ಮನೆ ರಾಜ್ಯ ಬೀದಿ ಪೋಕರಿಯೊಬ್ಬ ನಾಡಿನ ಮಕ್ಕಳು ಏನು ಕಲಿಯಬೇಕೆಂದು ನಿರ್ಧರಿಸುವುದು ಕರ್ನಾಟಕದ ದೌರ್ಭಾಗ್ಯ: ಕಾಂಗ್ರೆಸ್‌ ಕಿಡಿ

ಬೀದಿ ಪೋಕರಿಯೊಬ್ಬ ನಾಡಿನ ಮಕ್ಕಳು ಏನು ಕಲಿಯಬೇಕೆಂದು ನಿರ್ಧರಿಸುವುದು ಕರ್ನಾಟಕದ ದೌರ್ಭಾಗ್ಯ: ಕಾಂಗ್ರೆಸ್‌ ಕಿಡಿ

0

ಬೆಂಗಳೂರು (Bengaluru)- ಶುದ್ಧ ಬೀದಿ ಪೋಕರಿಯೊಬ್ಬ ಇಡೀ ನಾಡಿನ ಮಕ್ಕಳು ಏನು ಕಲಿಯಬೇಕೆಂದು ನಿರ್ಧರಿಸುತ್ತಿರುವುದು ಕರ್ನಾಟಕದ ದೌರ್ಭಾಗ್ಯವೇ ಸರಿ ಎಂದು ಕಾಂಗ್ರೆಸ್ ಟೀಕಿಸಿದೆ.

ಈ ಬಗ್ಗೆ ಟ್ವೀಟ್‌ ಮಾಡಿರುವ ಕಾಂಗ್ರೆಸ್‌, ಶಿಕ್ಷಣ ತಜ್ಞರು ಇರಬೇಕಾದ ಜಾಗದಲ್ಲಿ ಕೊಳಕು ಮಂಡಲ ಹಾವಿನಂತಹಾ ಕೊಳಕು ವಿಷಕಾರಿ ವ್ಯಕ್ತಿಯನ್ನು ಕೂರಿಸಿದ್ದು, ಸರ್ಕಾರದ ಬೌದ್ಧಿಕ ದಿವಾಳಿತನವನ್ನು ತೋರಿಸುತ್ತದೆ ಎಂದಿದೆ.

ಕುವೆಂಪು ಅಂತವರಿಗೆ, ನಾಡಗೀತೆಗೆ, ನಾಡು ನುಡಿಗೆ ಅವಮಾನಿಸುವ ಈತ ಮಕ್ಕಳ ಕಲಿಕೆಯನ್ನು ನಿರ್ಧರಿಸುವುದಕ್ಕಿಂತ ಬೇರೆ ಅವಮಾನವಿದೆಯೇ? ಎಂದು ಪ್ರಶ್ನಿಸಿದೆ. ಕನಿಷ್ಠ ಪ್ರಜ್ಞಾವಂತಿಕೆ, ಪ್ರಬುದ್ಧತೆ ಇಲ್ಲದಿರುವ ಈತ ಇನ್ನೆಂತಹಾ ಪಠ್ಯ ಸೇರಿಸಬಹುದು. ಸರ್ಕಾರ ಕೂಡಲೇ ಈತನನ್ನು ಕಿತ್ತು ಹಾಕಬೇಕು. ಹಾಗೆಯೇ ಇತನಿಗಿಂತ ಕೊಳಕರನ್ನು ತಂದು ಕೂರಿಸದಿರಲಿ! ಎಂದು ಹೇಳಿದೆ.

ಸುಳ್ಳು ತಜ್ಞ, ಬಿಜೆಪಿಯ ಬಾಡಿಗೆ ಭಾಷಣಕಾರನೊಬ್ಬನ ಬರಹವನ್ನು ಪಠ್ಯ ಪುಸ್ತಕದಲ್ಲಿ ಸೇರಿಸಿದ ಸರ್ಕಾರಕ್ಕೆ ಕನಿಷ್ಠ ಮಾರ್ಯಾದೆಯೂ ಇಲ್ಲದಾಗಿದೆ. ಬಿಜೆಪಿ ಮಾಜಿ ಮುಖ್ಯಮಂತ್ರಿ ಸದಾನಂದಗೌಡ ಅವರಿಂದ “ದೇಶದ್ರೋಹಿ” ಬಿರುದು ಪಡೆದಿದ್ದ ಆತ. ದೇಶ ದ್ರೋಹಿಯೊಬ್ಬನ ಬರಹವನ್ನು ಪಠ್ಯದಲ್ಲಿ ಅಳವಡಿಸುವುದು ದೇಶದ್ರೋಹವಲ್ಲವೇ? ಬಿಜೆಪಿ ಉತ್ತರಿಸುವುದೇ? ಎಂದು ಪ್ರಶ್ನಿಸಿದೆ.

ಶಿಕ್ಷಣ ಸಚಿವರೇ, ಪಠ್ಯ ಪುಸ್ತಕ ಸಮಿತಿಯ ಫೋಕರಿ ಅಧ್ಯಕ್ಷನನ್ನು ಸಮರ್ಥಿಸುತ್ತಾ ಸಿಇಟಿ ಪ್ರೊಫೆಸರ್ ಆಗಿದ್ದರು ಎಂದಿದ್ದೀರಿ. ಸಿಇಟಿ ಯೂನಿರ್ವಸಿಟಿ ಇದೆಯೇ? ಎಲ್ಲಿದೆ? ಅಥವಾ ವಾಟ್ಸಾಪ್ ಯೂನಿವರ್ಸಿಟಿ ರೀತಿ ಅದೂ ನಿಮ್ಮ ಪ್ರೊಫೆಗಂಡಾ ಯೂನಿವರ್ಸಿಟಿಯೇ? ಎಂಬುದನ್ನು ಸ್ಪಷ್ಪಪಡಿಸಿ. ಇಲ್ಲದಲ್ಲಿ ಶಿಕ್ಷಣ ಇಲಾಖೆ ಶತಮೂರ್ಖರ ಕೈಯಲ್ಲಿದೆ ಎಂದು ಒಪ್ಪಿಕೊಳ್ಳಿ ಎಂದು ಕಾಂಗ್ರೆಸ್ ಕಿಡಿಕಾರಿ ಟ್ವೀಟ್‌ ಮಾಡಿದೆ.

ಇನ್ನು ಶಿಕ್ಷಣ ಇಲಾಖೆಯಿಂದ ರಾಷ್ಟ್ರಕವಿ ಕುವೆಂಪು ಅವರಿಗೆ ಅವಮಾನವಾಗಿರುವ ಕುರಿತು ಟ್ವೀಟ್ವ ಮಾಡಿರುವ ಕಾಂಗ್ರೆಸ್‌, ಕುವೆಂಪು ಈ ನಾಡಿಗೆ, ದೇಶಕ್ಕೆ ಮಾತ್ರವಲ್ಲ, ಇಡೀ ಜಗತ್ತಿಗೆ ಸ್ಪೂರ್ತಿಯ ಸೆಲೆಯಾದವರು. ಲೇಖಕರ ಪರಿಚಯದಲ್ಲಿ ಸಂಘ ಸಿದ್ದಾಂತ ಪ್ರತಿಪಾದಕರನ್ನು ವಿಜೃಂಭಿಸಿ, ರಾಷ್ಟ್ರಕವಿಯನ್ನು ಕೇವಲವಾಗಿ ಬಿಂಬಿಸಿದ ಬಿಜೆಪಿ ತನ್ನ ಆಂತರ್ಯದಲ್ಲಿನ ಕುವೆಂಪು ದ್ವೇಷವನ್ನು ಅನಾವರಣಗೊಳಿಸಿದೆ. RSSನ ಮುಖವಾಣಿ ಪತ್ರಿಕೆಗಳಂತವನ್ನು ಪಠ್ಯಪುಸ್ತಕವೆಂದು ಒಪ್ಪಲಾಗದು ಎಂದಿದೆ.

ನಾಲ್ಕನೇ ತರಗತಿ ಪಠ್ಯದಲ್ಲಿ ಕುವೆಂಪು ಅನೇಕರ ಪ್ರೋತ್ಸಾಹದಿಂದ ಪ್ರಖ್ಯಾತಿ ಆಗಿದ್ದಾರೆ ಎಂದು ಮುದ್ರಣವಾಗಿದೆ. ತಪ್ಪಾಗಿ ಮುದ್ರಣಗೊಂಡಿರುವ ಸಾಲುಗಳ ಫೋಟೋ ವೈರಲ್‌ ಆಗಿದೆ. ಇದಕ್ಕೆ ಎಲ್ಲರೂ ಅಸಮಾಧಾನ ವ್ಯಕ್ತಪಡಿಸಿದ್ದಾರೆ.