ಮನೆ ದೇವರನಾಮ ಸಹ್ಯಾದ್ರಿ ತಪ್ಪಲಿನಲ್ಲಿ ಹಸಿರು

ಸಹ್ಯಾದ್ರಿ ತಪ್ಪಲಿನಲ್ಲಿ ಹಸಿರು

0

ಸಹ್ಯಾದ್ರಿ ತಪ್ಪಲಲ್ಲಿ ಹಸಿರು ಪಚ್ಚೆಯ ನೆಲದಿ ||
ಗಂಗಾ ಮೂಲದ ಪಂಚ ನದಿಯ ಪರಿಸರದಲಿ |
ಅದ್ವೈತ ಸಿದ್ಧಾಂತ ಔನತ್ಯ ನೆಲೆನಿಂತ||
ರಮ್ಯಾ ಶೃಂಗೇರಿ ಇದು ಶ್ರೀ ಭವ್ಯ ಪೀಠ || ಸಹ್ಯಾದ್ರಿ ||

ಎಲ್ಲೋ ನೋಡಿದ ನೆನಪು||
ಮರೆಯಲಾಗದ ಹೊಳಪು
ಸುತ್ತ ಚೇತನವಿಂದು ಮೇರೆಯನು ದಾಟಿಯಿಹುದು ||
ಸಪ್ತ ಸ್ವರಗಳ ಸಿರಿಯಾ ಲಹರಿಗಳನಿಳಿಸುತಾ ||
ಈ ತಾಯಿ ಶಾರದೇಯು ದರುಶನವ ನೀಡಿಯಿಹಳು ||ಸಹ್ಯಾದ್ರಿ ||

ಬೆಳಕಾಗಿ ಅರಳುತ್ತ ಜಗರ ಬೆಲೆ ಗುತ್ತಿವುದು ||
ಬೆಳಕು ಬೆಳಗ ಇಲ್ಲಿ ಜಗವ ಆಳ್ಳುತ್ತಿರುವುದು |
ಬೆಳಕಾಗಿ ಅರಳುತ್ತಾ ಜಗವ ಬೆಳಗುತ್ತಿಹುದು |
ಬೆಳಕು ಬೆಳ ಇಲ್ಲಿ ಜಗವ ಆಳುತ್ತಿಹುದು |
ಕತ್ತಲೆಂಬುದೆ ಇಲ್ಲ ಬೆಳಕು ಬೆಳಕೆ ಎಲ್ಲಾ ||
ನೀ ತಾಯ ದರುಶನವನು ಪಡೆದವನೆ ಧನ್ಯ|| ಸಹ್ಯಾದ್ರಿ ||