ಅನೇಕ ಹೆಂಗಸರಿಗೆ ಪೂರ್ವ ಜನ್ಮದ ಕರ್ಮಫಲದಿಂದ ಮಕ್ಕಳಾಗುವುದಿಲ್ಲ ಅವರನ್ನು ಬಂಜೆ ಎಂದು ಕರೆದು ಅವರು ಹಾಕಿದ ಊಟ ಮಾಡುವುದಿಲ್ಲ. ಅವರಿಗೆ ಪುತ್ರೋತ್ಸವವಾಗುವ ಔಷಧಿ ಈ ಮುಂದೆ ತಿಳಿಸಿರುತ್ತೆ.
1. ಉತ್ತರಣಿ ಹೂವಿನ ಅಗ್ರ ಭಾಗವನ್ನು ದಿನಕ್ಕೆ ಒಂದು ತೋಲದಂತೆ ಎಮ್ಮೆ ಮೊಸರಿನಲ್ಲಿ ಹರೆದು ಸೇವಿಸಿ ಹಾಲು ಅನ್ನ ಪಥ್ಯವಿದ್ದು ಔಷಧಿ ವೇಳೆ ಬೇರೆ ಮಲಗಿರಬೇಕು.
2. ಮುತ್ತುಗದ ಬೀಜದ ಕರಕನ್ನು ಮಜ್ಜಿಗೆಯಲ್ಲಿ ಪ್ರತಿದಿನ ಸೇವಿಸಬೇಕು.
3. ಕಿರುಕಸಾಲೆ ಬೇರೆನ್ನು ಶೇಖರಿಸಿ ಅದನ್ನು ಅಕ್ಕಿ ತೊಳೆದ ನೀರಿನಲ್ಲಿ ಅರೆದು ಕುಡಿಸಬೇಕು.
4. ಅಶ್ವತ್ಥ ಮರದ ಚಕ್ಕೆರಸವನ್ನು ತಯಾರು ಮಾಡಿ, ಸಕ್ಕರೆ ಬೆರೆಸಿ ಹಾಲಿನಲ್ಲಿ ಮುಟ್ಟಾದ ನಾಲ್ಕನೆ ದಿನದಂದು ಪ್ರಾರಂಭಿಸಬೇಕು.
5. ಬಾಗೇಹೂವನ್ನು ಹಾಲಿನಲ್ಲಿ ಅರಿದು,ತುಪ್ಪ ಬೆರೆಸಿ ಋತುಸ್ರಾವವಾದ ಐದನೆಯ ದಿನದಿಂದ ಸೇವಿಸಲು ಪ್ರಾರಂಭಿಸಬೇಕು.
6.ಲೋಧ್ರದ ಚಕ್ಕೆ, ತುಳಸಿಬೇರು, ನೆಲ್ಲಿಚೆಟ್ಟು ಆಲದ ಮುಗುಳು ರೇಣುಕೆ ಬೀಜಗಳನ್ನು ಸಮಾಂಸ ಹಾಲಿನಲ್ಲಿ ಅರೆದು, ಸೇವಿಸುತ್ತಾ ಬರಲು ಗರ್ಭಗುತಿ ಆಗುವಳು.
7. ಸಹದೇವಿ ಬೇರು, ತುಳಸಿ ಬೇರು, ಅಶ್ವತ್ಥದ ಮೊಗರು ಹಾಲಿನಲ್ಲಿ ಹರೆದು ಸಕ್ಕರೆ ಬೆರೆಸಿ ಸೇವಿಸಲು ಗರ್ಭವತಿಯಾಗುವಳು.
8. ಸೈಂಧವವನ್ನು ಹಾಲಿನಲ್ಲಿ ಅರೆದು ತುಪ್ಪದಲ್ಲಿ ಸೇವಿಸಲು ಗರ್ಭವತಿಯಾಗುವಳು.
9. ಕರಿ ಉದ್ದು ಬಿಳಿ ಸಾಸಿವೆ ಕೂಡಿಸಿ ಹಾಲಿನಲ್ಲಿ ಅರೆದು,ಶರ್ಕರ ಬೆರೆಸಿ,ಕೊಡಲು ಗರ್ಭವತಿಯಾಗುವಳು.
10. ಆಷಾಡಿ ಬೇರನ್ನು ಹಾಲಿನಲ್ಲಿ ಹರಿದು 48 ದಿನ ಸೇವಿಸಲು ಗರ್ಭವತಿಯಾಗುವಳು.
11. ಆಲದ ಹಾಲು ಹತ್ತಿ ಹಾಲು ಕಲ್ಲುಸಕ್ಕರೆಗಳನ್ನು ಆಗುತ್ತಾನೆ ಕರೆದ ನೂರೆ ಹಾಲಿನಲ್ಲಿ ಸೇವಿಸಲು ಬಂಜೆ ಪುತ್ರವತಿಯಾಗುವಳು.
12. ಪುತ್ರ ಜೀವಿ,ಅಗಲು ಶುಂಠಿ ನಾಗಕೇಸರಗಳನ್ನು ಪುಡಿ ಮಾಡಿ ಒಂದು ತೋಳದಲ್ಲಿ ತುಂಪ್ಪ ಬೆರೆಸಿ ಸೇವಿಸುವುದರಿಂದ ಅನುಕೂಲ ಆಗುವುದು
13. ಮಕ್ಕಳ ಫಲಕ್ಕೆ ಬದನೇಕಾಯಿ ಕೊರೆದು ಅದರಲ್ಲಿ ಸೈಂದವ ಲವಣ ಓಮ, ಹುರಿದ ಇಂಗು ಹಾಕಿ ಸೀಳು ಮಾಡಿ ಪುಟವಿಟ್ಟು ತೆಗೆದು ಮುಟ್ಟಾದ ನಾಲ್ಕನೇಯ ದಿನ ನೀರು ಹಾಕಿಕೊಂಡು ತಕ್ಷಣ ಜೇನು ತುಪ್ಪದಲ್ಲಿ ಅರ್ಧ ತೊಲ ಸೇವಿಸಿದರೆ ಪುತ್ರವತಿಯಾಗುವಳು.