ ಮಕ್ಕಳು ಒಳ್ಳೆಯವರಾಗಿಯೋ ಕೆಟ್ಟವರಾಗಿಯೋ ವೇದಾವಿಗಳಾಗಿಯೂ ಅಥವಾ ಮೂರ್ಖರಾಗಿಯೋ ಬದಲಾಗುತ್ತಾರೆ.

      ಇತ್ತೀಚೆಗೆ ಕೌನ್ಸಲಿಂಗ್  ಸೈಕಾಲಜಿಸ್ಟ್ ಗಳ ತಂಡವೂಂದು ಕೆಲವು ಬೀದಿ ಮಕ್ಕಳ ಮನೆಗಳನ್ನು ಸಂದರ್ಶಿಸಿದಾಗ ಅಚ್ಚರಿ ಮೂಡಿಸುವಂತಹ ವಿಷಯಗಳು ಹೊರಬಿದ್ದವು  ಎಂದು ಸದರಿ ಸಂಸ್ಥೆಯ ಅಧಿಕಾರಿಯೊಬ್ಬರು ತಿಳಿಸಿದರು.

     ಬೀದಿ ಪಾಲಾದ ಮಕ್ಕಳ ಪೈಕಿ  ಅನಾಥರಾಗಿ ಆಶ್ರಯ ಪಡೆ ದವರೆಲ್ಲಾ ನಿಜವಾಗಿಯೂ ಅನಾಥರಲ್ಲ. ಶೇಕಡ 90ರಷ್ಟು ಮಂದಿಗೆ ತಾಯಿ ತಂದೆಯವರಿದ್ದಾರೆ. ಶೇಕಡ ಐದರಿಂದ ಶೇಕಡ ಏಡರವರೆಗಿನ ಕೆಲವು ಮಕ್ಕಳು ಅತ್ಯಂತ ಶ್ರೀಮಂತರ ಮಕ್ಕಳು.ತಾಯಿ ತಂದೆಯರ ಮೇಲೆ ಮುನಿಸಿಕೊಂಡವರು ವಿದ್ಯಾಭ್ಯಾಸವೆಂದರೆ ಇಷ್ಟವಿಲ್ಲದವರು ಹಾಗೂ ಶಾಲಾ ವಾತಾವರಣದ ಬಗ್ಗೆ ಭಯ ಇರುವವರು ಅವರಲ್ಲಿದ್ದಾರೆ.

      ಪ್ರತಿನಿತ್ಯ ತಾಯಿ ತಂದೆಯರ ಜಗಳ,ಹೊಡೆದಾಟಗಳು ಅವರುಗಳ ದುರಭ್ಯಾಸಗಳು, ಸವತಿ ತಾಯನ್ನು ಆಪಾರ್ಥ ಮಾಡಿಕೊಂಡು ಮನೆಯ ತೊರೆದು ಓಡಿಹೋದವರು ಶೇಕಡ ಐದುರಷ್ಟು ಮಂದಿಯಿದ್ದಾರೆ.ಬಡತನ,ಹಸಿವು ಸಹಿಸಲಾಗದೆ ಮನೆ ಬಿಟ್ಟು ಹೋದವರು ಶೇಕಡ 25 ರಷ್ಟು ಮಂದಿಯಿದ್ದಾರೆ. ಇವರ ಪೈಕಿ ಕೆಲವರು ಅಪರಾಧ ಪ್ರವೃತ್ತಿಯನ್ನು ಅಭ್ಯಾಸ ಮಾಡಿಕೊಂಡಿದ್ದಾರೆ. ಶಿಕ್ಷಕ ಶಿಕ್ಷಕಿಯರ ದೂರು, ಅಕ್ಕ-ಪಕ್ಕದವರ ದೂರುಗಳನ್ನು ಕೇಳಿ ಮಕ್ಕಳನ್ನು ತೀವ್ರವಾಗಿ ದಂಡಿಸುವ ತಾಯಿ ತಂದೆಯರ ಭಯದಿಂದಾಗಿ ಓಡಿಗ ಹೋದವರಿದ್ದಾರೆ.ಗುರುಗಳ ದೂರನ್ನು ಮೂಢತನದಿಂದ ನಂಬಿ ತಮ್ಮ ಮಕ್ಕಳನ್ನು ಅವಮಾನಿಸಿದ  ತಾಯಿ  ತಂದೆಯರು ಎಲ್ಲಾ ಕಾಲಗಳಲ್ಲಿ ಕಾಣಿಸುತ್ತಾರೆ. ಅವರುಗಳ ಪೈಕಿ ಅಂಗುಲಿಮಾಲನ ಕಥೆ ಮುಖ್ಯವಾದುದ್ದು.