ಮನೆ ಸುದ್ದಿ ಜಾಲ ಪ.ಬಂಗಾಳದಲ್ಲಿ ; ಬಿಜೆಪಿ ಪಕ್ಷ ಗೆದ್ದ ಒಂದೇ ನಿಮಿಷದಲ್ಲಿ 21 ವರ್ಷದಿಂದ ಮುಚ್ಚಿದ್ದ ದುರ್ಗಾ ಮಂದಿರ ಓಪನ್

ಪ.ಬಂಗಾಳದಲ್ಲಿ ; ಬಿಜೆಪಿ ಪಕ್ಷ ಗೆದ್ದ ಒಂದೇ ನಿಮಿಷದಲ್ಲಿ 21 ವರ್ಷದಿಂದ ಮುಚ್ಚಿದ್ದ ದುರ್ಗಾ ಮಂದಿರ ಓಪನ್

0

ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯ ಫಲಿತಾಂಶ ರಾಜ್ಯದ ರಾಜಕೀಯ ಇತಿಹಾಸದಲ್ಲಿ ಹೊಸ ಶಕೆಯನ್ನು ಆರಂಭಿಸಿದೆ ಎನ್ನಲಾಗಿದೆ. ಈ ಬದಲಾವಣೆಯ ಅಲೆ ಈಗ ಕೇವಲ ವಿಧಾನಸಭೆಗೆ ಸೀಮಿತವಾಗದೆ, ದಶಕಗಳ ಕಾಲ ಬೀಗ ಹಾಕಲ್ಪಟ್ಟಿದ್ದ ನಂಬಿಕೆ ಮತ್ತು ಸಂಪ್ರದಾಯಗಳ ಕದವನ್ನೂ ತೆರೆದಿದೆ. ಪಶ್ಚಿಮ ಬಂಗಾಳದ ಆಸನ್ಸೋಲ್‌ನ ಬಸ್ಟಿನ್ ಬಜಾರ್ ಪ್ರದೇಶದಲ್ಲಿರುವ ಐತಿಹಾಸಿಕ ‘ಶ್ರೀ-ಶ್ರೀ ದುರ್ಗಾಮಾತಾ ಚಾರಿಟಬಲ್ ಟ್ರಸ್ಟ್’ ಮಂದಿರವು 21 ವರ್ಷಗಳ ದೀರ್ಘ ಕಾಯುವಿಕೆಯ ನಂತರ ಈಗ ಪ್ರತಿದಿನದ ಪೂಜೆಗಾಗಿ ಸಂಪೂರ್ಣವಾಗಿ ಮುಕ್ತವಾಗಿದೆ ಎನ್ನಬಹುದು.

ಈ ಕುರಿತು ಬಸ್ಟಿನ್ ಬಜಾರ್‌ನ ಈ ದುರ್ಗಾ ಮಂದಿರವು ಸ್ಥಳೀಯರ ಆರಾಧ್ಯ ದೈವ. ಆದರೆ, ಕಳೆದ ಎರಡು ದಶಕಗಳಿಂದ ಈ ಮಂದಿರವು ಸ್ಥಳೀಯ ಕೋಮು ಉದ್ವಿಗ್ನತೆ ಮತ್ತು ರಾಜಕೀಯ ಹಿತಾಸಕ್ತಿಗಳ ಸಂಘರ್ಷಕ್ಕೆ ಸಿಲುಕಿತ್ತು. ಕೇವಲ ವರ್ಷಕ್ಕೆ ಎರಡು ಬಾರಿ—ದುರ್ಗಾ ಪೂಜೆ ಮತ್ತು ಲಕ್ಷ್ಮಿ ಪೂಜೆಯ ಸಂದರ್ಭದಲ್ಲಿ ಮಾತ್ರ 10 ದಿನಗಳ ಕಾಲ ಈ ಮಂದಿರದ ಬಾಗಿಲು ತೆರೆಯಲಾಗುತ್ತಿತ್ತು. ಉಳಿದ ದಿನಗಳಲ್ಲಿ ಭಕ್ತರು ಮಂದಿರದ ಹೊರಗಿನಿಂದಲೇ ದೇವಿಗೆ ನಮಸ್ಕರಿಸಿ ಹೋಗಬೇಕಾದ ಅನಿವಾರ್ಯತೆ ಇತ್ತು. 21 ವರ್ಷಗಳ ಕಾಲ ಈ ಮಂದಿರಕ್ಕೆ ಬೀಗ ಹಾಕಲಾಗಿತ್ತು ಎನ್ನಲಾಗಿದೆ. ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಪಶ್ಚಿಮ ಬರ್ಧಮಾನ್ ಜಿಲ್ಲೆಯ ಎಲ್ಲಾ 9 ಸ್ಥಾನಗಳಲ್ಲಿ ಭಾರತೀಯ ಜನತಾ ಪಕ್ಷವು ಭರ್ಜರಿ ಜಯ ದಾಖಲಿಸಿದೆ. ಆಸನ್ಸೋಲ್ ಉತ್ತರ ಕ್ಷೇತ್ರದಿಂದ ನೂತನವಾಗಿ ಆಯ್ಕೆಯಾದ ಬಿಜೆಪಿ ಶಾಸಕ ಕೃಷ್ಣೇಂದು ಮುಖರ್ಜಿ ಅವರು ಚುನಾವಣಾ ಪ್ರಚಾರದ ವೇಳೆ ಭಕ್ತರಿಗೆ ಒಂದು ಪ್ರಮುಖ ಭರವಸೆ ನೀಡಿದ್ದರು ಎನ್ನಲಾಗಿದೆ.

ಹಾಗಾಗಿ  ‘ನಾವು ಗೆದ್ದರೆ ಮಂದಿರದ ಮೇಲಿರುವ ರಾಜಕೀಯ ಬೀಗವನ್ನು ಕಿತ್ತೆಸೆಯುತ್ತೇವೆ ಮತ್ತು ವರ್ಷದ 365 ದಿನಗಳೂ ಮಂದಿರವನ್ನು ಸಾರ್ವಜನಿಕರಿಗೆ ಮುಕ್ತಗೊಳಿಸುತ್ತೇವೆ’ ಎಂದು ಘೋಷಿಸಿದ್ದರು. ಫಲಿತಾಂಶ ಹೊರಬಿದ್ದ ಬೆನ್ನಲ್ಲೇ, ಮುಖರ್ಜಿ ಅವರು ಮಂದಿರಕ್ಕೆ ಭೇಟಿ ನೀಡಿ, ತಾವೇ ಖುದ್ದಾಗಿ ಕದ ತೆರೆಯುವ ಮೂಲಕ ಆ ಭರವಸೆಯನ್ನು ಈಡೇರಿಸಿದ್ದಾರೆ.  ಇದರಿಂದ ಮಂದಿರದ ಕದ ತೆರೆಯುತ್ತಿದ್ದಂತೆ ಇಡೀ ಬಸ್ಟಿನ್ ಬಜಾರ್ ಪ್ರದೇಶದಲ್ಲಿ ಹಬ್ಬದ ವಾತಾವರಣ ಮನೆಮಾಡಿತ್ತು. ಶಂಖನಾದ ಮತ್ತು ಜಯಘೋಷಗಳ ನಡುವೆ ಸಾವಿರಾರು ಭಕ್ತರು ಮಂದಿರ ಪ್ರವೇಶಿಸಿದರು. ದಶಕಗಳ ಕಾಲದ ಕಾಯುವಿಕೆ ಮುಗಿದ ನೆಮ್ಮದಿಯಲ್ಲಿ ಅನೇಕ ವೃದ್ಧ ಭಕ್ತರ ಕಣ್ಣಲ್ಲಿ ಆನಂದಬಾಷ್ಪ ಹರಿಯಿತು. ಈ ಭಾವನಾತ್ಮಕ ಕ್ಷಣದ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿವೆ. ‘ಇದು ಕೇವಲ ರಾಜಕೀಯ ವಿಜಯವಲ್ಲ, ಇದು ನಮ್ಮ ಧಾರ್ಮಿಕ ಹಕ್ಕಿನ ಮರುಸ್ಥಾಪನೆ’ ಎಂದು ಸ್ಥಳೀಯರು ಸಂಭ್ರಮ ಹಂಚಿಕೊಂಡಿದ್ದಾರೆ ಎನ್ನಬಹುದು.