ಬಹಳ ವಿಶೇಷವಾದಂತಹ ಪವಾಡಗಳು ನಡೆಯುವ ಈ ಕ್ಷೇತ್ರ ಮಂಚೇನಹಳ್ಳಿ ಶ್ರೀ ಶನೇಶ್ವರ ಸ್ವಾಮಿ ದೇವಾಲಯ ಇಲ್ಲಿ ಬಸಪ್ಪನವರೆ. ನಡೆದಾಡುವ ದೇವರೆನಿಸಿದ್ದಾರೆ.ಅವರ ಮುಖಾಂತರ ಇಲ್ಲಿ ಬರುವ ಭಕ್ತಾದಿಗಳು ಅವರ ಕುಂದು ಕೊರತೆಗಳನ್ನು ಬಸಪ್ಪನಲ್ಲಿ ಹೇಳಿಕೊಳ್ಳುತ್ತಾ ಬಸಪ್ಪನಲ್ಲಿ ಇತರ ಆಗಿರುತ್ತಾರೆ ಈ ಕ್ಷೇತ್ರ ಪಾಲಕ ಶ್ರೀ ಪವಾಡ ಬಸಪ್ಪನವರ ಮುಖಾಂತರ ಅನೇಕ ಪವಾಡಗಳು ನಡೆಯುತ್ತವೆ ಭಕ್ತಾದಿಗಳಿಗೆ ಕಷ್ಟ ಬಂದಾಗ ಸ್ವಾಮಿ ಬಸಪ್ಪನವರು ಅವರ ಬಲಪಾದ ಕೊಡುವುದರ ಮತ್ತು ದಾಟುವುದರ ಮುಖಾಂತರ ಅನುಗ್ರಹಿಸುತ್ತಾರೆ.
ಅವಿವಾಹಿತರಿಗೆ ಲಗ್ನಫಲ ಕೊಡುತ್ತಿದ್ದಾರೆ. ಭಕ್ತಾದಿಗಳು ಇಲ್ಲಿಗೆ ಮೂರು ಬಾರಿ ಬಂದು ಹೋದರೆ ಅವರ ಕಷ್ಟ ಕಾರ್ಪಣ್ಯಗಳು ದೂರವಾಗುತ್ತದೆ.ಇದು ಶನೇಶ್ವರ ಹಾಗೂ ಬಸಪ್ಪನವರ ಪುಣ್ಯಕ್ಷೇತ್ರ. ಪ್ರತಿ ಶನಿವಾರ ಅಮಾವಾಸ್ಯೆ ಹುಣ್ಣಿಮೆಯೆಂದು ವಿಶೇಷವಾದಂತಹ ಪೂಜೆ ನಡೆಯುತ್ತದೆ. ಬಸಪ್ಪನವರ ಹೆಸರಿನಲ್ಲಿ ದಾಸೋಹಗಳು ಸಹ ನಡೆಯುತ್ತದೆ.
ಹೊರರಾಜ್ಯ ಹೊರದೇಶಗಳಿಂದ ಕೂಡ ಬಸಪ್ಪನವರ ದರ್ಶನಕ್ಕಾಗಿ ಭಕ್ತಾದಿಗಳು ಆಗಮಿಸುತ್ತಾರೆ. ಬಸಪ್ಪನವರು ಮೂಲತಹಃ ಹುಟ್ಟಿರುವುದು ರಾಮನಗರ ಜಿಲ್ಲೆಯ ತೆಂಗಿನಕಲ್ಲು ಗ್ರಾಮ. ಭಕ್ತಾದಿಗಳ ಬೇಡಿಕೆಗಳನ್ನು ಪೂರೈಸುವ ಮೂಲಕ ಈ ಕ್ಷೇತ್ರದಲ್ಲಿ ಬಸಪ್ಪನವರು ಬಹಳ ಪ್ರಸಿದ್ಧಿ ಹೊಂದಿದ್ದಾರೆ ಭಕ್ತರ ಮನೆಮನೆಗಳಲ್ಲಿ ಬಸಪ್ಪನವರು ತಲುಪಿದ್ದಾರೆ.
ಭಕ್ತರ ಸಹಾಯದಿಂದ ಬಸಪ್ಪನವರ ಸಂಚಾರಕ್ಕಾಗಿ ಬಸ್ಸಿನ ವ್ಯವಸ್ಥೆ ಆಗಿದೆ ಭಕ್ತರ ಕಷ್ಟ ಕಳೆಯುವುದಕ್ಕೆ ಗ್ರಾಮಗಳಲ್ಲಿ ಮೆರವಣಿಗೆ ಉತ್ಸವ ದೇವಸ್ಥಾನ ಜಾಗ ಪರಿಶೀಲನೆಗಾಗಿ ಕ್ಷೇತ್ರದ ದೇವಸ್ಥಾನದ ಅರ್ಚಕರ ನೇಮಕ ಮಾಡುವುದಕ್ಕಾಗಲಿ ಬೋರ್ವೆಲ್ ಕಾರ್ಯಕಾರಿ ಯಾವುದೇ ರೀತಿಯ ಸಮಸ್ಯೆಗಳಿದ್ದರೂ ಬಸಪ್ಪನವರು ಭಕ್ತರು ಕರೆದುಕೊಂಡು ಹೋಗಿ ಅವರ ಕಾರ್ಯವನ್ನು ನೆರವೇರಿಸಿಕೊಳ್ಳುತ್ತಿದ್ದಾರೆ.