ಮನೆ ರಾಜ್ಯ ಅಂಕೋಲಾ ಗುಡ್ಡ ಕುಸಿತ ಪ್ರಕರಣ: ಮತ್ತೆರಡು ಮೃತದೇಹ ಪತ್ತೆ: ಆರಕ್ಕೆರಿದ ಸಾವಿನ ಸಂಖ್ಯೆ

ಅಂಕೋಲಾ ಗುಡ್ಡ ಕುಸಿತ ಪ್ರಕರಣ: ಮತ್ತೆರಡು ಮೃತದೇಹ ಪತ್ತೆ: ಆರಕ್ಕೆರಿದ ಸಾವಿನ ಸಂಖ್ಯೆ

0

ಅಂಕೋಲಾ: ಶಿರೂರು ಗುಡ್ಡ ಕುಸಿತ ಪ್ರಕರಣದಲ್ಲಿ ಕಣ್ಮರೆಯಾಗಿದ್ದ ಬಾಲಕಿ ಅವಂತಿಕಾ ಮೃತದೇಹ ಹಾಗೂ ಇನ್ನೊಂದು ಪುರುಷನ ಮೃತದೇಹ ಪತ್ತೆಯಾಗಿದೆ ಎಂದು ತಿಳಿದಿದ್ದು, ಸಾವಿನ ಸಂಖ್ಯೆ ಇದೀಗ ಒಟ್ಟು ಆರಕ್ಕೆರಿದೆ.

Join Our Whatsapp Group

ಕಳೆದೆರಡು ದಿನಗಳ ಹಿಂದೆ ಒಂದೇ ಕುಟುಂಬದ ಐವರು ಗುಡ್ಡ ಕುಸಿತದಲ್ಲಿ ಕಣ್ಮರೆಯಾಗಿದ್ದರು. ಐವರ ಪೈಕಿ ಮೂವರ ಮೃತದೇಹ ಪತ್ತೆಯಾಗಿತ್ತು. ಇದೀಗ ಕುಟುಂಬದ ಬಾಲಕಿ ಅವಂತಿಕಾ ಮೃತದೇಹ ಕುಮಟಾ ತಾಲೂಕಿನ ಗಂಗೆ ಕೊಳ್ಳದ ಸಮುದ್ರ ತೀರದಲ್ಲಿ ಪತ್ತೆಯಗಿದೆ.

ಇನ್ನೊರ್ವ ಪುರುಷನ ಮೃತದೇಹ ಮಂಜುಗುಣಿಯ ಗಂಗಾವಳಿ ನದಿ ತೀರದಲ್ಲಿ ದೊರೆತಿದೆ.

ಈ ಹಿಂದೆ ಲಕ್ಷ್ಮಣ ನಾಯ್ಕ, ಹೆಂಡತಿ ಶಾಂತಿ ನಾಯ್ಕ, ಮಗ ರೋಶನ್ ನಾಯ್ಕ ಮತ್ತು ಚಾಲಕ ಸಿನವಣ್ಣನ ಸೇರಿ ನಾಲ್ಕು ಮೃತದೇಹ ಪತ್ತೆಯಾಗಿತ್ತು.