ಮನೆ ರಾಜ್ಯ ಶ್ರೀ ಚಾಮರಾಜೇಶ್ವರಸ್ವಾಮಿ ದೇವಸ್ಥಾನದ ಕುಂಭಾಭಿಷೇಕ ಮಹೋತ್ಸವಕ್ಕೆ  ಭರದ ಸಿದ್ದತೆ

ಶ್ರೀ ಚಾಮರಾಜೇಶ್ವರಸ್ವಾಮಿ ದೇವಸ್ಥಾನದ ಕುಂಭಾಭಿಷೇಕ ಮಹೋತ್ಸವಕ್ಕೆ  ಭರದ ಸಿದ್ದತೆ

0

ಚಾಮರಾಜನಗರ (Chamarajanagara): ಐತಿಹಾಸಿಕ ಶ್ರೀ ಕೆಂಪನಂಜಾಂಬ ಸಮೇತ ಶ್ರೀ ಚಾಮರಾಜೇಶ್ವರಸ್ವಾಮಿ ದೇವಾಲಯದ ರಾಜಗೋಪುರ, ವಿಮಾನಗೋಪುರಗಳ ಕಳಶ, ಕುಂಭಾಭಿಷೇಕ ಮಹೋತ್ಸವವು ಜೂನ್ 4 ರಿಂದ 6ರವರೆಗೆ ನಡೆಯಲಿದ್ದು, ಅಂತಿಮ ಹಂತದ ಸಿದ್ದತಾ ಕಾರ್ಯ ಭರದಿಂದ ಸಾಗಿದೆ.

ದೇವಾಲಯ, ಗೋಪುರಗಳಿಗೆ ಬಣ್ಣ ಬಳಿಯುವ ಕಾರ್ಯ ಆರಂಭವಾಗಿದೆ. ಹೊಸ ಕಳಶಗಳೂ ಬಂದಿವೆ. ಕುಂಭಾಭಿಷೇಕದ ದಿನ ರಾಜಗೋಪುರದ ಮೇಲೆ ನಡೆಯಲಿರುವ ಕಳಶ ಅಭಿಷೇಕ ಕಾರ್ಯಕ್ರಮಕ್ಕಾಗಿ ಗೋಪುರಕ್ಕೆ ಏಣಿ ಕಟ್ಟುವ ಕಾರ್ಯವೂ ಬಹುತೇಕ ಮುಗಿದಿದೆ.

ದೇವಾಲಯದ ಆವರಣದಲ್ಲಿ ಹೋಮ ಕುಂಡಗಳ ನಿರ್ಮಾಣ ಸೇರಿದಂತೆ ಧಾರ್ಮಿಕ ಕಾರ್ಯಕ್ರಮಗಳಿಗೆ ಅಗತ್ಯವಿರುವ ಸಿದ್ಧತೆಗಳನ್ನು ಮಾಡಲಾಗುತ್ತಿದೆ.

ಮಹೋತ್ಸವದ ಎಲ್ಲಾ ಧಾರ್ಮಿಕ ಕಾರ್ಯಗಳನ್ನು ನಂಜನಗೂಡಿನ ಶ್ರೀಕಂಠೇಶ್ವರ ದೇವಾಲಯದ ಆಗಮಿಕ ಜೆ.ನಾಗಚಂದ್ರ ದೀಕ್ಷಿತ್‌ ಅವರ ನೇತೃತ್ವದಲ್ಲಿ  ನಡೆದಯಲಿದೆ.

ಜೂನ್  4ರಂದು ಪಂಚಮಿ ಪುಷ್ಯ ನಕ್ಷತ್ರ ಸಂಜೆ 5.30ಕ್ಕೆ ಮೂಲ ದೇವತಾ ಪ್ರಾರ್ಥನೆ, ಗಣಪತಿ ಪೂಜೆ, ಪುಣ್ಯಾಹ, ಖುತ್ವಿಕ್ ವರುಣ ರಾಕ್ಷೋಘ್ನ ಪೂಜಾ ಹೋಮ ಮತ್ತು ವಾಸ್ತು ಪೂಜೆ ಹೋಮ, ಪರಿಯಘ್ನಕರಣ, ಅಂಕುರಾರ್ಪಣೆ ನಡೆಯಲಿದೆ.

ಜೂನ್ 5ರಂದು ಷಷ್ಠಿ ಆಶ್ಲೇಷ ನಕ್ಷತ್ರ ಬೆಳಿಗ್ಗೆ 8.30ಕ್ಕೆ ಬಿಂಬಶುದ್ಧಿ, ನೂತನ ವಿಗ್ರಹಗಳ ನೇತ್ರೋನ್ಮಿಲನ, ಜಲಾಧಿವಾಸ, ಕಳಶ ಸ್ಥಾಪನೆ, ಅಗ್ನಿ ಪ್ರತಿಷ್ಠಾಪನೆ, ಮೂಲ ಮಂತ್ರ ಹೋಮ, ರಾತ್ರಿ ದಾನ್ಯಾಧಿವಾಸ, ಶಯ್ಯಾಧಿವಾಸ ಅಧಿವಾಸ ಹೋಮಗಳು, ಸ್ಪರ್ಶ ಹೋಮ, ಪೂರ್ವಕ, ಅಷ್ಟಬಂಧನ ಜರುಗಲಿವೆ.

ಜೂನ್ 6ರಂದು ಸಪ್ತಮಿ ಮಖಾ ನಕ್ಷತ್ರ ಪ್ರಾತಃಕಾಲ ಬೆಳಿಗ್ಗೆ 6.30ಕ್ಕೆ ಪುಣ್ಯಾಹ, ಕಳಶಾರ್ಚನೆ, ಪ್ರಾಣ ಪ್ರತಿಷ್ಠೆ, ನಾಡಿಸಂಧಾನ, ತತ್ವನ್ಯಾಸ, ಕಳಾನ್ಯಾಸ, ಕಳಾಹೋಮ ಪೂರ್ವಕ ಕಳಶ ಆವಾಹನೆ, ಪೂರ್ಣಾಹುತಿ ಕುಂಭ ಉದ್ವಾಸನೆ ನಡೆಯಲಿದೆ.

ಬೆಳಿಗ್ಗೆ 10ರಿಂದ 10.30ರೊಳಗೆ ಸಲ್ಲುವ ಶುಭ ಕಟಕ ಲಗ್ನದಲ್ಲಿ ಕುಂಭಾಭಿಷೇಕ ಮಹಾಮಂಗಳಾರತಿ ನಂತರ ತೀರ್ಥ ಪ್ರಸಾದ ವಿನಿಯೋಗ ನಡೆಯಲಿದೆ.

ಕುಂಭಾಭಿಷೇಕದೇವಾಲಯದಲ್ಲಿ ಮೂರು ದಿನಗಳ ಕಾಲ ಶ್ರೀಚಂಡಿಕೇಶ್ವರಸ್ವಾಮಿ ವಿಗ್ರಹ ಮತ್ತು ಭಕ್ತ ವಿಗ್ರಹಗಳ ಪ್ರತಿಷ್ಠೆ, ಕುಂಭಾಭಿಷೇಕ ಮಹೋತ್ಸವ ಹಾಗೂ ನೂತನ ರಥ ಪ್ರತಿಷ್ಠೆ ಕಾರ್ಯಕ್ರಮಗಳು ಜರುಗಲಿವೆ. ನಡೆಯಲಿವೆ.

ಹಿಂದಿನ ಲೇಖನಹರ್ಷ ಹತ್ಯೆ ಪ್ರಕರಣ: 10 ನೇ ಆರೋಪಿಯ ಜಾಮೀನು ಅರ್ಜಿ ವಜಾ
ಮುಂದಿನ ಲೇಖನಹಾಸನ ನಗರಸಭೆ ಸದಸ್ಯನ ಹತ್ಯೆ ಪ್ರಕರಣ: ಪತ್ನಿಯಿಂದ ದೂರು ದಾಖಲು