ಮನೆ ಯೋಗಾಸನ ಉರ್ಧ್ವಮುಖ ಪಶ್ಚಿಮೋತ್ತಾನಾಸನ

ಉರ್ಧ್ವಮುಖ ಪಶ್ಚಿಮೋತ್ತಾನಾಸನ

0

‘ಉರ್ಧ್ವ ಮುಖ’ವೆಂದರೆ ಮುಖವನ್ನು ಮೇಲೆತ್ತಿರುವುದು ‘ಪಶ್ಚಿಮೋತ್ತಾನಾಸನ’ವೆಂದರೆ ದೆಹದ ಹಿಂಬದಿಯನ್ನೆಲ್ಲ ಚೆನ್ನಾಗಿ ಹಿಗ್ಗಿಸಿಡುವುದು.

Join Our Whatsapp Group

1. ಮೊದಲು ನೆಲದ ಮೇಲೆ ಕುಳಿತು, ಮುಂಗಡೆಗೆ ಕಾಲುಗಳನ್ನು ಚಾಚಿಡಬೇಕು.

2. ಬಳಿಕ ಮಂಡಿಗಳನ್ನು ಭಾಗಿಸಿ, ಪಾದಗಳೆರಡರನ್ನು ಆಯಾ ಪೃಷ್ಠಗಳ ಬಳಿ ತಂದಿರಬೇಕು.

3. ಆಮೇಲೆ ಕಾಲ್ಬೆರಳುಗಳನ್ನು ಕೈಗಳಿಂದ ಹಿಡಿದುಕೊಂಡು ಉಸಿರನ್ನು ಹೊರ ಹೋಗಿಸಿ, ಕಾಲುಗಳನ್ನು ಆಕಾಶದ ಕಡೆಗೆ ಅಂದರೆ ಮೇಲ್ದಿಸೆಗೆ ಎತ್ತಿ, ಮಂಡಿಗಳಲ್ಲಿ ಅವನ್ನು ನೇರವಾಗಿಸಿ ಮೊಣಕಾಲ ಚಿಪ್ಪುಗಳನ್ನು ತೊಡೆಗಳ ಸೇಳೆದಿಟ್ಟು ಬೆನ್ನು ಮೂಳೆಯನ್ನು ಸಾಧ್ಯವಾದಷ್ಟೂ ನಿಮ್ಮ ಗೊಳಿಸಿ ಪೃಷ್ಠಗಳ ಮೇಲೆ ಸಮತೋಲನದಲ್ಲಿ ನಿಲ್ಲಬೇಕು. ಇಂಥ ಆಸನದ ಭಂಗಿಯ ಹೆಸರು.