ಮನೆ ಯೋಗಾಸನ ಬದ್ಧಹಸ್ತ ಶೀರ್ಷಾಸನ

ಬದ್ಧಹಸ್ತ ಶೀರ್ಷಾಸನ

0

       ‘ಬದ್ಧ’ವೆಂದರೆ  ಕಟ್ಟಲ್ಪಟ್ಟ ತಡೆಹಿಡಿದ, ಹಿಡಿತಕ್ಕೆ ಸಿಕ್ಕಿದ :ಹಸ್ತ= ಕೈ.  ಆಸನಭಂಗಿಯು ‘ಶ್ರೀರ್ಷಾಸನ’ದಲ್ಲಿ ಸ್ವಲ್ಪ ವ್ಯತ್ಯಾಸ ಮಾಡಿರುವಂಥದು.

    ಅಭ್ಯಾಸ ಕ್ರಮ

1. ಮೊದಲು ಹಾಸಿದ ಜಮಖಾನವನ್ನು ನಾಲ್ಕು ಮಡಿಕೆ ಹಾಕಿ, ಅದನ್ನು ನೆಲದ ಮೇಲೆ ಹಾಸಿ,ಅದರ ಬಳಿ ಮಂಡಿಯನ್ನೂರಿ ಕುಳಿತುಕೊಳ್ಳಬೇಕು.

2. ಬಳಿಕ, ತೋಳುಗಳನ್ನು ಎದೆಯ ಮುಂಗಡೆಗೆ ಬರುವಂತೆ  ಒಂದರ ಮೇಲೊಂದು ಜೋಡಿಸಿ, ಬಲ ಮೇಲ್ದೋಳನ್ನು  ಬಲಮೊಣ ಕೈ ಸಮೀಪದಲ್ಲಿಯೂ., ಹಾಗೆಯೇ ಬಲಗೈಯಿಂದ ಎಡ ಮೇಲ್ದೋಳನ್ನು ಎಡಗೈ ಸಮೀಪದಲ್ಲಿಯೂ ಹಿಡಿದುಕೊಳ್ಳಬೇಕು .

3. ಆಮೇಲೆ, ಮೊಣಕೈಗಳನ್ನು ಮತ್ತು ಒಂದನ್ನೂಂದು ಹಿಡಿದುಕೊಳ್ಳಲು ಮಂಡಿಸಿಟ್ಟ ಮುಂದೋಳುಗಳನ್ನೂ ಜಮಖಾನದ ಮಡಿಕೆಯ ಮೇಲಿಟ್ಟು ಮುಂದಕ್ಕೆ ಬಾಗಿ ನಡುನೆತ್ತಿಯನ್ನೂ ಮಡಿಕೆಯ ಮೇಲೆ ತೋಳ್ಮಡಿಕೆಯಿಂದ ಸ್ವಲ್ಪ ಆಚೆ ಇರಿಸಬೇಕು. ಆಗ ಮುಂದಲೆಯನ್ನು ಅಂದರೆ ಹಣೆಯ ಭಾಗವನ್ನು ಸ್ವಲ್ಪ ಹಿಂದಕ್ಕೆ ಇಡಬೇಕು.

4. ಈಗ ಮಂಡಿಗಳನ್ನು ನೆಲದ ಮೇಲೆ ಮೇಲೆತ್ತಿ, ಕಾಲುಗಳನ್ನು ನೀಳವಾಗಿ ಇಗ್ಗಿಸಿಡಬೇಕು.

5. ದೇಹದ ಭಾರವನ್ನು ತಲೆಗೂ ಮುಂದೋಳುಗಳಿಗೂ  ವಹಿಸಿದ ಬಳಿಕ, ಮುಂದೋಳುಗಳನ್ನು ಕೆಳಕ್ಕೆ ಒತ್ತಿಹಿಡಿದು,ಉಸಿರನ್ನು ಹೊರ ಹೋಗಿಸಿ,ಕೈಗಳ ಬಂದವನು ಸಡಿಲಿಸದೆ  ಮುಂಡ ಭಾಗವನ್ನು ಮೆಲ್ಲಗೆ ಸ್ವಲ್ಪ ಹಿಂದಕ್ಕೆ ತಳ್ಳಿ  ಕಾಲುಗಳನ್ನು ಜೊತೆಯಲ್ಲಿಯೇ ನೆಲದಿಂದ ಮೇಲ್ಗೆಳೆದು ಎತ್ತಬೇಕು.

6. ಕಾಲುಗಳನ್ನು ನೆಲಕ್ಕೆ ಲಂಬವಾಗಿರಿಸಲು ಮೇಲ್ದಿಕ್ಕಿಗೆ ಸರಿಸುತ್ತಿರುವಾಗ ಕುತ್ತಿಗೆ ಮಾತ್ರ ದೇಹದ ಭಾರವನ್ನು ಹೊರುವುದರಿಂದ ಅದಕ್ಕೆ ಒತ್ತಡದ ಶ್ರಮವಾಗುವುದು ಆದುದರಿಂದ ಕತ್ತು, ಮುಂಧೋಳುಗಳ ಹಿಂಬದಿಗಳನ್ನು ಹಗುರವಾಗುವವರೆಗೂ, ಕಾಲುಗಳನ್ನು ಮೇಲೆತ್ತಿ ಮುಂಡಯಲ್ಲಿಯ ಬೆನ್ನ ಬಳಿಯ ಎದೆಯಭಾಗವನ್ನು ಮುಂಗಡಗೆ ಹಿಗ್ಗಿಸಬೇಕು. ಈ ಭಂಗಿಯಲ್ಲಿ ಹಗುರತೆಯು ಕಂಡುಬಂದಂತೆ ದೇಹವು ನೇರವಾಗಿ ನಿಂತಿರುವುದೆಂಬುದು ನಿಶ್ಚಯ. ಇನ್ನೂ ಮುಂದೆ ದೇಹವನ್ನು ಸಮತೋಲನ ಭಂಗಿಯಲ್ಲಿರಿಸಲು, ಸಾಲಂಬ ಶೀರ್ಷಾಸನ ಒಂದರಲ್ಲಿ ವಿವರಿಸಿರುವ ತಂತ್ರವನ್ನು ಸೂಚನೆಗಳನ್ನು ಸರಿಯಾಗಿ ಅನುಸರಿಸಬೇಕು.

7. ಆ ಬಳಿಕ,ತಲೆಯಮೇಲೆ ಸಮತೋಲನದ ನಿಲುವನ್ನು ಒಂದು ನಿಮಿಷದ ಕಾಲ ನಿಲ್ಲಿಸಬೇಕು.ಆನಂತರ ಉಸಿರನ್ನು ಹೊರದೂಡಿ, ಮೊಣಕೈಗಳನ್ನು ಮೇಲೆತ್ತದೆಯೇ ಟೊಂಕಗಳನ್ನು ಸ್ವಲ್ಪ ಹಿಂದಕ್ಕೆ ಸೆಳೆದು  ಮೆಲ್ಲಗೆ ಕಾಲುಗಳನ್ನು ನೆಲದ ಮೇಲೆ ಇಳಿಸಬೇಕು.ಹೀಗೆ ಕಾಲುಗಳನ್ನಿಳಿಸುವಾಗ ಅವುಗಳನ್ನು ಮಂಡಿಗಳಲ್ಲಿ ಭಾಗಿಸದೆ  ನೇರವಾಗಿರಿಸಲು ಆದಷ್ಟು ಯತ್ನಿಸಬೇಕು.