ಮನೆ ಯೋಗಾಸನ ಆಕರ್ಣಧನುರಾದಸನ

ಆಕರ್ಣಧನುರಾದಸನ

0

     ‘ಕರ್ಣ ’ಎಂದರೆ ಕಿವಿ ’ಆ’ ಎಂಬ ಉಪಸರ್ಗಕ್ಕೆ ‘ಸಮೀಪ ’ಎಂದರ್ಥ ‘ಧನು ’ಎಂದರೆ ಬಿಲ್ಲು ಈ ಭಂಗಿಯಲ್ಲಿ ಬಿಲ್ಲಾಳು ಬಾಣನ್ನು ಹಿಡಿದಿಳೆಯುವಂತೆ ಎಡಪಾದವನ್ನು ಕಿವಿ ಮುಟ್ಟುವವರೆಗೂ ಎತ್ತಿ ಹಿಡಿಯುವುದು ಮತ್ತು ಇನ್ನೊಂದು ಕೈ ನೆಲದ ಮೇಲೆ ಉದ್ದಕ್ಕೂ ನೇರವಾಗಿ ಚಾಚಿದ ಬಲಪಾದದ ಹೆಬ್ಬೆರಳನ್ನು ಹಿಡಿದುಕೊಳ್ಳುವುದು.ಎರಡನೆಯ ಚಾಲನೆಯಲ್ಲಿ ಮೇಲೆತ್ತಿದ್ದ ಕಾಲನ್ನು ಕಂಬವಾಗುವಂತೆ ನೆಟ್ಟಗೆ ಮೇಲೆತ್ತಿ, ಬಾಗಿಸಿದ ಬಿಲ್ಲಿನಂತೆ ಉಂಗುಟ್ಟವನ್ನು ಬಿಡದೆ ಹಿಡಿದುಕೊಂಡೇ ಇರುವುದು. ಈ ಆಸನದ ಎರಡು ವಿಧವಾದ ಚಲನೆಗಳ ವಿವರಣೆಯನ್ನು ಈ ಕೆಳಗಿನ ಅಭ್ಯಾಸ ಕ್ರಮದಲ್ಲಿ ಕೊಟ್ಟಿದೆ.

 ಅಭ್ಯಾಸ ಕ್ರಮ

1. ಮೊದಲು ನೆಲದ ಮೇಲೆ ಕುಳಿತು ಮುಂಗಡಗೆ ಕಾಲುಗಳನ್ನು ನೇರವಾಗಿ ಚಾಚಿಡಬೇಕು.

2. ಬಳಿಕ ಬಲಪದದ  ಉಂಗುಟವನ್ನು ಬಲಗೈ ಹೆಬ್ಬೆರಳು ತೋರು ಬೆರಳು ಮತ್ತು ನಡುಬೆರಳುಗಳಿಗಿಂತ ಹಿಡಿದುಕೊಂಡು ಅದೇ ಬಗೆಯಲ್ಲಿ ಎಡಗಾಲಂಗುಟವನ್ನುಲು  ಎಡಗೈಯ ಬೆರಳುಗಳಿಂದ ಹಿಡಿದುಕೊಳ್ಳಬೇಕು.3.  ಆಮೇಲೆ ಉಸಿರನ್ನು ಹೊರ ಬಿಟ್ಟು ಎಡಮೊಣಕೈಯನ್ನು ಬಾಗಿಸಿ, ಮಂಡಿಯನ್ನು ಮಂಡಿಸಿ,ಎಡಪಾದವನ್ನು ಮೇಲೆತ್ತಿ ಒಂದುಸಲ ಉಸಿರಾಟ ನಡೆಸಬೇಕು ಆನಂತರ ಉಸಿರನ್ನು ಮತ್ತೆ ಹೊರ ಹೋಗಿಸಿ ಎಡಪದಗಳನ್ನು ಮೇಲೆ ಕ್ಕೆಳೆದು ಹಿಮ್ಮಡಿಯನ್ನು ಎಡ ಕಿವಿಯ ಸಮೀಪಕ್ಕೆ ತರಬೇಕು.ಅದೇ ಸಮಯದಲ್ಲಿ ಎಡ ತೋಳುಗಳನ್ನು ಭುಜದಿಂದ ಹಿಂದಕ್ಬೆಳೆದಿಡಬೇಕು ಆದರೆ ಬಲದ ದಂಗುಟದ ಮೇಲಿನ ಬಿಗಿತವನ್ನು ಸಡಿಲಿಸಬಾರದು.ಬಲಗಾಲನ್ನು ನೇರವಾಗಿ ಚಾಚಿಯೇ ಇಟ್ಟಿರಬೇಕಲ್ಲದೆ ಅದು ನ ನೆಲದ ಮೆಲೇ ಒರಗಿಸಿಯಯೇ ಇಡಬೇಕು.ಚಾಚಿದ ಮಂಡಿಯನ್ನು ಬಗ್ಗಿಸಬಾರದು  

4. ಈ ಭಂಗಿಯಲ್ಲಿ 15_20ಸೆಕೆಂಡುಗಳ ಕಾಲ ಸಾಮಾನ್ಯ ಉಸಿರಾಟದಿಂದ ನೆಲೆಸಬೇಕು.ಇದೆ ಭಂಗಿಯಲ್ಲಿಯ ಮೊದಲನೆಯ ಚಲನೆ.

5. ಆ ಬಳಿಕ ಉಸಿರನ್ನು ಹೊರಕ್ಕೆ ಬಿಟ್ಟು ಎಡಗಾಲನ್ನು ಹಿಗ್ಗಿಸಿ ನೇರವಾಗಿ ಮೇಲೆತ್ತಿ ಉಸಿರನ್ನು ಒಳಕ್ಕೆಳೆಯಬೇಕು.ಮತ್ತೆ ಉಸಿರನ್ನು ಹೊರದೂಡಿ,ಎತ್ತಿದ ಕಾಲನ್ನು ಮತ್ತಷ್ಟು ಹಿಂದಕ್ಕೆ ಜಗ್ಗಿ ಅದು ಎಡಕಿವಿಯನ್ನು ಮುಟ್ಟುವವರೆಗೂ ಸೆಳೆಯಬೇಕು. ಎರಡೂ ಉಂಗುಟಗಳು ಮೇಲೆ ಕೈಗಳ ಬಿಗಿತವನ್ನು ಸಡಿಲಿಸದೆ,  ಕಾಲಗಳನ್ನು ಅವುಗಳ ಸ್ಥಾನದಲ್ಲಿ ಹೀಗಿಟ್ಟಿರಬೇಕೇ ವಿನಾ, ಅವುಗಳನ್ನು ಮಂಡಿಗಳ ಬಳಿ ಬಗ್ಗಿಸಬಾರದು.ಈ ಎರಡನೆಯ ಚಲನೆಯಲ್ಲಿ ಸಮತೋಲನ ಸಾಧಿಸುವುದು ಕಲಿಯಲು ಸ್ವಲ್ಪ ಕಾಲಾವಕಾಶವು ಬೇಕು. ಈ ಭಂಗಿಯಲ್ಲಿಯೂ ಸಹ, ಸಾಮಾನ್ಯವಾಗಿ ಉಸಿರಾಡುತ್ತ 10,-15 ಸೆಕೆಂಡುಗಳ ಕಾಲ ನೆಲಸಬೇಕು.

6. ಇದಾದಮೇಲೆ, ಮತ್ತೆ ಉಸಿರನ್ನು ಹೊರಕ್ಕೆಬಿಟ್ಟು ಎಡಗಾಲನ್ನು  ಮಂಡಿಯ ಬಳಿ ಬಾಗಿಗಿಸಿ,ಮೂರನೇ ಸ್ಥಿತಿಯಲ್ಲಿ ತೋರಿಸಿರುವಂತೆ ಎಡಹಿಮ್ಮಡಿಯನ್ನು ಎಡಕಿವಿಯ ಬಳಿಗೆ ತರಬೇಕು. ಆ ಬಳಿಕ ಎಡಗಾಲನ್ನು ನೆಲಕ್ಕಿಳಿಸಿ  ಎರಡೂ ಕಾಲುಗಳನ್ನು ನೇರವಾಗಿ ಚಾಚಿಡಬೇಕು.

7. ಇದೇ ಬಗೆಯ ಭಂಗಿಯನ್ನು ಬಲಗಡೆಯಲ್ಲಯೂ ಅಭ್ಯಸಿಸಬೇಕು ಎಡಗಾಲನ್ನು ನೆಲದ ಮೇಲೆ ಚಾಚಿಟ್ಟು ಬಲಪಾದವನ್ನು ಊಂಗುಟದಲ್ಲಿ ಹಿಡಿದು ನೇರವಾಗಿ ಮೇಲಕ್ಕೆ ಸೆಳೆದು, ಬಲಕಿವಿಯವರೆಗೂ ಬರುವಂತೆ ಜಗ್ಗಬೇಕು. ಆದರೆ ಈ ಭಂಗಿಯಲ್ಲಿರುವವರೆಗೂ ಉಂಗುಟಗಳ ಮೇಲಿನ ಕೈ ಬಿಗಿತವನ್ನು ಮಾತ್ರ ಸಡಿಲಿಸಬಾರದು ಎರಡೂ ಪಕ್ಕಗಳ ಭಂಗಿಯಲ್ಲಿ ನೆಲೆಸುವ ಕಾಲ ಸಮವಾಗಿರಬೇಕು ಇದಾದ ಮೇಲೆ ಕೈಗಳನ್ನು ವಿಶ್ರಮಿಸಿಕೊಳ್ಳಬೇಕು .

ಪರಿಣಾಮಗಳು

        ಈ ಅಭ್ಯಾಸವು ಮಾಂಸ ಖಂಡಗಳನ್ನು ಬೇಕಾದಡೆಗೆ ತಿರುಗಿಸುವುದಕ್ಕೆ ಅನುಕೂಲ ಕಲ್ಪಿಸುತ್ತದೆ ಇದರಲ್ಲಿ ಈ ಕಿಬಟ್ಟೆಯೊಳಗಿನ ಮಾಂಸಖಂಡಗಳು ಕುಗ್ಗುವುದರಿಂದ ವಿಸರ್ಜನೆ ಸುಗಮವಾಗುತ್ತದೆ. ಅಲ್ಲದೆ ಟೊಕದ ಕೀಲುಗಳಲ್ಲಿಯ ಸಾಮಾನ್ಯವಾದಕೊಂಕುಗಳು ಇದರಿಂದ ಸರಿಯಾಗುವುದು ಮತ್ತು ಬೆನ್ನುಮೂಳೆಯ ತಳಭಾಗವು ಒಳ್ಳೆಯ ವ್ಯಾಯಾಮವನ್ನು ತನಾಗಿ ಪಡೆಯುವುದು.ಈ ಭಂಗಿಯಲ್ಲಿ ಒಂದು ರಮ್ಯತೆ ಅಡಗಿದೆ. ಅನಾಯಾಸವಾಗಿ ಆಸನವನ್ನು ಮಾಡಲು ಸಾಧ್ಯವಾಗುವವರೆಗೂ ಅಭ್ಯಾಸ ನೆಡಸಬೇಕು. ಪೂರ್ಣ ಹಿಡಿತ ಸಾಧಿಸಿದ ಆನಂತರ ಈ ಅಸನದಲ್ಲಿ ನುರಿತ ಬಿಲ್ಲುಗಾರನ್ನು ಬಿಲ್ಲಿನಿಂದ ಬಾಣವನ್ನು ಪ್ರಯೋಗಿಸುತ್ತಿರುವಂಥ ಭಂಗಿಯ ಸೊಬಗನ್ನು ಈ ಅಭ್ಯಾಸದಲ್ಲಿ ಕಾಣಬಹುದು.