ಮನೆ ಸಾಹಿತ್ಯ ಪ್ರೀತಿ ಹಿಂಸೆಯಾದರೆ

ಪ್ರೀತಿ ಹಿಂಸೆಯಾದರೆ

0

ಯಾರೋ ಬಂಧುಗಳ ಮನೆಗೆ ಅಥವಾ ಸ್ನೇಹಿತರ ಮನೆಗೆ ನಾವು ಹೋಗುತ್ತೇವೆ. ಅವರು ನಮಗೆ ರುಚಿರುಚಿಯಾದ ಆಹಾರವನ್ನು ಬಡಿಸುತ್ತಾರೆ. ನಾವು “ಸಾಕು” ಎಂದರೂ ಕೇಳದೆ ಮತ್ತಷ್ಟು ಬಡಿಸುತ್ತಾರೆ. ಯಾಕೆಂದರೆ ಹೆಚ್ಚು ತಿನ್ನುವಂತೆ ಮಾಡುವುದು ಪ್ರೀತಿಯನ್ನು ಸೂಚಿಸುವ ಒಂದು ವಿಧಾನವಾಗಿದೆ ಈ ವಿಧಾನದ ಹಿಂದೆ ಇರುವ ಪ್ರೀತಿಯನ್ನು ಖಂಡಿತವಾಗಿಯೂ ಆದರಿಸಬೇಕು.

Join Our Whatsapp Group

ಆದರೆ ಈ ವಿಧಾನವನ್ನು ಜೀರ್ಣಿಸಿಕೊಳ್ಳುವುದು ಅಷ್ಟು ಸುಲಭವಲ್ಲ.ತಿನ್ನುತ್ತಾ ತಿನ್ನುತ್ತಾ ಹೋದಂತೆ ಹೊಟ್ಟೆ ತುಂಬಿ ಬಂದು ವಾಂತಿಯಾಗುವ ಹಂತಕ್ಕೆ ಬಂದರೆ ಯಾಕಾಗಿ ತಾನಿವಾರ ಕೈಗೆ ಸಿಕ್ಕಿ ಹಾಕಿಕೊಂಡೆನೋ ಎಂದು ಅನಿಸಲು ಶುರುವಾಗುತ್ತದೆ. ಜೊತೆಗೆ ಟಾಯ್ಲೆಟ್ ಎಲ್ಲಿದೆ ಎಂದು ತೋರಿಸದೆ ಇದ್ದರೆ ಆಗ ಅತಿಥಿಯ ಪಜೀತಿಯನ್ನು ಹೇಳುವುದೇ ಬೇಡ.ನಮ್ಮ ಮೇಲೆ ತೋರಿಸಿರುವ ಪ್ರೀತಿಯನ್ನು ಅನುಭವಿಸುವ ಶಕ್ತಿಯೇ ನಮಗಿರುವುದಿಲ್ಲ. ಆದರೆ ಅವರು ಪ್ರೀತಿಯಿಂದಲೇ ನಮಗೆ ತಿಳಿಸುತ್ತಿರುತ್ತಾರಾದ್ದರಿಂದ ಸ್ಪಷ್ಟವಾಗಿ ನಿರಾಕರಿಸಲಿಕ್ಕೂ ಆಗುವುದಿಲ್ಲ.ಒಟ್ಟಿನಲ್ಲಿ ತೊಳಲಾಟ ಮತ್ತು ಸಂಕಟ.ಹಳೆಯ ಕಾಲದ ತಾಯಂದಿರಲ್ಲಿ ಇಂತಹ ಪ್ರವೃತ್ತಿ ಜಾಸ್ತಿ ಇರುತ್ತದೆ.ಮಕ್ಕಳು ತಿಂದಷ್ಟೂ ತಾಯಿಗೆ ಸಮಾಧಾನವಿಲ್ಲ. ಇವನು ಮೂರು ದೋಸೆ ಸಾಕು ಎಂದರೆ ತಾಯಿ ನಾಲ್ಕನೆಯ ದೋಸೆಯನ್ನು ಬಡಿಸದೆ ಇರುವುದಿಲ್ಲ. ಅದಕ್ಕೆ ಏನು ಮಾಡಬೇಕು ಗೊತ್ತಾ ನಮಗೆ ಮೂರು ದೊಸೆ ಸಾಕು ಎಂಬ ತೀರ್ಮಾನವಿದ್ದರೆ ಎರಡು ದೋಸೆಯನ್ನು ತಿನ್ನುತ್ತಲೇ ಸಾಕು ಎಂದು ಬಿಡಬೇಕು. ಆಗ ತಾಯಿ ಮೂರನಯ ದೋಸೆಯನ್ನು ಬಿಡಿಸುತ್ತಾರೆ ಮಗನಿಗೆ ಚೆನ್ನಾಗಿ ತಿನ್ನಿಸಿದೆ ಎಂಬ ಸಂತೋಷ ತಾಯಗೂ ಸಿಗುತ್ತದೆ. ನಮ್ಮ  ಹೊಟ್ಟೆಯನ್ನು ಆರೋಗ್ಯವಂತವಾಗಿ ಇಟ್ಟುಕೊಳ್ಳುವುದಕ್ಕೆ ನಮಗೂ ಸಾಧ್ಯವಾಗುತ್ತದೆ. ಆ ನಮ್ಮ ಮೇಲೆ ಇನ್ನೊಬ್ಬರಿಗಿರುವ ಪ್ರೀತಿಯು ಹಿಂಸೆಯಾಗಿ ನಮ್ಮನ್ನು ಕಾಡಿದಾಗ ನಮಗೆ ಎಷ್ಟು ಸಂಕಟವಾಗುತ್ತದೆಯೋ ಹಾಗೆಯೇ ನಾವು ಇನ್ನೊಬ್ಬರ ಮೇಲಿನ ಪ್ರೀತಿಯನ್ನು ಒತ್ತಡದ ಮೂಲಕ ಹೇರಿದಾಗ ಅವರಿಗೂ ಹಿಂಸೆಯಾಗುತ್ತದೆ ಎಂಬುದರ ಹರಿವು ನಮಗಿರಬೇಕು.

ಪ್ರೀತಿಯು ಹಿಂಸೆಯಾಗಿ ಕಾಡುವುದು ತಿನ್ನುವ ವಿಚಾರಕ್ಕೆ ಮಾತ್ರ ಸೀಮಿತವಲ್ಲ.ಯಾವುದೋ ಕೆಲಸದ ಮೇಲೆ ನಾವು ಎಲ್ಲಗಾದರೂ ಹೋಗಿದ್ದಾಗ ಅಲ್ಲೇ ಪಕ್ಕದಲ್ಲಿರುವ ನಮ್ಮ ಬಂಧುಗಳ ಮನೆಗೊಮ್ಮೆ ಹೋಗಿ ಬರೋಣ ಎಂದುಕೊಂಡು ಹೋಗಿಬಿಟ್ಟರೆ ಕೆಲವೊಮ್ಮೆ ಹಾಗಾಗಿ ಬಂದು ಬಿಟ್ಟೇನೋ ಎಂದು ಅನಿಸುವಂತಾಗುತ್ತದೆ. ನಾಲ್ಕು ದಿವಸ ಇರು ಅನ್ನುತ್ತಾರೆ. ನಾಳೆ ಹೋಗು ಅನ್ನುತ್ತಾರೆ.ಇಂದೇ ಹೊರಡದಿದ್ದರೆ  ನಮ್ಮ ಸಮಸ್ಯೆ ದೊಡ್ಡದಾಗಿಬಿಡುವಂತಹ ಜವಾಬ್ದಾರಿಯುತ ಕಾರ್ಯಗಳಿರುತ್ತವೆ. ಆಗ ಏನು ಮಾಡಬೇಕು ಅತ್ತ ದರಿ, ಇತ್ತ ಪುಲಿ,ಅಕಸ್ಮಾತ್ ಹೊರಟು ಬಿಟ್ಟರೆ ಅವರಿಗೆ ಸಿಟ್ಟು, ದುಃಖ ಎಲ್ಲ ಶುರುವಾಗುತ್ತದೆ. ಆ ಸಿಟ್ಟಿನ ಹಿಂದಿರುವುದು ಪ್ರೀತಿಯೇ. ಆದರೆ ಆ  ಪ್ರೀತಿಯನ್ನು ಸಹಿಸಿಕೊಳ್ಳುವುದು ತುಂಬಾ ಕಷ್ಟ.ಆದ್ದರಿಂದ ಯಾವತ್ತೂ ನಿಮ್ಮ ಪ್ರೀತಿಯನ್ನು ಹಿಂಸೆಯ ರೂಪದಲ್ಲಿ ಹೇರದಿರಿ.