ತುಮಕೂರು: ಪ್ರತಿಭಟನೆ, ಬಂದ್ ಎಲ್ಲವನ್ನೂ ಕಾನೂನು ಚೌಕಟ್ಟಿನಲ್ಲಿ ಇರಲೇಬೇಕು. ಬಂದ್ ಮಾಡಲು ಅನುಮತಿ ತೆಗೆದುಕೊಳ್ಳಬೇಕು. ಇಲ್ಲದಿದ್ದರೆ ಅದು ಕಾನೂನಿಗೆ ವಿರೋಧವಾಗುತ್ತದೆ ಎಂದು ಗೃಹ ಸಚಿವ ಜಿ.ಪರಮೇಶ್ವರ್ ತಿಳಿಸಿದರು.
ತುಮಕೂರಿನಲ್ಲಿ ಕಾವೇರಿ ನೀರಿನ ವಿವಾದ ಕುರಿತು ಮಾತನಾಡಿ, ಸಾರ್ವಜನಿಕ ಹಾಗೂ ಖಾಸಗಿ ಆಸ್ತಿಗಳು ನಷ್ಟವಾಗಬಾರದು. ಕಾನೂನು ವಿರುದ್ಧವಾದ ಕಾನೂನು ಬಾಹಿರ ಕೆಲಸ ಮಾಡಬಾರದು. ಶಾಂತಿಯುತವಾಗಿ ಪ್ರತಿಭಟನೆ ಮಾಡಿದ್ರೆ ಅನುಮತಿ ಕೊಡಬಹುದು ಎಂದರು.
ಸರ್ಕಾರದ ಜೊತೆಗೆ ಸಹಕಾರ ಮಾಡಿ. ನಾವು ಎಲ್ಲಾ ರೀತಿ ಕ್ರಮ ತೆಗೆದುಕೊಳ್ಳುತ್ತಿದ್ದೇವೆ. ಸಿಡಬ್ಲ್ಯೂಎಂಎ ಮುಂದೆ ಎಲ್ಲಾವನ್ನು ಲೀಗಲ್ ಟೀಂ ಹೇಳುತ್ತಿದ್ದೆ. ನಾವು ಯಾವುದನ್ನು ಮುಚ್ಚಿಟ್ಟಿಲ್ಲ. ನೀರಾವರಿ ಸಚಿವರು, ಸಿಎಂ, ಕಾನೂನು ತಂಡ ಎಲ್ಲಾವನ್ನು ಮುಕ್ತವಾಗಿ ಹೇಳುತ್ತಿದ್ದಾರೆ. ಸರ್ವ ಪಕ್ಷ ಸಭೆ ಕರೆದು ವಿವರಣೆ ಮಾಡಿದ್ದೇವೆ ಎಂದರು.
ಸರ್ಕಾರಕ್ಕೆ ಜವಬ್ದಾರಿಯಿದೆ. ಸುಮ್ಮನೆ ನೀರು ಬಿಡಲ್ಲ. 20 ಟಿಎಂಸಿ ನೀರು ಕೆ.ಆರ್.ಎಸ್ ನಲ್ಲಿದೆ. 10 ಟಿಎಂಸಿ ಡೆಡ್ ಸ್ಟೋರೇಜ್ ಇರುತ್ತದೆ. 10 ಟಿಎಂಸಿ ನೀರನ್ನು ಬೆಂಗಳೂರಿಗೆ ಕುಡಿಯಲು ಕೊಟ್ಟು, ಅಲ್ಲಿ ಬೆಳೆಗೆ ನೀರು ಕೊಡುವುದು ಕಷ್ಟ. ಇದೆಲ್ಲಾವನ್ನು ವಿವರಣೆ ಮಾಡಿದ್ದೇವೆ. ಸಿಡಬ್ಲ್ಯೂ ಎಂಎ ನವರು 5 ಸಾವಿರ ಕ್ಯೂಸೆಕ್ ನೀಡ ಬೀಡಬೇಕು ಅಂತ ಹೇಳಿದ್ದಾರೆ. ನಾವು ಅಪೀಲ್ ಹಾಕಿದ್ದೇವೆ, 26ಕ್ಕೆ ಕೇಸ್ ಬರುತ್ತದೆ, ಏನು ತೀರ್ಮಾನ ಆಗುತ್ತೆ ಕಾದು ನೋಡೋಣ ಎಂದರು.
ನಾವು ಅವರು ಹೇಳಿದ್ದಂತೆ 5 ಸಾವಿರ ಕ್ಯೂಸೆಕ್ ಬಿಟ್ಟಿಲ್ಲ. ನ್ಯಾಚೂರಿಲಿ 2 ಸಾವಿರ ಕ್ಯೂಸೆಕ್ ಹೊಗುತ್ತದೆ. ಅದನ್ನು ಬಿಟ್ಟು ಹೆಚ್ಚು ನೀರು ಬಿಟ್ಟಿಲ್ಲ. ಶಾಂತಿಯುತವಾಗಿ ಪ್ರತಿಭಟನೆ ಮಾಡಿದ್ದಾರೆ. ಎಲ್ಲಾರಿಗೂ ಧನ್ಯವಾದ ಹೇಳುತ್ತೇನೆ. ಎಲ್ಲಾ ಪಕ್ಷದ ಸಹಕಾರನ್ನು ನಮ್ಮ ಪಕ್ಷ ಬಯಸುತ್ತದೆ ಎಂದು ತಿಳಿಸಿದರು.
ಪಾದಯಾತ್ರೆ ಮಾಡಿ ಸರ್ಕಾರ ಅಧಿಕಾರಕ್ಕೆ ಬಂದು ರೈತರಿಗೆ ಚಿಪ್ಪು ಕೊಟ್ಟಿದೆ ಎಂಬ ಸಿ.ಟಿ ರವಿ ಹೇಳಿಕೆಗೆ ಪ್ರತಿಕ್ರಿಯಿಸಿ, ಅವರ ಹೇಳಿಕೆಗೆ ನಾವು ಪ್ರತಿಕ್ರಿಯೆ ಮಾಡಬೇಕಿಲ್ಲ. ಜವಬ್ದಾರಿಯುತ್ತವಾದ ಮಾತನಾಡಿದ್ರೆ ಪ್ರತಿಕ್ರಿಯೆ ಕೊಡಬಹುದು. ನಮ್ಮ ಬಳಿ ಒಳ್ಳೆಯ ವಕೀಲರ ತಂಡವಿದೆ. ಬಿಜೆಪಿ ಸರ್ಕಾರ ಇದ್ದಾಗಲೂ ಇದೇ ತಂಡವಿತ್ತು, ನಾವು ಬದಲಾವಣೆ ಮಾಡಿಲ್ಲ. ಈ ಕಾನೂನು ತಂಡ ಬಹಳ ಕಾಲದಿಂದಲ್ಲೂ ಇದೆ. ತಮಿಳುನಾಡಿನವರು 24 ಸಾವಿರ ಕ್ಯೂಸೆಕ್ ಕೇಳಿದ್ರು. ಕೋರ್ಟ್ 10 ಸಾವಿರ ಕೊಡಲು ತೀರ್ಮಾನ ಮಾಡಿತ್ತು. ಕೊನೆಯದಾಗಿ ನಮ್ಮ ಮನವಿ ಕೇಳಿ 5 ಸಾವಿರ ಕ್ಯೂಸೆಕ್ ಬಿಡಲು ಹೇಳಿದೆ. ನಮಗೂ ಒಂದಿಷ್ಟು ಅನುಕೂಲವಾಗಿದೆ. ನಮ್ಮ ಪರವಾಗಿಯೂ ತೀರ್ಮಾನಗಳಾಗಿವೆ. ಪರಿಸ್ಥಿತಿ ಆಗಿದೆ, ಈ ಬಾರಿ ಮಳೆಯಾಗಿಲ್ಲ. ಇಡೀ ರಾಜ್ಯ ಬರದ ಛಾಯೇಯಲ್ಲಿದೆ. ಈ ನಿಟ್ಟಿನಲ್ಲೂ ಸರ್ಕಾರ ಕೆಲಸ ಮಾಡುತ್ತಿದೆ ಎಂದು ಹೇಳಿದರು.
ಮೇಕೆದಾಟುವಿನಲ್ಲಿ ಡ್ಯಾಂ ಕಟ್ಟಲು ಕೋರ್ಟ್ ಗೆ ಅಪೀಲ್ ಮಾಡಿದ್ದೇವೆ. ಸುಪ್ರೀಂಕೋರ್ಟ್ ಪಿಟಿಷಿನ್ ನಲ್ಲಿ ಇದನ್ನು ಸೇರಿಸುತ್ತೇವೆ. 172 ಟಿಎಂಸಿ ನೀರು ಕೊಟ್ಟ ಮೇಲೆ ಅವರ್ಯಾಕೆ ಡ್ಯಾಂ ಕಟ್ಟಲು ಪ್ರಶ್ನೆ ಮಾಡಬೇಕು. ನಾವು ಡ್ಯಾಂ ಕಟ್ಟೇ ಕಟ್ಟುತ್ತೇವೆ. ಎಲ್ಲಾ ಸಂಸದರನ್ನು ಕರೆಸಿದ್ದೀವಿ, ಅವರೆಲ್ಲಾರು ನಿಮಗೆ ಬೆಂಬಲ ಕೊಡುತ್ತೇವೆ ಎಂದಿದ್ದಾರೆ. ಹೊರಗೆ ಬಂದು ಒಬ್ಬರು ಒಂದೊಂದು ಹೇಳಿಕೆ ಕೊಡ್ತಾರೆ ಎಂದರು.
ಬಿಜೆಪಿ- ಜೆಡಿಎಸ್ ಮೈತ್ರಿ ವಿಚಾರವಾಗಿ ಮಾತನಾಡಿ, ಇದರಿಂದ ಕಾಂಗ್ರೆಸ್ ಗೆ ನಷ್ಟನೂ ಇಲ್ಲ ಲಾಭನೂ ಇಲ್ಲ. ಕಳೆದ ಲೋಕಸಭೆ ಚುನಾವಣೆಯಲ್ಲಿ ಅವರೊಂದಿಗೆ ಮೈತ್ರಿ ಮಾಡೊಕೊಂಡಿದ್ವಿ. ಅದರ ಫಲಿತಾಂಶ ಏನಿದೆ ಅಂತ ಗೊತ್ತಲ್ಲ. ನಂತರ ಅವರಿಗೂ ಗೊತ್ತಾಗುತ್ತದೆ. ಮೈತ್ರಿಯನ್ನು ಜನರು ಒಪ್ಪಲ್ಲ. ಕಳೆದ ಚುನಾವಣೆಯಲ್ಲಿ ದೇವೇಗೌಡರಿಗೆ ಕಷ್ಟ ಬಿದ್ದು ಕೆಲಸ ಮಾಡಿದ್ದಾರೆ.
ಮಾಜಿ ಶಾಸಕ ಗೌರಿಶಂಕರ್ ನನ್ನ ಭೇಟಿ ಮಾಡಿದ್ರು. ರಾಜಕೀಯ ಚರ್ಚೆ ಮಾಡಿಲ್ಲ ಎಂದರು.
ವಿಜಯನಗರ ವಾರ್ಡ್ ನಂಬರ್ 20ರಲ್ಲಿ ನಗರ ಪಾಲಿಕೆ ವತಿಯಿಂದ ಸವಾಲ್ ಟಿವಿ ಸಹಯೋಗದೊಂದಿಗೆ "ಸ್ವಚ್ಛತಾ ಶ್ರಮದಾನ"
ನಗರ ಪಾಲಿಕೆ ವತಿಯಿಂದ ಸವಾಲ್ ಟಿವಿ ಸಹಯೋಗದೊಂದಿಗೆ "ಸ್ವಚ್ಛತಾ ಶ್ರಮದಾನ"
ಮಾನ್ಯ ಶ್ರೀ ಪ್ರದೀಪ್ ಕುಮಾರ್ ರವರ ಹುಟ್ಟು ಹಬ್ಬದ ಆಚರಣೆ
ಊರು ಬಿಟ್ಟು ದೂರದ ಊರಿಗೆ ಹೋಗಿರುವ ಮಕ್ಕಳು ತಂದೆ- ತಾಯಿಯ ನೋವನ್ನ ಅರ್ಥ ಮಾಡಿಕೊಳ್ಳಬೇಕು
ಸವಾಲ್ ಪತ್ರಿಕೆಯ ಸಂಪಾದಕರು HRAC ಸ್ಥಾಪಕರು ಆದ ಪ್ರದೀಪ್ ಕುಮಾರ್ ರವರಿಗೆ ಹುಟ್ಟು ಹಬ್ಬದ ಶುಭಾಶಯಗಳು 16-06-2023
ಅದ್ಬುತ ಮಾತುಗಳು ದಯವಿಟ್ಟು ಎಲ್ಲ ತಂದೆ ತಾಯಿ ಮಕ್ಕಳು ಇದನ್ನ ನೋಡಲೇ ಬೇಕು ..
Important: No API Key Entered.
Many features are not available without adding an API Key. Please go to the YouTube Feed settings page to add an API key after following these instructions.